ಮಿತ ಆಹಾರ ಸೇವನೆ, ವ್ಯಾಯಾಮದಿಂದ ಆರೋಗ್ಯ ವೃದ್ಧಿ: ಡಾ.ಗುಲ್ಜರ್

| Published : Oct 26 2024, 01:07 AM IST

ಸಾರಾಂಶ

ಮನುಷ್ಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸಬಾರದು. ನನಗೆ ಸ್ವಲ್ಪ ಎದೆ ಉರಿ ಬರುತ್ತದೆ ಮತ್ತು ನೋವು ಇದೆ. ಇದು ಗ್ಯಾಸ್ ಟ್ರಬಲ್ ಎಂದು ಸುಮ್ಮನಿರುವುದು ಸೂಕ್ತವಲ್ಲ. ಸಮಯಕ್ಕೆ ಸರಿಯಾಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಮಾತ್ರ ಮುಂದಿನ ಜೀವನ ಸುಖಕರವಾಗಿರುತ್ತದೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರೂ ಮಿತ ಆಹಾರ ಸೇವನೆ, ದಿನನಿತ್ಯ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಮೈಸೂರು ನಾರಾಯಣ ಹೃದಯಾಲಯದ ವೈದ್ಯಾಧಿಕಾರಿ ಗುಲ್ಜರ್ ತಿಳಿಸಿದರು.

ಲಯನ್ಸ್ ಕ್ಲಬ್ ಆವರಣದಲ್ಲಿ ಶುಕ್ರವಾರ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮೈಸೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹೆಸರಾಂತ ತಜ್ಞರಿಂದ ಉಚಿತ ಹೃದಯ ಆರೋಗ್ಯ ತಪಾಸಣೆ ಮತ್ತು ಬಿಪಿ, ಶುಗರ್ ಪರೀಕ್ಷೆ ಮತ್ತು ಇಸಿಜಿ ಪರೀಕ್ಷೆ ನಡೆಸಿದ ನಂತರ ಮಾತನಾಡಿದರು.

ಮನುಷ್ಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸಬಾರದು. ನನಗೆ ಸ್ವಲ್ಪ ಎದೆ ಉರಿ ಬರುತ್ತದೆ ಮತ್ತು ನೋವು ಇದೆ. ಇದು ಗ್ಯಾಸ್ ಟ್ರಬಲ್ ಎಂದು ಸುಮ್ಮನಿರುವುದು ಸೂಕ್ತವಲ್ಲ. ಸಮಯಕ್ಕೆ ಸರಿಯಾಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಮಾತ್ರ ಮುಂದಿನ ಜೀವನ ಸುಖಕರವಾಗಿರುತ್ತದೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು ಎಂದರು.

ಮಧುಮೇಹ ಇರುವವರು ಮಿತ ಆಹಾರ ಸೇವಿಸಬೇಕು. ಶುಗರ್ ಒಂದು ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಅದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಈಗ ಸಾಮಾನ್ಯವಾಗಿ ಎಲ್ಲರಿಗೂ ಬಿಪಿ ಶುಗರ್ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ. ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದರು.

ಇಂದು ನಡೆದ ಶಿಬಿರದಲ್ಲಿ ಮೂರು ಜನರಿಗೆ ಆಂಜಿಯೋಗ್ರಾಮ್ ಅವಶ್ಯಕತೆ ಇದ್ದು, ಅದರ ಜೊತೆಯಲ್ಲಿ ಇನ್ನು ಏಳು ಜನರನ್ನು ಸಹ ಮೈಸೂರಿನ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.

ನಾರಾಯಣ ಹೃದಯಾಲಯದ ಇನ್ಸೂರೆನ್ಸ್ ಅಡ್ವೈಸರ್ ಅನೀಶ್ ಮಾತನಾಡಿ, ಆಸ್ಪತ್ರೆಯಲ್ಲಿ ನಾರಾಯಣ ಆದಿತ್ಯ ಹೆಲ್ತ್ ಇನ್ಸೂರೆನ್ಸ್ ಪ್ರಾರಂಭವಾಗಿದೆ. ಅದನ್ನು ಪ್ರತಿಯೊಬ್ಬರೂ ಮಾಡಿಸುವುದರಿಂದ ಆರೋಗ್ಯ ತೊಂದರೆಯಾದರೆ ಉಪಯುಕ್ತವಾಗಿದೆ ಎಂದರು.

ಲಯನ್ಸ್ ಕ್ಲಬ್ಬ್ ಅಧ್ಯಕ್ಷ ಎನ್.ಕೆ .ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಬಿರದಲ್ಲಿ ಸುಮಾರು 125 ಜನರನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 75 ಜನರಿಗೆ ಇಸಿಜಿ ಮಾಡಲಾಗಿದೆ ಎಂದರು.

ಈ ವೇಳೆ ಲಯನ್ ಕ್ಲಬ್‌ ವತಿಯಿಂದ ವೈದಾಧಿಕಾರಿ ಗುಲ್ಜಾರ್ ಪ್ರಶಾಂತ್, ರೂಪ, ರಮ್ಯಾ, ಪ್ರೇಮಕುಮಾರಿ, ಅನಿಲ್ ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಜಿ ಕೆ.ಶಿವರಾಜು, ಡಾ.ಸಂಸುದ್ದೀನ್, ಎಚ್.ವಿ.ರಾಜು, ರಾಜೇಂದ್ರ, ಎಚ್.ಆರ್. ಪದ್ಮನಾಭ, ಎ.ಟಿ.ಶ್ರೀನಿವಾಸ್, ಗುಣೇಶ್, ಗುರುಸಿದ್ಧ, ಪ್ರವೀಣ್ ಸೇರಿದಂತೆ ಇತರರು ಇದ್ದರು.