ಲೇಖಕಿ ಶರ್ಮಿಳಾ ರಮೇಶ್ ರಚಿಸಿರುವ ಅವ್ವಯ್ಯಜ್ಜಿ ಕಥೆಗಳು ಮುತ್ತು ರತ್ನದ ರಾಜಕುಮಾರಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಲೇಖಕಿ ಶರ್ಮಿಳಾ ರಮೇಶ್ ಅವರು ರಚಿಸಿರುವ ‘ಅವ್ವಯ್ಯಜ್ಜಿ ಕಥೆಗಳು ಮುತ್ತು ರತ್ನದ ರಾಜಕುಮಾರಿ’ ಪುಸ್ತಕವನ್ನು ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಶತಕಂಠದಲ್ಲಿ ಗೀತ ಸಂಗಮ ಕಾರ್ಯಕ್ರಮದ ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.ಕನ್ನಡ ಸಿರಿ ಸ್ನೇಹ ಬಳಗದ ನೇತೃತ್ವದಲ್ಲಿ ಸೋಮವಾರಪೇಟೆ ಭಾಗದ 21 ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶತಕಂಠದಲ್ಲಿ ಗೀತ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವಪ್ಪ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ನಿವೃತ್ತ ಪ್ರಾದ್ಯಾಪಕಿ ತಿಲೋತ್ತಮೆ ನಂದಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್, ಕನ್ನಡ ಸಿರಿ ಸ್ನೇಹ ಬಳಗದ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ, ಕಾರ್ಯದರ್ಶಿ ಪ್ರೇಮಾ, ನಿವೃತ್ತ ಪ್ರಾಂಶುಪಾಲರಾದ ತಿಲೋತ್ತಮೆ, ಊ.ರಾ.ನಾಗೇಶ್, ಸಾಹಿತಿ ನ.ಲ. ವಿಜಯ, ತಾಲೂಕು ಜನಪದ ಪರಿಷತ್ ಅಧ್ಯಕ್ಷ ಕೆ.ಎ.ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಲೇಖಕಿ ಶರ್ಮಿಳಾ ರಮೇಶ್ ಇದ್ದರು.