ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ನವೀನ್ ರೈ ಆಯ್ಕೆಯಾದರು.
ಮಂಗಳೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ನವೀನ್ ರೈ (ಪುತ್ತೂರು), ಪ್ರಧಾನ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ (ಮಂಗಳೂರು) , ಕೋಶಾಧಿಕಾರಿಯಾಗಿ ಹೇರಿಕ್ ಡಿಸೋಜಾ (ಬ್ರಹ್ಮಾವರ), ಸಂಚಾಲಕರಾಗಿ ಗೋಪಾಲ್ (ಸುಳ್ಯ) ಆಯ್ಕೆ ಆದರು. ಉಪಾಧ್ಯಕ್ಷರಾಗಿ ದೇವರಾಜ್ (ಸುರತ್ಕಲ್) ಮತ್ತು ದತ್ತಾತ್ರೇಯ (ಕಾರ್ಕಳ), ಕಾರ್ಯದರ್ಶಿಗಳಾಗಿ ಹರೀಶ್ ಕೋಟ್ಯಾನ್ (ಮುಲ್ಕಿ) ಹಾಗೂ ಅಮೃತ್ ಬೀಜಾಡಿ (ಕುಂದಾಪುರ) ಆಯ್ಕೆ ಆದರು.ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಶೇರಿಗಾರ್ (ಉಡುಪಿ), ಹರೀಶ್ ಕುಂದರ್ ( ಬಂಟ್ವಾಳ) ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಶ್ ಕೌಡಂಗೆ (ಬೆಳ್ತಂಗಡಿ), ಸಂಘಟನಾ ಕಾರ್ಯದರ್ಶಿಯಾಗಿ ಚಿದಾನಂದ (ಉಳ್ಳಾಲ್) ಹಾಗೂ ರವಿ ಕೋಟ್ಯಾನ್ ( ಮೂಡುಬಿದಿರೆ) ಛಾಯಾ ಕಾರ್ಯದರ್ಶಿಯಾಗಿ ರಾಜೇಶ್ (ಕಾಪು) ಮತ್ತು ಪತ್ರಿಕಾ ಪ್ರತಿನಿಧಿಯಾಗಿ ಲೋಕೇಶ್ ಬಿ.ಎನ್. (ಸುಬ್ರಹ್ಮಣ್ಯ) ಆಯ್ಕೆಗೊಂಡರು.