ನಾವು ಮಾಡಿದ ಕೆಲಸ ಜನರು ಮೆಚ್ಚುವಂತಿರಬೇಕು: ಶಿವರಾಜ ತಂಗಡಗಿ

| Published : Jun 19 2024, 01:04 AM IST

ನಾವು ಮಾಡಿದ ಕೆಲಸ ಜನರು ಮೆಚ್ಚುವಂತಿರಬೇಕು: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

. ನಾವು ಮಾಡಿದ ಕೆಲಸ ಜನರು ನಮ್ಮನ್ನು ಮೆಚ್ಚುವಂತಿರಬೇಕೆಂದರು. ಆದರೆ ಬರೀ ಕಾಟಾಚಾರಕ್ಕೆ ಕಾಮಗಾರಿಗಳಗೆ ಭೂಮಿ ಪೂಜೆ ಮಾಡುವುದು ಸರಿ ಅಲ್ಲ.

ಗಂಗಾವತಿ ತಾಲೂಕಿನ ಡಾಕ್ಟರ್ ಕ್ಯಾಂಪಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ

ಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನ ಡಾಕ್ಟರ್ ಕ್ಯಾಂಪಿನಲ್ಲಿ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಡಾಕ್ಟರ್ ಕ್ಯಾಂಪ್‌ನಿಂದ ಕನಕಗಿರಿ ಮುಖ್ಯರಸ್ತೆಯ ಡಾಂಬರೀಕರಣಕ್ಕಾಗಿ ₹39. 26 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಈ ಹಿಂದೆ ಶಾಸಕರಾಗಿದ್ದ ಬಸವರಾಜ ದಡೇಸೂಗರು ಅವರು ಕಕ್ಕರಗೋಳ ಗ್ರಾಮದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಎಲ್ಲಿ ಹೋಯಿತು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು. ಈ ಹಿಂದೆ ಶಾಸಕರಾಗಿದ್ದ ಬಸವರಾಜ ಎರಡು ಬಾರಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದಾರೆ. ಅದರೆ ಒಂದು ಪುಟ್ಟಿ ಮರಳು ಬಿದ್ದಿಲ್ಲ. ಈ ಕಾಮಗಾರಿಯ ಹಣ ಎಲ್ಲಿ ಹೋಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆಂದು ಸಚಿವರು ತಿಳಿಸಿದರು. ಇನ್ನೊಬ್ಬರ ಬಗ್ಗೆ ಮಾಜಿ ಶಾಸಕ ಬಸವರಾಜ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ನಾವು ಮಾಡಿದ ಕೆಲಸ ಜನರು ನಮ್ಮನ್ನು ಮೆಚ್ಚುವಂತಿರಬೇಕೆಂದರು. ಆದರೆ ಬರೀ ಕಾಟಾಚಾರಕ್ಕೆ ಕಾಮಗಾರಿಗಳಗೆ ಭೂಮಿ ಪೂಜೆ ಮಾಡುವುದು ಸರಿ ಅಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ ಗೋನಾಳ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿರುಪಾಕ್ಷಗೌಡ, ತಾಪಂ ಮಾಜಿ ಸದಸ್ಯ ಸಿದ್ದನಗೌಡ, ಬಸಯ್ಯಸ್ವಾಮಿ, ಸತ್ಯಪ್ಪ, ಶ್ರೀನಿವಾಸ, ಬಸವರಾಜ, ನಾಗಪ್ಪ, ಹನುಮಂತ ಗೋನಾಳ್, ಸಿದ್ದನಗೌಡ ಗುಡೂರು, ಸಿದ್ದನಗೌಡ ಖ್ಯಾಡೇದ್, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಸೇರಿದಂತೆ ಇತರರಿದ್ದರು.