ಸಾರಾಂಶ
ಹುಮನಾಬಾದ ಪಟ್ಟಣದ ಹೊರವಲಯದಲ್ಲಿರುವ ಶ್ರೀಬೈರಾಗಿ ಮಠ ದಕ್ಷಿಣ ಮುಖಿ, ಪಂಚಮುಖಿ, ವಾಯುಪುತ್ರ ಹನುಮಾನ್‌ಗೆ ಸೋಮವಾರ ಭಕ್ತರೊಬ್ಬರು 1 ಕೆ.ಜಿ ಬೆಳ್ಳಿ ಹಸ್ತ ಹಾಗೂ ಕಂಠ ಮಾಲಾ ಕಾಣಿಕೆಯಾಗಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿರುವ ಹುಮನಾಬಾದ ಪಟ್ಟಣದ ಹೊರವಲಯದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಗುರು ಆಗಿರುವ ಸ್ವಾಮಿ ಸಮರ್ಥ ರಾಮದಾಸ ಮಹಾರಾಜರಿಂದ ಸ್ಥಾಪಿಸಲ್ಪಟ ಶ್ರೀಬೈರಾಗಿ ಮಠ ದಕ್ಷಿಣ ಮುಖಿ, ಪಂಚಮುಖಿ, ವಾಯುಪುತ್ರ ಹನುಮಾನ್‌ನಿಗೆ ಭಕ್ತರು ತಮ್ಮ ಆಸೆ, ಆಕಾಂಕ್ಷೆ ಈಡೇರಿದ ಬಳಿಕ ಹರಕೆ, ಕಾಣಿಕೆ ಸಲ್ಲಿಸುವುದು ಸಾಮಾನ್ಯ, ಅದರಂತೆ, ಭಕ್ತರೊಬ್ಬರು 1 ಕೆ.ಜಿ ಬೆಳ್ಳಿ ಹಸ್ತ ಹಾಗೂ ಕಂಠ ಮಾಲಾ ಕಾಣಿಕೆಯಾಗಿ ಸಲ್ಲಿಸಿದ್ದಾರೆ.ಹುಮನಾಬಾದ ಪಟ್ಟಣದ ನಿವಾಸಿ ದೇವಸ್ಥಾನದ ಭಕ್ತ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಸಂತ ರೋಹಿದಾಸ ಶಂಭೂಶಂಕರ ಕುಟುಂಬಸ್ಥರು ಶ್ರಾವಣ ಮಾಸದ ಕೊನೆಯ ಸೋಮಾವತಿ ಅಮವಾಸ್ಯೆ ಪ್ರಯುಕ್ತ ಅತ್ಯಾಕರ್ಷಕವಾದ 1 ಕೆ.ಜಿ ಬೆಳ್ಳಿಯ ಹಸ್ತ ಹಾಗೂ ಕಂಠ ಮಾಲಾ ಸಮರ್ಪಿಸಿದ್ದಾರೆ.ಹನುಮಾನ್ ದೇವರಿಗೆ ಬೆಳ್ಳಗೆ ಕಾಕಡ ಆರತಿ, ಹಾಲೂ, ಮೊಸರು, ಜೇನು ತುಪ್ಪ, ಕುಂಕುಂ, ಅರಶಿಣ, ಏಳೆನೀರು ಸೇರಿದಂತೆ ಪಂಚಾಮೃತ್ ಅಭಿಷೇಕ, ಅಲಂಕಾರ, ಹನುಮಾನ್ ಶತನಾಮಾವಳಿ ಪಠಣ, ಸಾಮೂಹಿಕ ಚಾಲಿಸಾ ಪಠಣ ಮೂಲಕ ಕುಟುಂಬಸ್ಥರೊಂದಿಗೆ ನೈವೇದ್ಯ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು.
ಕೊನೆಯ ಶ್ರಾವಣ ಸೋಮವಾರ ಹಾಗೂ ಸೋಮಾವತಿ ಅಮವಾಸ್ಯೆ ಪ್ರಯುಕ್ತ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು, ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ಇದೇ ವೇಳೆ ಪಟ್ಟಣದ ಉದ್ಯಮಿ ಚಂದ್ರಕಾಂತ ಶಂಕರಶಟ್ಟಿ, ಸಂತೋಷ ಶಂಕರಶಟ್ಟಿ ಹಾಗೂ ಬಸವರಾಜ ಶಂಕರಶಟ್ಟಿರಿಂದ ಹನುಮಂತನ ಭಾವಚಿತ್ರವುಳ್ಳ ಫೋಟೋ ಭಕ್ತರಿಗೆ ಕಾಣಿಕೆಯಾಗಿ ನೀಡಿದರು.ದೇವಸ್ಥಾನ ಅಧ್ಯಕ್ಷ ದೇವಾನಂದ ಘವಾಳಕರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಜಾಧವ, ಸದಸ್ಯ ನೀತಿನ ಘವಳಕರ, ದಿನೇಶ ಸಾಳುಂಕೆ, ಮಹೇಶ ಕೋಳಿ, ಆನಂದ ತೆಲಂಗ, ಅರ್ಚಕ ಸಚೀನ ಅವದಾನಿ, ಭಕ್ತರಾದ ಗುರುರಾಜ ಸಜ್ಜನಶಟ್ಟಿ, ಗೋಪಿ ಗುಪ್ತಾ, ಉಮೇಶ ಶಂಭೂಶಂಕರ, ಅಶೋಕ ಕೊಕಾಟೆ, ರಾಜಕುಮಾರ ಸಾಯಗಾಂವಕರ, ವಿರೇಶ ಜಾಜಿ, ಶಂಕರ ಶಿಲವಂತ, ಗುಂಡಯ್ಯ ತೆಲಂಗ ಸೇರಿದಂತೆ ಅನೇಕರಿದ್ದರು.