ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಪಟ್ಟಣದ ಮಾನಸ ವಿದ್ಯಾಸಂಸ್ಥೆಯ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿ ಹಿನ್ನೆಲೆ ಶಾಲಾ ಸಭಾಂಗಣ ಮತ್ತು ಹೊರಾಂಗಣದಲ್ಲಿ ಚಿಣ್ಣರ ಕಲರವ ಕಂಡು ಬಂತು.ಸೋಮವಾರ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಶಾಲೆಯ ಪ್ರಿಕೆಜಿ, ಎಲ್‌ಕೆಜಿ ಮತ್ತು ಯುಕೆಜಿಯ ನೂರಾರು ಮಕ್ಕಳು ರಾಧೆ ಮತ್ತು ಕೃಷ್ಣ ವೇಷಧರಿಸಿ ಕಂಗೊಳಿಸುವ ಮೂಲಕ ಗಮನ ಸೆಳೆದರು. ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕೊಠಡಿಯನ್ನು ಕೃಷ್ಣನ ವಿಗ್ರಹ ಸಮೇತ ವಿಭಿನ್ನವಾಗಿ ಅಲಂಕರಿಸಿ ಸಜ್ಜುಗೊಳಿಸಲಾಗಿತ್ತು.
ವೇಷ ತೊಟ್ಟ ವಿವಿಧ ಮಕ್ಕಳನ್ನು ಕಂಡ ಪೋಷಕರು ಸಂತಸದಿಂದ ಕಣ್ ತುಂಬಿಕೊಂಡರು. ಮಕ್ಕಳಿಂದ ಸಾಮೂಹಿಕವಾಗಿ ನಿಸರ್ಗ ಕ್ಯಾಂಪಸ್‌ನಲ್ಲಿ ಸಜ್ಜುಗೊಳಿಸಿ ಹರೇ ರಾಮ.. ಹರೇ ಕೃಷ್ಣ.. ಕೃಷ್ಣ ಕೃಷ್ಣ.. ಹರೇ ಹರೇ. ಜೈ ಜೈ ಕೃಷ್ಣ , ರಾಧೆ ಕೃಷ್ಣ ಎಂಬಿತ್ಯಾದಿ ಶ್ಲೋಕಗಳನ್ನು ಹೇಳಿಸುವ ಮೂಲಕ ಶಿಕ್ಷಕರು ಮಕ್ಕಳ ಕಲರವದಲ್ಲಿ ತಾವು ಪಾಲ್ಗೊಂಡು ಸಾಥ್ ನೀಡಿದರು. ಇದೆ ವೇಳೆ ಮಕ್ಕಳಿಗೆ ಸಿಹಿ ವಿತರಿಸಿದರು. ಕೃಷ್ಣ ಶಾಶ್ವತ ಆನಂದ, ಶಾಶ್ವತ ಬುದ್ಧಿವಂತಿಕೆ ಮತ್ತು ಶಾಶ್ವತ ಸೌಂದರ್ಯದ ಮೂರ್ತರೂಪ ಎಂಬುದಕ್ಕೆ ಮಕ್ಕಳಲ್ಲಿ ಮನೆ ಮಾಡಿದ್ದ ಸಂಭ್ರಮದ ಕಳೆ ಸಾಕ್ಷೀಕರಿಸಿತು.ಮುಖ್ಯ ಶಿಕ್ಷಕ ಶಂಕರ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಸಾರುವಂತಹ ದೇಶ. ಈ ನಿಟ್ಟಿನಲ್ಲಿ ಈ ದಿನ ಎಲ್ಲ ಧರ್ಮದ ಮಕ್ಕಳು ಕೃಷ್ಣನನ್ನು ಸ್ಮರಿಸುವ ದಿನ. ಹಾಗಾಗಿ ಇಂದು ಮಕ್ಕಳು ಶ್ರೀಕೃಷ್ಣನ ತುಂಟಾಟ ಬಾಲ್ಯದ ತುಣುಕುಗಳನ್ನು ಆಕರ್ಷಕವಾಗಿ ಅಭಿನಯಿಸಿದ್ದು ಪೋಷಕರ ಸಂಭ್ರಮಕ್ಕೆ ಕಾರಣಯಿತು. ನಿಜಕ್ಕೂ ಶಾಲೆಯ ಕ್ಯಾಂಪಸ್ ಕೃಷ್ಣನ ಜನ್ಮಾಷ್ಟಮಿ ಹಿನ್ನೆಲೆ ಸಂಭ್ರಮ ಸಡಗರ ಮನೆ ಮಾಡಿತ್ತು. ಮಕ್ಕಳು ವೇಷತೊಟ್ಟ, ವೇಷಭೂಷಣಗಳನ್ನು ಕಂಡು ಗಣ್ಯರು, ಪೋಷಕರು ಸಂಭ್ರಮಿಸಿದರು. ಜನ್ಮಾಷ್ಟಮಿ ಹಿನ್ನೆಲೆ ಕೃಷ್ಣನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ವಿವಿಧ ರೂಪಗಳಲ್ಲಿ ಕೊಠಡಿಗಳನ್ನು ಅಲಂಕಾರಗೊಳಿಸಲಾಗಿತ್ತು. ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಅವರ ಮಾರ್ಗದರ್ಶನದಲ್ಲಿ ಮುಖ್ಯಶಿಕ್ಷಕ ಶಂಕರ್, ಸಹ ಮುಖ್ಯಶಿಕ್ಷಕಿ ಗಿರಿಜಾ ಲಕ್ಷ್ಮಿ ಶಿಕ್ಷಕರಾದ ಅನಿತಾ, ಶಾಂತಿಪ್ರಿಯಾ, ರಮ್ಯ, ಸುಮ ಇನ್ನಿತರರು ಕೃಷ್ಣ, ರಾಧೆ ವೇಷತೊಟ್ಟ ಮಕ್ಕಳೊಡನೆ ಬೆರೆಯುವ ಮೂಲಕ ಮಕ್ಕಳು ಮತ್ತು ಪೋಷಕರ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾದರು.