ರಬಕವಿ-ಬನಹಟ್ಟಿ: ತಾಲೂಕಿನ ಕನಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದ್ದು, ಶುಕ್ರವಾರ ೧೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಬಕವಿ-ಬನಹಟ್ಟಿ: ತಾಲೂಕಿನ ಕನಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದ್ದು, ಶುಕ್ರವಾರ ೧೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಗುರುವಾರ ರಾತ್ರಿಯಿಂದಲೇ ಚಳಿಯ ತೀವ್ರತೆ ಹೆಚ್ಚಿದೆ. ಶುಕ್ರವಾರ ಬೆಳಗ್ಗೆ ೧೦ ಗಂಟೆಯಾದರೂ ಚಳಿಯ ಪ್ರಮಾಣ ಕಡಿಮೆಯಾಗಿರಲಿಲ್ಲ. ಬುಧವಾರ ೧೩ ಡಿಗ್ರಿಯಷ್ಟು ವಾತಾವರಣ ಒಮ್ಮೆಲೆ ೨ ಡಿಗ್ರಿಯಷ್ಟು ಕುಸಿದ್ದರಿಂದ ಚಳಿಯ ತೀವ್ರತೆ ಹೆಚ್ಚಿದ್ದು, ಇನ್ನಷ್ಟು ಚಳಿಯ ತೀವ್ರತೆ ಹೆಚ್ಚಾಗಲಿದೆಯೆಂಬುದು ತಜ್ಞರ ಹೇಳಿಕೆಯಾಗಿದೆ. ಚಳಿಯ ಪ್ರಮಾಣ ತಗ್ಗಿಸಲು ಮನೆ ಬಳಿ ಸೇರಿದಂತೆ ಇತರೆಡೆ ಜನರು ಬೆಂಕಿ ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ ವಾಯು ವಿಹಾರಿಗಳಂತೂ ಚಳಿಯ ತೀವ್ರತೆ ಎದುರಿಸಲಾಗದೆ ನಡುಗಿದರು.

ರೈತರು ಒಟ್ಟುಗೂಡಿ ಹೊಲದಲ್ಲಿ ಬೆಂಕಿ ಹಾಕಿ ಮೈ ಕಾಯಿಸಿದರೂ, ಬೆಂಕಿ ಕಾವು ಕಡಿಮೆಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗಿ ಎಲ್ಲರನ್ನೂ ನಡುಗಿಸುತ್ತಿದೆ. ರಬಕವಿ-ಬನಹಟ್ಟಿ ತಾಲೂಕಿನ ರೈತ ಸುಭಾಸ ಮಧುರಖಂಡಿ.