ದೇವನಹಳ್ಳಿ: ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಗೂ ಮುಖ್ಯ ಪಾತ್ರವಿದೆ. ಮಕ್ಕಳ ಮನಸ್ಸು ಮೃದು, ಅವರನ್ನು ಭಯದಿಂದ ಅಲ್ಲ ಪ್ರೀತಿಯಿಂದ ಬೆಳೆಸಬೇಕು. ತಂದೆ- ತಾಯಿಯ ನಡವಳಿಕೆಯೇ ಮಕ್ಕಳಿಗೆ ಮಾದರಿ. ಎಲ್ಲ ಅಪ್ಪಂದಿರಿಗೂ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು ಎಂದು ಕಾರ್ಮಲ್ ಆಂಗ್ಲ ಶಾಲಾ ಮುಖ್ಯಶಿಕ್ಷಕಿ ಭಾವನ ಹೇಳಿದರು.
ಪಟ್ಟಣದ ಕಾರ್ಮಲ್ ಆಂಗ್ಲ ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಾಚರಣೆ ಮನರಂಜನಾ ಆಟಗಳಲ್ಲಿ ಅಪ್ಪಂದಿರು ಭಾಗವಹಿಸುವಿಕೆ ಮುಖ್ಯ. ಈ ದಿನ ನಿಮ್ಮ ಮಕ್ಕಳೊಂದಿಗೆ ಕಳೆಯುವ ಸುಂದರ ನೆನಪುಗಳಲ್ಲಿ ಒಂದಾಗಿ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.ಕಾರ್ಯದರ್ಶಿ ವೈ.ಸಿ.ಚೇತನ್ ಯಾದವ್ ಮಾತನಾಡಿ, ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ, ಅಪ್ಪ ಅಂದರೆ ಪ್ರೀತಿ, ಹೀಗೆ ತಂದೆಯನ್ನು ಪದಗಳಲ್ಲಿ ವರ್ಣಿಸಲು, ಹೊಗಳಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ. ತಂದೆ ಜೊತೆಗಿದ್ದರೆ ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಅಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿರೂಪ ಅಪ್ಪ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಉಷಾಪೂರ್ಣಚಂದ್ರ, ಸಹಶಿಕ್ಷಕರಾದ ಗೀತಾ, ಚಂದ್ರಮ್ಮ, ಅಂಬುಜಾ, ಪಾರ್ವತಿ, ರಮ್ಯ, ರಘು, ರಾಮಕೃಷ್ಣ, ಪ್ರಮೀಳಾ ದೇವಿಕಾ ಇತರರಿದ್ದರು.೨೦ ದೇವನಹಳ್ಳಿ ಚಿತ್ರಸುದ್ದಿ: ೦೧
ದೇವನಹಳ್ಳಿಯ ಕಾರ್ಮಲ್ ಆಂಗ್ಲ ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆ ನಡೆಯಿತು.