ಕಳಸಸಮಗ್ರ ಭಾರತದ ಅಭಿವೃದ್ಧಿಗೆ ವಿಬಿ ಜಿ ರಾಮ್‌ಜಿ ಯೋಜನೆ ಸಹಕಾರಿಯಾಗಿದೆ. ಆದರೆ, ಈ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಬಿಜೆಪಿ ತಾಲೂಕು ಘಟಕದಿಂದ ಯೋಜನೆ ಕುರಿತು ಜಾಗೃತಿ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಕಳಸಸಮಗ್ರ ಭಾರತದ ಅಭಿವೃದ್ಧಿಗೆ ವಿಬಿ ಜಿ ರಾಮ್‌ಜಿ ಯೋಜನೆ ಸಹಕಾರಿಯಾಗಿದೆ. ಆದರೆ, ಈ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಬಿಜೆಪಿ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್‌ಜಿ ಯೋಜನೆ ಕುರಿತು ಜಾಗೃತಿ ಪಾದಯಾತ್ರೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯಡಿ ಒಬ್ಬರಿಗೆ 100 ದಿನಗಳ ಕೆಲಸ ಮತ್ತು ದಿನಕ್ಕೆ ₹175 ರು. ಕೂಲಿ ನೀಡಲಾಗುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಅದೇ ಯೋಜನೆಗೆ 125 ದಿನಗಳ ಕೆಲಸ ಹಾಗೂ ದಿನಕ್ಕೆ ₹375 ರು. ಕೂಲಿ ನಿಗದಿಪಡಿಸಿದೆ. ಇದರಿಂದ ಪ್ರತಿಯೊಬ್ಬರಿಗೂ ಸುಮಾರು ₹46 ಸಾವಿರ ರು. ಆದಾಯ ಸಿಗುತ್ತದೆ. ಇಂತಹ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ರಾಜಕೀಯ ಪ್ರೇರಿತವಲ್ಲವೇ ಎಂದು ಪ್ರಶ್ನಿಸಿದರು.ನರೇಗಾದಡಿ ಕೆಲಸ ಮಾಡಿ 15 ದಿನವಾದರೂ ಕೂಲಿ ಹಣ ಸಿಗುತ್ತಿರಲಿಲ್ಲ. ಆದರೆ ಈಗ 7 ದಿನದಲ್ಲಿ ಕೂಲಿ ಪಾವತಿ ಸಲು ಈ ಕಾಯ್ದೆ ರೂಪಿಸಲಾಗಿದೆ. ಹೊಸ ಕಾಯ್ದೆ ಬಂದಾಗ ಹೊಸ ಹೆಸರು ಇಡುವುದು ರೂಢಿಗತ. ಇದಲ್ಲದೆ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಸರ್ಕಾರಗಳು ಕೇಂದ್ರ ನೀಡಿದ ಸುಮಾರು ₹22 ಸಾವಿರ ಕೋಟಿ ದುರುಪಯೋಗ ಮಾಡಿಕೊಂಡಿವೆ. ಕರ್ನಾಟಕದಲ್ಲೂ ರಾಜ್ಯ ಸರ್ಕಾರ ನೂರಾರು ಪ್ರಕರಣಗಳಲ್ಲಿ ಅಧಿಕಾರ ದುರುಪಯೋಗ ಮಾಡಿದೆ ಎಂದು ಸಂಸದರು ಆರೋಪಿಸಿದರು.
ಇದಕ್ಕಿಂತ ಮುಂಚಿತವಾಗಿ ಕಳಸ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಪಾದಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ದೀಪಕ್ ದೊಡ್ಡಯ್ಯ, ಎಂ.ಎ.ಶೇಷಗಿರಿ, ಸುಜಯ ಸದಾನಂದ, ಬಿ.ಕೆ.ಮಹೇಶ್, ಸುಂದರ ಶೆಟ್ಟಿ, ನಾಗಭೂಷಣ್, ನಾಗೇಶ್ ಭಟ್, ರಂಗನಾಥ್, ಕಾರ್ತಿಕ್ ಶಾಸ್ತ್ರೀ, ಪರಿಕ್ಷಿತ್, ಜೆಡಿಎಸ್ ಮುಖಂಡರಾದ ಜಿ.ಕೆ.ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್ ಹಿನಾರಿ ಇದ್ದರು.