ಸಾರಾಂಶ
ಮೂಲ್ಕಿ ನಗರ ಮಂಡಲದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗುರುವಾರ ಮೂಲ್ಕಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿತ್ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವ ನೆರವೇರಿತು.
ಮೂಲ್ಕಿ: ಕಳೆದ ನೂರು ವರ್ಷಗಳಲ್ಲಿ ಸಂಘ ಪರಿವಾರ ಅನೇಕ ಸಾಧನೆಗಳನ್ನು ಮಾಡಿದ್ದು, ಹಿಂದುತ್ವ ಸ್ವಾಭಿಮಾನದ ಸಂಕೇತವಾಗಿದ್ದರಿಂದ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಸಮಾಜದಲ್ಲಿ ರಾಷ್ಟ್ರ ಭಾವನೆ ಕಾಣುತ್ತಿದ್ದು ಹಿಂದೂ ಅಸ್ಮಿತೆಯಿಂದ ಸ್ವಾಭಿಮಾನ, ರಾಷ್ಟ್ರ ಭಾವನೆ ಮಾತೃಭೂಮಿ ಜಾಗರಣೆ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಜೇಶ್ ದೇವರ ಕಾನ ಹೇಳಿದ್ದಾರೆ.
ಮೂಲ್ಕಿ ನಗರ ಮಂಡಲದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗುರುವಾರ ಮೂಲ್ಕಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನಡೆದ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶ ವಿಭಜನೆಯಾಗಿ ಹಿಂದುಗಳ ಮೇಲೆ ದೌರ್ಜನ್ಯವಾಗುವಾಗ ಸಂಘ ಆಶಾಕಿರಣವಾಗಿದೆ. ಬಳಿಕ ಗೋ ಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣ ಮತ್ತಿತರ ಅಭಿಯಾನದಿಂದ ಸಂಘದ ಚಟುವಟಿಕೆ ಗರಿಗೆದರಿ ಹಳ್ಳಿಗಳಲ್ಲಿ ಸಂಘ ಪರಿವಾರ ವಿಸ್ತಾರವಾಯಿತೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಶೆಟ್ಟಿ ವಹಿಸಿದ್ದರು.ಸಂಘದ ಜಿಲ್ಲಾ ಸಂಘ ಚಾಲಕ ವೈ ಎನ್ ಸಾಲ್ಯಾನ್ ಉಪಸ್ಥಿತರಿದ್ದರು. ಮೂಲ್ಕಿ ಪರಿಸರದ ಬಪ್ಪನಾಡು, ಕಾರ್ನಾಡು, ಮಾನಂಪಾಡಿ, ಚಿತ್ರಾಪು ಗ್ರಾಮದ ಸ್ವಯಂಸೇವಕ ಬಂಧುಗಳು ಪೂರ್ಣ ಗಣವೇಷದೊಂದಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.