ಸಾರಾಂಶ
ಮತ್ತಿಗೋಡುನಲ್ಲಿರುವ ಸಾಕಾನೆ ಶಿಬಿರಕ್ಕೆ ಶಾಸಕ ಪೊನ್ನಣ್ಣ ಮತ್ತು ಕೊಡಗು ಭೇಟಿಯಲ್ಲಿರುವ ಸಂಸದ ಅಜಯ್ ಮಾಕನ್ ಭೇಟಿ ನೀಡಿದರು. 
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ್ತಿಗೋಡು ನಲ್ಲಿರುವ ಸಾಕಾನೆ ಶಿಬಿರಕ್ಕೆ ಮಂಗಳವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು*ಹಾಗೂ ಕೊಡಗು ಭೇಟಿಯಲ್ಲಿರುವ ಸಂಸದರಾದ ಅಜಯ್ ಮಾಕನ್ ಅವರು ಭೇಟಿ ನೀಡಿದರು.ಶಾಸಕರ ಆಹ್ವಾನದ ಮೇರೆಗೆ ಕೊಡಗು ಪ್ರವಾಸದಲ್ಲಿರುವ ಅಜಯ್ ಮಾಕನ್ ರವರು ಸಾಕಾನೆ ಶಿಬಿರಕ್ಕೆ ಶಾಸಕರೊಂದಿಗೆ ವೀಕ್ಷಣೆಗೆ ತೆರಳಿದರು.
ಸಾಕಾನೆ ಶಿಬಿರದಲ್ಲಿ ಇರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಶಾಸಕರು, ಶಿಬಿರದ ಅಧಿಕಾರಿಗಳು ಹಾಗೂ ಪರಿಚಾರಕರೊಂದಿಗೆ ಮಾತನಾಡಿದರು. ಸಾಕಾನೆ ಶಿಬಿರದಲ್ಲಿ ಸದ್ಯಕ್ಕೆ ಇರುವ ಆನೆಗಳ ಸಂಖ್ಯೆಯ ಬಗ್ಗೆ ವಿವರ ಪಡೆದ ಶಾಸಕರು, ಸಲಹೆಗಳನ್ನು ನೀಡಿದರು. ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ತಿತಿಮತಿ ವಲಯ ಅಧ್ಯಕ್ಷರು ನವೀನ್, ದೇವರಪುರ ವಲಯ ಅಧ್ಯಕ್ಷರು ಬಸ್ ವಂತ್, ಕಾಂಗ್ರೆಸ್ ಪ್ರಮುಖರಾದ ಬೆನ್ನಿ, ಪಂಕಜ, ಹರೀಶ್ ಪೂವಯ್ಯ, ಚಿಣ್ಣಪ್ಪ, ಎ ಜೆ ಬಾಬು, ರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಯುವ ಅಧ್ಯಕ್ಷರಾದ ಪಟ್ಟಡ ರಕ್ಷಿತ್ ಚಂಗಪ್ಪ, ಸೋಮಣ್ಣ, ಅಲಿರ ರಶೀದ್, ಸಂತೋಷ್, ಕುಂಡಚೀರ ಮಂಜು ದೇವಯ್ಯ, ಚೆಕು, ಅನಿಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))