ಸಾರಾಂಶ
ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಬಡಗನ್ನೂರು ಗ್ರಾಮವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ರು. ೫ ಲಕ್ಷ ಬಹುಮಾನ ಹಾಗೂ ಈಶ ಪ್ರಶಸ್ತಿ ಗೆದ್ದ ಶಾಸ್ತಾರ ಪಡುಮಲೆ ಮಹಿಳಾ ತಂಡಕ್ಕೆ ಊರವರಿಂದ ಅದ್ಧೂರಿ ಮೆರವಣಿಗೆಯೊಂದಿಗೆ ಗೌರವ ಸಮರ್ಪಸಲಾಯಿತು.
ಪುತ್ತೂರು: ಈಶ ಗ್ರಾಮೋತ್ಸವದ ಅಂಗವಾಗಿ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಬಡಗನ್ನೂರು ಗ್ರಾಮವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ರು. ೫ ಲಕ್ಷ ಬಹುಮಾನ ಹಾಗೂ ಈಶ ಪ್ರಶಸ್ತಿ ಗೆದ್ದ ಶಾಸ್ತಾರ ಪಡುಮಲೆ ಮಹಿಳಾ ತಂಡಕ್ಕೆ ಊರವರಿಂದ ಅದ್ಧೂರಿ ಮೆರವಣಿಗೆಯೊಂದಿಗೆ ಗೌರವ ಸಮರ್ಪಸಲಾಯಿತು.
ಮಾಣಿ-ಮೈಸೂರು ಹೆದ್ದಾರಿಯ ಕೌಡಿಚ್ಚಾರ್ ಜಂಕ್ಷನ್‌ನಿಂದ ಎರಡು ತೆರೆದ ಜೀಪುಗಳಲ್ಲಿ ಕ್ರೀಡಾಳುಗಳನ್ನು ವಾಹನಗಳ ಮೆರವಣಿಗೆಯ ಮೂಲಕ ೫ ಕಿ.ಮೀ. ದೂರದ ಪಟ್ಟೆ ವಿದ್ಯಾಸಂಸ್ಥೆ ತನಕ ಕರೆತರಲಾಯಿತು. ಅಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬ್ಯಾಂಡ್ ಮೇಳ, ಸಿಡಿಮದ್ದು ಗಮನ ಸೆಳೆಯಿತು.ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳು, ಶ್ರೀಕೃಷ್ಣ ಯುವಕ ಮಂಡಲ, ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ, ಎಸ್.ಕೆ. ಫ್ರೆಂಡ್ಸ್ ಮುಡುಪಿನಡ್ಕ, ನವಚೈತನ್ಯ ಯುವಕ ಮಂಡಲ ಪೆರಿಗೇರಿ ವತಿಯಿಂದ ಕಾರ್ಯಕ್ರಮ ನಡೆಯಿತು.
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಸಂಚಾಲಕ ವಿಘ್ನೇಶ್ ಹಿರಣ್ಯ, ಕರ್ನಾಟಕ ವಾಲಿಬಾಲ್ ತಂಡದ ಮಾಜಿ ನಾಯಕ ಗಣೇಶ್ ಮುಂಡಾಸು, ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ಗುರುಪ್ರಸಾದ್ ಉಳಯ, ಗ್ರಾ.ಪಂ.ಸದಸ್ಯ ಲಿಂಗಪ್ಪ ಗೌಡ ಮೋಡಿಕೆ, ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘದ ಅನೂಪ್ ಪೆರಿಗೇರಿ ಸೇರಿದಂತೆ ಹಲವು ಮಂದಿ ಪಾಲ್ಗೊಂಡರು. ಇಶಾ ಸಂಸ್ಥೆಯ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.