ಸಾರಾಂಶ
ಚಿಕ್ಕೋಡಿ: ಉತ್ತರ ಪ್ರದೇಶ ರಾಜಧಾನಿ ಲಖನೌ ದಲ್ಲಿ ಈಚೆಗೆ ಜರುಗಿದ ರಾಷ್ಟ್ರಮಟ್ಟದ ಸಹಕಾರ ಬ್ಯಾಂಕಗಳ ಸಂಯೋಜನೆ (ಎನ್‌ಸಿಬಿಎಸ್) ಹಾಗೂ ಫ್ರಂಟಿಯರ್ಸ್ ಕೋ ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್-2024ನಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಗ್ರೂಪ್‌ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಸಂಸ್ಥೆಗೆ ಐಟಿ ವಿಭಾಗದಲ್ಲಿ ರಾಷ್ಟ್ರಮಟ್ಟದ ಬೆಸ್ಟ್ ಐಟಿ ಅವಾರ್ಡ್-2024 ಪ್ರಶಸ್ತಿ ಲಭಿಸಿದೆ.

ಸಮಾರಂಭದಲ್ಲಿ ಬ್ಯಾಂಕಿಂಗ್ ಫ್ರಂಟಿಯರ್ ಸಂಸ್ಥಾಪಕ ಬಾಬು ನೈಯರ್, ಗ್ರೂಪ್ ಆಡಿಟರ್ ಮನೋಜ್ ಅಗರವಾಲ್, ಎನ್‌ಎಎಫ್‌ಸಿಯುಬಿ ನಿರ್ದೇಶಕಸುಭಾಷ ಗುಪ್ತಾ ಹಾಗೂ ಪ್ರಮೋದ ಕರ್ನಾಡ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಪರವಾಗಿ ಉಪಪ್ರಧಾನ ವ್ಯವಸ್ಥಾಪಕ ಸುರೇಶ ಮಾನೆ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಲಭಿಸಿದ್ದಕ್ಕೆ ಸಂಸ್ಥೆಯ ಸಂಸ್ಥಾಪಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಹ ಸಂಸ್ಥಾಪಕಿ, ಶಾಸಕಿ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದ್ದಾರೆ.