ಸಾರಾಂಶ
ಕಾಂಗ್ರೆಸ್ ಅಭೂತಪೂರ್ವ ಫಲಿತಾಂಶ ಪಡೆಯಲು ಈ ಐದು ಗ್ಯಾರಂಟಿ ಯೋಜನೆಗಳೇ ಕಾರಣ. ಉಪ ಚುನಾವಣೆಯಲ್ಲಿ ಮತ್ತೇ ಅದನ್ನು ರಾಜ್ಯದ ಜನತೆ ದೃಡಿಕರಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನದಲ್ಲಿ ತೊಂದರೆ ಕಂಡು ಬಂದಲ್ಲಿ ತಕ್ಷಣ ಸಮಸ್ಯೆಯನ್ನು ಬಗೆ ಹರಿಸುವ ಜವಾಬ್ದಾರಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಅವರ ತಂಡದ ಮೇಲಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ಕಾಂಗ್ರೆಸ್‌ನ ಜನಪ್ರಿಯತೆಯಲ್ಲಿ ಉತ್ತುಂಗಕ್ಕೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ತಾಲೂಕಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕು. ಸಿಕ್ಕ ಸ್ಥಾನವನ್ನು ಅಧಿಕಾರ ಎಂದು ಭಾವಿಸದೆ ಜನ ಸೇವೆಗೆ ಮುಂದಾಗಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣ ತಾಲೂಕು ಪಂಚಾಯಿತಿ ಕಚೇರಿ ಸಂರ್ಕೀಣದಲ್ಲಿ ಆರಂಭಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿ ಉದ್ಘಾಟನೆ ಹಾಗೂ ನೂತನ ಅಧ್ಯಕ್ಷ ಮತ್ತು ಸಮಿತಿ ಸದಸ್ಯರ ಪದಗ್ರಹಣದಲ್ಲಿ ಶಾಸಕರು ಮಾತನಾಡಿದರು.ಗೆಲುವಿಗೆ ಗ್ಯಾರಂಟಿಗಳೇ ಕಾರಣ
ಈ ಬಾರಿ ಪಕ್ಷ ಅಭೂತಪೂರ್ವ ಫಲಿತಾಂಶ ಪಡೆಯಲು ಈ ಐದು ಗ್ಯಾರಂಟಿ ಯೋಜನೆಗಳೇ ಕಾರಣ. ಉಪ ಚುನಾವಣೆಯಲ್ಲಿ ಮತ್ತೇ ಅದನ್ನು ರಾಜ್ಯದ ಜನತೆ ದೃಡಿಕರಿಸಿದ್ದಾರೆ. ಈ ನಿಟ್ಟಿನಲ್ಲಿ ಐದು ಯೋಜನೆಗಳಲ್ಲಿ ಯಾವುದೇ ಧಕ್ಕೆ ಬರದಂತೆ ಅನುಷ್ಠಾನದಲ್ಲಿ ಯಾವುದೇ ತೊಂದರೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆ ಹರಿಸುವ ಜವಾಬ್ದಾರಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಅವರ ತಂಡದ ಮೇಲಿದೆ ಎಂದರು.ಎಂಎಲ್‌ಸ್ಸಿ ಆನಿಲ್ ಕುಮಾರ್ ಮಾತನಾಡಿ, ಶಾಸಕ ನಂಜೇಗೌಡರು ಜಾತಿಕಾರಣ ಮಾಡದೆ ಎಲ್ಲ ಸಮುದಾಯಕ್ಕೆ ಸಮಾನ ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು.
ನೂತನ ಪದಾಧಿಕಾರಿಗಳುಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆಂಜಿನಪ್ಪ ಅಧಿಕಾರ ವಹಿಸಿಕೊಂಡರು. ನೂತನ ಪದಾಧಿಕಾರಿಗಳು ಶಾಸಕ ನಂಜೇಗೌಡ ದಂಪತಿಗೆ ಬೃಹತ್ ಪೋಟೋವನ್ನು ನೀಡುವ ಮೂಲಕ ಸನ್ಮಾನಿಸಿದರು.
ಮಾಜಿ ಶಾಸಕ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ,ಕೃಷಿಕ ಸಮಾಜದ ಅಧ್ಯಕ್ಷ ಆನೇಪುರ ಹನುಮಂತಪ್ಪ ,ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಮಧುಸೂಧನ್,ವಿಜಯನರಸಿಂಹ,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಯೀಂ ವುಲ್ಲಾ ಇನ್ನಿತರರು ಇದ್ದರು.