ಮೂಲ್ಕಿ: ಚರ್ಚ್‌ ಧರ್ಮಗುರುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

| Published : May 20 2024, 01:37 AM IST

ಸಾರಾಂಶ

ವರ್ಗಾವಣೆ ಗೊಳ್ಳುತ್ತಿರುವ ಭಗಿನಿ ಮಾರಿಯೋಲ ಬಿಎಸ್, ಮೂಲ್ಕಿ ಕಾನ್ವೆಂಟ್ ನಿಂದ ವರ್ಗಾವಣೆ ಗೊಳ್ಳುತ್ತಿರುವ ಧರ್ಮ ಭಗಿನಿಯರಾದ ವೀಣಾ, ಮರಿಸ್ಸಾ ಲೂಸಿ, ಝೀನಾ ಮಿನೇಜಸ್, ಪರ್ಪೆತುವಾ, ಕೆರೋಲಿನ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ಸೇವೆಯೇ ಮುಖ್ಯ ಗುರಿಯಾಗಿಸಿ ಧರ್ಮ ಗುರುಗಳು ವಿವಿಧ ಪ್ರದೇಶದಲ್ಲಿ ನಿರ್ದಿಷ್ಟ ಸಮಯದ ವ್ಯಾಪ್ತಿಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಜನ ಮನ್ನಣೆಗೆ ಪಾತ್ರರಾಗುತ್ತಾರೆ ಎಂದು ಮೂಲ್ಕಿ ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಪಾ. ಅಬ್ರಹಾಂ ಡಿಸೋಜ ಹೇಳಿದರು.

ಮೂಲ್ಕಿ ಇಮ್ಯಾಕುಲೇಟ್ ಕಂಸೆಪ್‌ಶ್ಯನ್ ಚರ್ಚು ಧರ್ಮ ಗುರುಗಳಾದ ಫಾ. ಸಿಲ್ವೆಸ್ಟರ್ ಡಿಕೋಸ್ಟಾ ಅವರಿಗೆ ವರ್ಗಾವಣೆಯ ಪ್ರಯುಕ್ತ ಅವರಿಗೆ ಚರ್ಚು ಧರ್ಮ ಸಭೆಯ ವತಿಯಿಂದ ನಡೆದ ಸನ್ಮಾನದಲ್ಲಿ ಅಭಿನಂದನಾ ಮಾತನಾಡಿದರು.

ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ ಮಾತನಾಡಿ, ಮೂಲ್ಕಿಯ ಘಜನಿ ಚರ್ಚು ಅಭಿವೃದ್ಧಿ, ಸೈಂಟ್ ಜೋಸೆಫ್ ಹಾಲ್ ನವೀಕರಣ ಸಹಿತ, ವಿದ್ಯಾರ್ಥಿಗಳಿಗೆ ತರಬೇತಿ, ಯುವ ಜನತೆಗೆ ಮಾರ್ಗದರ್ಶಿಯಾಗಿ ಧರ್ಮ ಸಭೆಯ ಮುಖ್ಯ ವ್ಯಕ್ತಿಯಾಗಿ ಉನ್ನತವಾಗಿ ನಡೆಸಿಕೊಂಡು ಸದಾ ನೆನಪಿನಲ್ಲಿರುವಂತೆ ಸೇವೆ ನೀಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಫಾ. ಸಿಲ್ವೆಸ್ಟರ್ ಡಿಕೋಸ್ಟಾ , ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಕಳೆದ ಆರು ವರ್ಷಗಳಲ್ಲಿ ನೀಡಿದ ಉತ್ತಮ ಸಹಕಾರಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ದೇವರು ಎಲ್ಲರಿಗೂ ಓಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಈ ಸಂದರ್ಭ ಮೂಲ್ಕಿ ಮೆಡಲಿನ್ ಕಾನ್ವೆಂಟ್ ಮುಖ್ಯಸ್ಥರಾಗಿದ್ದು ವರ್ಗಾವಣೆ ಗೊಳ್ಳುತ್ತಿರುವ ಭಗಿನಿ ಮಾರಿಯೋಲ ಬಿಎಸ್, ಮೂಲ್ಕಿ ಕಾನ್ವೆಂಟ್ ನಿಂದ ವರ್ಗಾವಣೆ ಗೊಳ್ಳುತ್ತಿರುವ ಧರ್ಮ ಭಗಿನಿಯರಾದ ವೀಣಾ, ಮರಿಸ್ಸಾ ಲೂಸಿ, ಝೀನಾ ಮಿನೇಜಸ್, ಪರ್ಪೆತುವಾ, ಕೆರೋಲಿನ್ ಅವರನ್ನು ಗೌರವಿಸಲಾಯಿತು. ಮೂಲ್ಕಿ ಧರ್ಮ ಗುರುಗಳ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿದ ಲೂಸಿ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಮೂಲ್ಕಿ ಡಿವೈನ್ ಕಾಲ್ ಸೆಂಟರ್‌ನ ಫಾ. ಅನಿಲ್ ಕಿರಣ್, ಮೂಲ್ಕಿ ಕೋನ್ವೆಂಟ್ ಸುಪೀರಿಯರ್ ಮಾರಿಯೋಲ ಬಿಎಸ್, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಪ್ರಾನ್ಸಿಸ್ ಡಿಕುನ್ಹ , ವಿವಿಧ ವಾರ್ಡು ಗುರಿಕಾರರು, ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು. ರೊಲ್ಫಿ ಡಿಕೋಸ್ಟಾ ನಿರೂಪಿಸಿ ವಂದಿಸಿದರು.