ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ತಾಲೂಕಿನ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಇದೀಗ ಉಪವಾಸ ಮೌನ ಸತ್ಯಾಗ್ರಹ ಆಚರಿಸುವ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಭೂಹಿತರಕ್ಷಣಾ ಸಂಘ ನಿರ್ಧರಿಸಿದೆ.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ತಾಲೂಕಿನ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಇದೀಗ ಉಪವಾಸ ಮೌನ ಸತ್ಯಾಗ್ರಹ ಆಚರಿಸುವ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಭೂಹಿತರಕ್ಷಣಾ ಸಂಘ ನಿರ್ಧರಿಸಿದೆ.

ಟೌನ್‌ಶಿಪ್ ಯೋಜನೆ ಹಾಗೂ ಜಿಬಿಡಿಎ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಭೈರಮಂಗಲ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಭೂಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೈರಮಂಗಲದ ಶ್ರೀರಾಮ ಮಂದಿರದ ಮುಂಭಾಗ ಕಳೆದ 5 ತಿಂಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಇದೀಗ ಉಪವಾಸ ಮೌನ ಸತ್ಯಾಗ್ರಹದ ಹಾದಿ ಹಿಡಿಯುತ್ತಿದೆ.

ಈ ನಿಟ್ಟಿನಲ್ಲಿ ರೈತರು ಭೈರಮಂಗಲ ಕಂಚುಗಾರನಹಳ್ಳಿ ಗಾಂಧಿ ಗ್ರಾಮ ಸ್ವರಾಜ್ಯ " ಭೂಮಿ ಸತ್ಯಾಗ್ರಹ " ಹೆಸರಲ್ಲಿ ಹೋರಾಟವನ್ನು ತೀವ್ರಗೊಳಿಸಲು ಸಿದ್ಧತೆ ನಡೆಸಿದ್ದಾರೆ.

1934ರ ಜನವರಿ 6 ರಂದು ಬಿಡದಿಗೆ ಮಹಾತ್ಮ ಗಾಂಧಿ ಭೇಟಿ ಕೊಟ್ಟಿದ್ದ ಸ್ಮರಣಾರ್ಥ ಬೈರಮಂಗಲ ಗ್ರಾಮದ ಸರ್ಕಲ್ ನಲ್ಲಿ ಜ.6ರಂದು ಉಪವಾಸ ಮೌನ ಸತ್ಯಾಗ್ರಹ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದಾರೆ. ರಾಜ್ಯಮಟ್ಟದ ಹೋರಾಟಗಾರರ ಸಮ್ಮುಖದಲ್ಲಿ ಭೂಮಿ ಸತ್ಯಾಗ್ರಹಕ್ಕೆ ಚಾಲನೆ ನೀಡುವುದು ಹಾಗೂ ಇದೇ ವೇದಿಕೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕದ ಶತಮಾನೋತ್ಸವ ಆಚರಣೆ-2026 ಕಾರ್ಯಕ್ರಮ ಆಯೋಜನೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.

ಭೂಮಿ ಸತ್ಯಾಗ್ರಹದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಎಸ್.ವರಲಕ್ಷ್ಮಿ, ರಾಜ್ಯ ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಚುಕ್ಕಿ ನಂಜುಂಡಸ್ವಾಮಿ, ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್.ಟಿ, ಹೋರಾಟಗಾರರಾದ ನೂರ್ ಶ್ರೀಧರ್, ಹೊನ್ನೂರು ಪ್ರಕಾಶ್, ವೆಂಕಟೇಶ್, ಮಂಜು ಕಿರಣ್, ಕೆ.ಮಲ್ಲಯ್ಯ, ರಾಘವೇಂದ್ರ, ಅಂಕಪ್ಪ, ಕೃಷ್ಣಯ್ಯ, ಚೀಲೂರು ಮುನಿರಾಜು, ಭೈರೇಗೌಡ, ಚೀಲೂರು ಹರೀಶ್, ಕುಮಾರಸ್ವಾಮಿ ಮುಂತಾದವರು ಭಾಗವಹಿಸಲಿದ್ದಾರೆ.

ಕೋಟ್ .........

ಜಿಬಿಡಿಎ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ "ನಮ್ಮ ಭೂಮಿ-ನಮ್ಮ ಹಕ್ಕು " ಘೋಷಣೆಯಡಿ ಕಳೆದ ಐದಾರು ತಿಂಗಳಿಂದ ಭೈರಮಂಗಲದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ. ಆದರೆ, ಸರ್ಕಾರದ ಅಧಿಕಾರಿಗಳು ಅಥವಾ ಸ್ಥಳೀಯ ಶಾಸಕರಾಗಲಿ ಒಮ್ಮೆಯೂ ರೈತರ ಬಳಿ ಬಂದು ಸಮಸ್ಯೆ ಆಲಿಸಿಲ್ಲ. ಹೀಗಾಗಿ ಹೋರಾಟವನ್ನು ಹಂತಹಂತವಾಗಿ ತೀವ್ರಗೊಳಿಸುವ ನಿಟ್ಟಿನಲ್ಲಿ ಜ.6ರಂದು ಮಹಾತ್ಮ ಗಾಂಧೀಜಿರವರ ಆತ್ಮಕಥೆ ಪುಸ್ತಕದ ಶತಮಾನೋತ್ಸವ ಆಚರಿಸುವ ಜತೆಗೆ ಉಪವಾಸ ಮೌನ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ.

-ಎಚ್.ಪ್ರಕಾಶ್, ಮಾಜಿ ಸದಸ್ಯರು, ತಾಪಂ

3ಕೆಆರ್ ಎಂಎನ್ 6.ಜೆಪಿಜಿ

ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ರೈತರು ಧರಣಿ ನಡೆಸುತ್ತಿರುವುದು.