ಸಾರಾಂಶ
ನಿಡಗುಂದಿ: ನಿಡಗುಂದಿ ಪಟ್ಟಣ ಪಂಚಾಯತಿಯ ವಾರ್ಡ್ 5ರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ತೆರವಾದ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಈರಣ್ಣ ಗೋನಾಳ 142 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಮರಿಯಪ್ಪ ಹರಿಜನ 136 ಮತಗಳನ್ನು ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ಶೇಖರ ದೊಡಮನಿ 70 ಮತಗಳು ಮತ್ತು 7 ಮತಗಳು ನೋಟಾಗೆ ದೊರೆತಿವೆ. ಒಟ್ಟು 355 ಮತಗಳಲ್ಲಿ ಕೇವಲ 6 ಮತಗಳ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್‌ಗೆ ನಿರಾಸೆ ಮೂಡಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಸಮುದಾಯದ ಒಬ್ಬರು ಪಕ್ಷೇತರರಾಗಿ ಕಣಕ್ಕಿಳಿದ ಪರಿಣಾಮ ಮತ ವಿಭಜನೆಗೊಂಡು ಕಾಂಗ್ರೆಸ್ ಗೆಲುವನ್ನೆ ತಡೆಯಿತು. ಆದರೂ, ಕಾಂಗ್ರೆಸ್ ನಿರೀಕ್ಷೆ ಮೀರಿ ಮತ ಪಡೆದುಕೊಂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಫಲಿತಾಂಶ ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ನೂತನ ಸದಸ್ಯ ಈರಣ್ಣ ಗೋನಾಳ ಮಾತನಾಡಿ, ಈ ಜಯ ಜನಶಕ್ತಿಯ ವಿಜಯ. ವಾರ್ಡ್ ಮತದಾರರ ಅಭಿವೃದ್ಧಿಯ ಪರ ತೀರ್ಮಾನ ಮಾಡಿದ್ದಾರೆ. ನನಗೆ ವಿಶ್ವಾಸವಿಟ್ಟು ಮತ ನೀಡಿದ ಮತದಾರರಿಗೆ ಹಾಗೂ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಜನರ ಸಮಸ್ಯೆಗಳ ಪರಿಹಾರಕ್ಕೆ ಸದಾ ಬದ್ಧನಾಗಿರುವುದಾಗಿ ಭರವಸೆ ನೀಡಿದರು.
ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.