ಚನ್ನಪಟ್ಟಣ: ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ೫೦ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅವರು ಹೆಚ್ಚಿನ ಒತ್ತು ನೀಡುವ ಜತೆಗೆ ತಾಲೂಕಿನ ಅಭಿವೃದ್ಧಿಗೂ ಅನುದಾನ ನೀಡುವ ಭರವಸೆ ಇದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದಲ್ಲಿ ನಗರದ ೧೫ನೇ ವಾರ್ಡಿನ ನಾರಾಯಣಗೌಡ ತೋಟದ ಬೀದಿಯಲ್ಲಿ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ನಿರ್ಮಾಣ ಹಾಗೂ ೧೮ನೇ ವಾರ್ಡಿನ ಟಿಪ್ಪು ನಗರದಲ್ಲಿ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ನಿರ್ಮಾಣಕ್ಕೆ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದ ಮೇಲೆ ನಗರಸಭೆ ಸದಸ್ಯರು ಉತ್ಸಾದಿಂದ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಬಹಳಷ್ಟು ಹಳೆಯ ಮಾಡಬೆಕು ಕಾಮಗಾರಿಗಳು ನಡೆಯಬೇಕಿದೆ. ಚನ್ನಪಟ್ಟಣ ನಗರಕ್ಕೆ ಹೊಸರೂಪ ಕೊಡಬೇಕೆಂದು ನಗರಸಭೆ ಅಧ್ಯಕ್ಷರು, ಸದಸ್ಯರು, ಜನಪ್ರತಿನಿದಿ ಗಳು ಚನ್ನಪಟ್ಟಣ ನಗರಪ್ರದಕ್ಷಿಣೆ ಮಾಡುತ್ತಿದ್ದೆವೆ ಎಂದರು.

ಈಗಾಗಲೇ ಯುಜಿಡಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಶೀಘ್ರದಲ್ಲಿ ಕೆಲಸ ಪ್ರಾರಂಭ ವಾಗುತ್ತದೆ. ಟಿಪ್ಪು ನಗರದಲ್ಲಿ ಅಂಡರ್ ಪಾಸ್ ಮಾಡಬೇಕೆಂದು ಜನರ ಬಹಳ ದಿನ ಬೇಡಿಕೆಯಾಗಿದ್ದು ಅಲ್ಲಿ ಟೆಕ್ನಿಕಲ್ ಸಮಸ್ಯೆ ಇದೆ ಅಂಡರ್ ಪಾಸ್ ಬೇಡ ಓವರ್ ಬ್ರಿಡ್ಜ್ ಮಾಡಿ ಅಂತ ಹೇಳುತ್ತಿದ್ದಾರೆ. ಇದಲ್ಲದೇ ಚನ್ನಪಟ್ಟಣ ನಗರವ್ಯಾಪ್ತಿಯಲ್ಲಿ ಮೂರ್ನಾಲ್ಕು ಅಂಡರ್ ಬ್ರಿಡ್ಜ್. ಓವರ್ ಬ್ರಿಡ್ಜ್ ಆಗಬೇಕಿದೆ ರೈಲ್ವೆ ಸಚಿವ ವಿ.ಸೋಮಣ್ಣ ಎಲೇಕೇರಿ ಮೇಲ್ಸೇತುವೆ ಉದ್ಘಾಟನೆಗೆ ಆಗಮಿಸಲಿದ್ದು, ಆ ವೇಳೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು

ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮಾಲ ಸದಸ್ಯರಾದ ಸುಮಾರವೀಶ್, ಲಿಯಾಕತ್ ಆಲಿಖಾನ್, ಚಂದ್ರಶೇಖರ್, ಕಸ್ತೂರಿ ಮಂಜುನಾಥ್ ವಾಸಿಲಾ ಆಲಿಖಾನ್, ತೌಸಿಫ್, ಮುಖಂಡರಾದ ಎಲೇಕೇರಿ ರವೀಶ್, ಮುದ್ದುಕೃಷ್ಣ, ಮಂಜುನಾಥ್, ರಾಂಪುರ ಮಲವೆಗೌಡ ಇತರರು ಇದ್ದರು.


ಪೊಟೋ೨೬ಸಿಪಿಟಿ೧: ನಗರದ ೧೯ವಾರ್ಡ್‌ನಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.