ಶಾಸಕ ಬಾಲಕೃಷ್ಣರವರು ಹುಟ್ಟುಹಬ್ಬ ಆಚರಣೆ ಮಾಡಲು ಶಾಸಕರೆಲ್ಲರೂ ಒಂದೆಡೆ ಸೇರಿದ್ದರು. ಹುಟ್ಟುಹಬ್ಬದಲ್ಲಿ ನಾಟಿ ಕೋಳಿ ಮಾಡಿದ್ದರು. ನಾನು ರಂಜಾನ್ ಹಬ್ಬದ ಕಿಟ್ ವಿತರಣೆ ಮಾಡುತ್ತಿದ್ದ ಕಾರಣ ಹೋಗಲು ಆಗಲಿಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ಕಾಂಗ್ರೆಸ್ ಪಕ್ಷದಲ್ಲಿ ಆ ಬಣ, ಈ ಬಣ ಅಂತ ಏನೂ ಇಲ್ಲ. ಪಕ್ಷದ 140 ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿದ್ದೇವೆ. ಎಲ್ಲರೂ ಹೈಕಮಾಂಡ್ ಗೆ ಒಕ್ಕೊರಲಿನಿಂದ ಬದಲಾವಣೆ ಕೇಳುತ್ತಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ತಾಲೂಕಿನ ಬೆಜ್ಜರಹಳ್ಳಿ ಹಾಗೂ ಹಾಗಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗುಂಪಿಲ್ಲ, ಬದಲಾವಣೆ ಅಂತೂ ಕೇಳಿದ್ದೇವೆ ಎಂದರು.

ಶಾಸಕ ಬಾಲಕೃಷ್ಣರವರು ಹುಟ್ಟುಹಬ್ಬ ಆಚರಣೆ ಮಾಡಲು ಶಾಸಕರೆಲ್ಲರೂ ಒಂದೆಡೆ ಸೇರಿದ್ದರು. ಹುಟ್ಟುಹಬ್ಬದಲ್ಲಿ ನಾಟಿ ಕೋಳಿ ಮಾಡಿದ್ದರು. ನಾನು ರಂಜಾನ್ ಹಬ್ಬದ ಕಿಟ್ ವಿತರಣೆ ಮಾಡುತ್ತಿದ್ದ ಕಾರಣ ಹೋಗಲು ಆಗಲಿಲ್ಲ.

ಅದಕ್ಕೆ ಆ ಬಣ , ಈ ಬಣ ಅಂತ ಹೇಳುವುದು ಸರಿಯಲ್ಲ ಎಂದು ಹೇಳಿದರು.

ನಾಯಕತ್ವ ಗೊಂದಲ ಮುಂದುವರಿದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂಬ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್ , ಅದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಚೆನ್ನಾಗಿ ಕೆಲಸ ಮಾಡುತ್ತಿದ್ದು,

ಗ್ಯಾರಂಟಿ ಮೂಲಕ ಜನರನ್ನು ತಲುಪಿದೆ. ಮುಂದಿನ ಸಂಘಟನೆಗೆ ಶಕ್ತಿ ಬೇಕಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್ ನಾಯಕತ್ವ ಬೇಕಾಗಿದೆ ಎಂದು ತಿಳಿಸಿದರು.

ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರು ಪತ್ರ ಬರೆದಿದ್ದಾರಲ್ಲ ಎಂಬ ಪ್ರಶ್ನೆಗೆ, ಅದರಲ್ಲಿ ತಪ್ಪೇನಿದೆ. ಎಲ್ಲರಿಗೂ ಆಸೆ ಇರುತ್ತೆ ಅಲ್ವಾ. ಪ್ರಜಾಪ್ರಭುತ್ವದಲ್ಲಿ ಕೇಳುವುದು ತಪ್ಪಲ್ಲ, ಅಧಿಕಾರ ಇದೆ ಕೇಳುತ್ತಿದ್ದಾರೆ ಎಂದು ಹೇಳಿದರು.

ನೂತನ ಶಾಸಕರಿಗೆ ಸಚಿವ ಸ್ಥಾನ ಕೊಡಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ, ಅದು ಮುಖ್ಯಮಂತ್ರಿಗಳ ವೈಯಕ್ತಿಕ ವಿಚಾರ. ಅವರು ಎಲ್ಲರಿಗೂ ಮುಖ್ಯಮಂತ್ರಿ, ಹೇಳಬೇಕು ಹೇಳಿದ್ದಾರೆ. ಆದರೆ, ಜನರ ಅಭಿಪ್ರಾಯ, ಶಾಸಕರ ಅಭಿಪ್ರಾಯವನ್ನೂ ಅವರು ಕೇಳಬೇಕು. ಶಾಸಕರ ಅಭಿಪ್ರಾಯಕ್ಕೂ ಬೆಲೆ, ಕಿಮ್ಮತ್ತು ಇದೆ ಅಲ್ವಾ ಎಂದು ಹೇಳಿದರು.

ನಮ್ಮ ಗುರುಗಳು ಧ್ಯಾನದಲ್ಲಿ ಕೂತಿದ್ದು, ಇನ್ನೂ ಎದ್ದಿಲ್ಲ. ಅವರು ಎದ್ದಮೇಲೆ ಫೈನಲ್ ಡೇಟ್ ಕೊಡುತ್ತಾರೆ.

ಆ ದಿನಾಂಕದ ಒಳಗೆ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಆ ದಿನಾಂಕದ ಒಳಗಡೆ ಆಗಲಿಲ್ಲ ಅಂದರೆ ನಮಗೆ ರಾಜಕಾರಣವೇ ಬೇಡ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

-- 28ಕೆಆರ್ ಎಂಎನ್ 3.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್

----------------------