ಘಾಟಿ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ವಿಶೇಷ

| Published : Jul 30 2025, 12:45 AM IST

ಘಾಟಿ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ವಿಶೇಷ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುವ ನಾಗರ ಪಂಚಮಿ ಹಬ್ಬವನ್ನು ನಾಗಾರಾಧನೆಗೆ ಹೆಸರಾಗಿರುವ ರಾಜ್ಯದ ಪ್ರಸಿದ್ದ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ದೊಡ್ಡಬಳ್ಳಾಪುರ: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುವ ನಾಗರ ಪಂಚಮಿ ಹಬ್ಬವನ್ನು ನಾಗಾರಾಧನೆಗೆ ಹೆಸರಾಗಿರುವ ರಾಜ್ಯದ ಪ್ರಸಿದ್ದ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಈ ಹಬ್ಬ ಸರ್ಪ ದೇವತೆಗಳಾದ ನಾಗಗಳಿಗೆ ಪೂಜೆ ಸಲ್ಲಿಸಲು ಮೀಸಲಾದ ಒಂದು ಪವಿತ್ರ ದಿನವಾಗಿದ್ದು, ನಾಗರ ಪಂಚಮಿಯಂದು ನಾಗರ ದೇವರನ್ನು ಭಕ್ತಿಪೂರ್ವಕವಾಗಿ ಪೂಜಿಸುವುದರಿಂದ ಕುಟುಂಬಕ್ಕೆ ಸಮೃದ್ಧಿ, ಸಂತೋಷ ಮತ್ತು ಸರ್ಪಭಯದಿಂದ ರಕ್ಷಣೆ ದೊರೆಯುತ್ತದೆ ಎಂಬುದು ಹಿಂದಿನಿಂದಲೂ ಇರುವ ಗಾಢ ನಂಬಿಕೆ. ಇದಕ್ಕೆ ಪೂರಕವಾಗಿ ಸಹಸ್ರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ನಾಗಶಿಲೆಗಳಿಗೆ ಪೂಜಿಸಿದರು.

ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾವಿರಾರು ನಾಗ ಶಿಲೆಗಳಿಗೆ ಭಕ್ತರು ಹಾಲು-ತುಪ್ಪ ಎರೆಯುವ ಮೂಲಕ ಹರಕೆ ತೀರಿಸಿದರು. ವಿಶೇಷವಾಗಿ ನೂತನವಾಗಿ ವಿವಾಹವಾದ ದಂಪತಿಗಳು, ಮಹಿಳೆಯರು, ನಾಗದೋಷಗಳಿಗಾಗಿ ಹರಕೆ ಹೊತ್ತವರು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ಹರಕೆ ತೀರಿಸಿದರು. ಬೆಳಗಿನಜಾವದಿಂದಲೇ ದೇವಾಲಯದಲ್ಲಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಶ್ರೀಸ್ವಾಮಿಯ ದರ್ಶನ ಪಡೆದರು.

ಶ್ರೀಕ್ಷೇತ್ರದಲ್ಲಿ ನೆಲೆ ನಿಂತಿರುವ ಸುಬ್ರಹ್ಮಣ್ಯ ಸ್ವಾಮಿ ಮತ್ತು ನರಸಿಂಹಸ್ವಾಮಿ ಮೂಲದೇವರಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳು, ಪ್ರಾಕಾರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಅಭಿಷೇಕ, ಮಹಾಮಂಗಳಾರತಿ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯ ಕಾರ್ಯದರ್ಶಿ ಪಿ. ದಿನೇಶ್‍, ಉಪ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕ ಶ್ರೀನಿಧಿ ಸೇರಿದಂತೆ ಪ್ರಾಧಿಕಾರದ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.29ಕೆಡಿಬಿಪಿ1-

ಘಾಟಿ ಸುಬ್ರಹ್ಮಣ್ಯ ಮೂಲದೇವರಿಗೆ ವಿಶೇಷಾಲಂಕಾರ.

--

29ಕೆಡಿಬಿಪಿ2-

ಘಾಟಿ ಸುಬ್ರಹ್ಮಣ್ಯ ದರ್ಶನಕ್ಕೆ ಸರತಿಯಲ್ಲಿ ನಿಂತಿರುವ ಭಕ್ತಸ್ತೋಮ.

--

29ಕೆಡಿಬಿಪಿ3-

ಘಾಟಿ ಸುಬ್ರಹ್ಮಣ್ಯದ ನಾಗರ ಶಿಲೆಗಳಿಗೆ ಹಾಲುತುಪ್ಪ ಎರೆದು ಪೂಜಿಸುತ್ತಿರುವ ಭಕ್ತಾದಿಗಳು.

--

29ಕೆಡಿಬಿಪಿ4-

ನಾಗರ ಪಂಚಮಿ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರಾಕಾರೋತ್ಸವ.

--

29ಕೆಡಿಬಿಪಿ5-

ನಾಗರ ಪಂಚಮಿ ಹಿನ್ನಲೆ ಘಾಟಿ ಸುಬ್ರಹ್ಮಣ್ಯದಲ್ಲಿ ಜನಜಾತ್ರೆ.