ಅಕ್ಷರ ಕಲಿಸುವ ಶಿಕ್ಷಕರಿಂದ ರಕ್ತದಾನ ಶಿಬಿರ ಆಯೋಜನೆ ಸಮಾಜಕ್ಕೆ ಮಾದರಿ: ಪಿ.ಎಂ.ನರೇಂದ್ರಸ್ವಾಮಿ

| Published : Sep 06 2024, 01:01 AM IST

ಅಕ್ಷರ ಕಲಿಸುವ ಶಿಕ್ಷಕರಿಂದ ರಕ್ತದಾನ ಶಿಬಿರ ಆಯೋಜನೆ ಸಮಾಜಕ್ಕೆ ಮಾದರಿ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸುವ ಶಿಕ್ಷಕರು ಜೀವ ಉಳಿಸುವ ಪ್ರಯತ್ನ ಮಾಡಿರುವುದು ಉತ್ತಮ ಬೆಳವಣಿಗೆ. ರಾಷ್ಟ್ರದ ಭವಿಷ್ಯತನ್ನು ರೂಪಿಸುವ ಹಾಗೂ ಜನರಿಗೆ ಜ್ಞಾನದ ಬುತ್ತಿ ತುಂಬುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ಗುರಿ ಬದ್ಧತೆಯ ಜತೆಗೆ ಬದಲಾದ ರಾಷ್ಟ್ರದ ವ್ಯವಸ್ಥೆಗೆ ಮುಂದಿನ ಪೀಳಿಗೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಎನ್ನುವ ಪ್ರಾಯಾಣಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಕ್ಷರ ಕಲಿಸುವ ಶಿಕ್ಷಕರಿಂದ ರಕ್ತದಾನ ಶಿಬಿರ ಆಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಎಂಬ ಧ್ಯೇಯದೊಂದಿಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಶಿಬಿರ ಅರ್ಥಪೂರ್ಣವಾಗಿದೆ ಎಂದರು.

ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸುವ ಶಿಕ್ಷಕರು ಜೀವ ಉಳಿಸುವ ಪ್ರಯತ್ನ ಮಾಡಿರುವುದು ಉತ್ತಮ ಬೆಳವಣಿಗೆ. ರಾಷ್ಟ್ರದ ಭವಿಷ್ಯತನ್ನು ರೂಪಿಸುವ ಹಾಗೂ ಜನರಿಗೆ ಜ್ಞಾನದ ಬುತ್ತಿ ತುಂಬುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ಗುರಿ ಬದ್ಧತೆಯ ಜತೆಗೆ ಬದಲಾದ ರಾಷ್ಟ್ರದ ವ್ಯವಸ್ಥೆಗೆ ಮುಂದಿನ ಪೀಳಿಗೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಎನ್ನುವ ಪ್ರಾಯಾಣಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ದೇಶ ಸುಭದ್ರವಾಗುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ರಾಜಕೀಯದಿಂದ ಹೊರತಾಗಿಬೇಕು. ಇಲ್ಲದಿದ್ದರೆ ದೇಶ ಭಾವನ್ಮಾತಕವಾಗಿ ಛಿದ್ರವಾಗುವ ಆತಂಕ ಎದುರಾಗುತ್ತದೆ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಹತ್ತಾರು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆ ಉನ್ನತ ಸೌಲಭ್ಯ ಒದಗಿಸುತ್ತಿದ್ದರೂ ಆದರೂ ಖಾಸಗಿ ಕ್ಷೇತ್ರ ಸರ್ಕಾರಕ್ಕೆ ಸವಾಲಾಗಿರುವ ಸಂದರ್ಭದಲ್ಲಿ ಶಿಕ್ಷಕರು ಜನರ ಮನಪರಿವರ್ತನೆ ಮಾಡಿ ಸರ್ಕಾರಿ ದಾಖಲಾತಿ ಹೆಚ್ಚಳಕ್ಕೆ ಮುಂದಾಗುವುದರ ಮೂಲಕ ಮಕ್ಕಳ ಬೆಳವಣಿಗೆ ಶ್ರಮಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ 55 ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು. ವಿವಿಧ ಶಾಲೆಗಳ 20 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎನ್.ಲೋಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ, ತಾಪಂ.ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಸದಸ್ಯ ನೂರುಲ್ಲಾ, ಸೆಸ್ಕ್ ಎಇಇ ಎಚ್.ಎಸ್.ಪ್ರೇಮ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಎಇಇ ಹರೀಶ್ ಕುಮಾರ್, ಎಂಜಿನಿಯರ್ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ತಾಲೂಕು ಘಟಕದ ಅಧ್ಯಕ್ಷ ಎಚ್.ನಾಗೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಪ್ರಮುಖರಾದ ಬಿ.ಟಿ.ರಾಮಲಿಂಗಯ್ಯ, ಗುರುಸ್ವಾಮಿ, ನಿಂಗರಾಜು, ಪುಟ್ಟಸ್ವಾಮಿ, ಆರ್.ದಾಸೇಗೌಡ, ಸಿದ್ದೇಗೌಡ, ಉದಯ್, ಮಲ್ಲೇಶ್, ಮಹೇಶ್, ವಿ.ಎಲ್.ಬಸವರಾಜು ಇದ್ದರು.