ತಾಯಂದಿರು ಮಕ್ಕಳಿಗೆ ಸಂಸ್ಕಾರ ನೀಡಿ ಸಮಾಜಕ್ಕೆ ಸತ್‌ಪ್ರಜೆಗಳನ್ನಾಗಿ ರೂಪಿಸಿ, ಅವರ ಬಾಳಿಗೆ ಬೆಳಕಾಗಬೇಕು. ದೇವರಿಗೆ ದೀಪ ಹಚ್ಚುವುದು ಕಡಿಮೆ ಮಾಡಿದರೂ ಚಿಂತೆಯಿಲ್ಲ
ಯಲಬುರ್ಗಾ: ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ನವಲಗುಂದ ಗವಿಮಠದ ಶ್ರೀಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂಗನಹಾಳ ಗ್ರಾಮದ ಶ್ರೀ ಸಂಗಮೇಶ್ವರ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಭಕ್ತಿ ಹಿತ ಚಿಂತನಾ ಗೋಷ್ಠಿಯಲ್ಲಿ ಎರಡನೇ ದಿನ ಮಹಿಳಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ತಾಯಂದಿರು ಮಕ್ಕಳಿಗೆ ಸಂಸ್ಕಾರ ನೀಡಿ ಸಮಾಜಕ್ಕೆ ಸತ್‌ಪ್ರಜೆಗಳನ್ನಾಗಿ ರೂಪಿಸಿ, ಅವರ ಬಾಳಿಗೆ ಬೆಳಕಾಗಬೇಕು. ದೇವರಿಗೆ ದೀಪ ಹಚ್ಚುವುದು ಕಡಿಮೆ ಮಾಡಿದರೂ ಚಿಂತೆಯಿಲ್ಲ ಮಕ್ಕಳ ಬಾಳಿನಲ್ಲಿ ದೀಪ ಹಚ್ಚಿ ಬಾಳು ಬೆಳಕಾಗಿಸಬೇಕು. ಸಾವಿತ್ರಿ ಬಾಯಿ ಫುಲೆ, ಕಿತ್ತೂರು ರಾಣಿ ಚೆನ್ನಮ್ಮ, ಇಟಗಿಯ ಭೀಮಾಂಬಿಕೆ, ಅಕ್ಕ ಮಹಾದೇವಿಯರ ಬದುಕಿನ ಆದರ್ಶಗಳು ಮಹಿಳೆಯರಿಗೆ ಆದರ್ಶವಾಗಬೇಕು ಎಂದರು.
ಸೋಮಸಮುದ್ರದ ಶಾಖಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಸಂಗನಬಸವೇಶ್ವರ ಮಠದ ಶ್ರೀಕೊಟ್ಟೂರು ಸ್ವಾಮೀಜಿ, ಶ್ರೀ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಗಣ್ಯರಾದ ಸಿದ್ಧಲಿಂಗಯ್ಯ ಶಾಸ್ತ್ರಿ, ಶರಣಪ್ಪ ಕವಳಕೇರಿ, ಶರಣಪ್ಪ ಶಿವರಡ್ಡಿ, ಎಚ್.ಎಸ್. ಶಿದ್ದರಡ್ಡಿ, ಗುರುಮೂರ್ತಿ ಪತ್ತಾರ, ಶಿವಮೂರ್ತೆಪ್ಪ ತೋಟಗಂಟಿ, ಜಗದೀಶ ಹಿರೇಮಠ, ಶಶಿಧರ ಹೊಸಮನಿ, ಉಮೇಶಗೌಡ ದೇಸಾಯಿಗೌಡ್ರ, ಅಂದಪ್ಪ ಸೊಂಪುರ, ಶರಣಪ್ಪ ಅಡವಳ್ಳಿ, ಅಂದಾನಪ್ಪ ಹೊಸಂಗಡಿ ಸೇರಿದಂತೆ ಮತ್ತಿತರರು ಇದ್ದರು.