200 ಎಕ್ರೆಯಲ್ಲಿ ಯಂತ್ರ ಶ್ರೀ ಯೋಜನೆಯಡಿ ನಾಟಿ ಕಾರ್ಯ: ಶಿವಕುಮಾರ್

| Published : Jul 18 2024, 01:31 AM IST

200 ಎಕ್ರೆಯಲ್ಲಿ ಯಂತ್ರ ಶ್ರೀ ಯೋಜನೆಯಡಿ ನಾಟಿ ಕಾರ್ಯ: ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭತ್ತದ ನಾಟೀ ಯಾಂತ್ರೀಕರಿಸಿದ್ದು ತಾಲೂಕಿನಲ್ಲಿ 200 ಎಕರೆ ಬತ್ತದ ಗದ್ದೆಯಲ್ಲಿ ಯಂತ್ರ ಶ್ರೀ ಯೋಜನೆಯಡಿ ನಾಟಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಪ್ಪ, ನರಸಿಂಹರಾಜಪುರ ತಾಲೂಕಿನ ಕೃಷಿ ಮೇಲ್ವಿಚಾರಕ ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಭತ್ತದ ನಾಟೀ ಯಾಂತ್ರೀಕರಿಸಿದ್ದು ತಾಲೂಕಿನಲ್ಲಿ 200 ಎಕರೆ ಬತ್ತದ ಗದ್ದೆಯಲ್ಲಿ ಯಂತ್ರ ಶ್ರೀ ಯೋಜನೆಯಡಿ ನಾಟಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಪ್ಪ, ನರಸಿಂಹರಾಜಪುರ ತಾಲೂಕಿನ ಕೃಷಿ ಮೇಲ್ವಿಚಾರಕ ಶಿವಕುಮಾರ್ ತಿಳಿಸಿದರು.ಮಂಗಳವಾರ ತಾಲೂಕಿನ ಕೈಮರ ವಲಯದ ಸುತ್ತ ಗ್ರಾಮದ ರಾಘವ ಪೂಜಾರಿ ಹಾಗೂ ದಿನೇಶ್ ಪೂಜಾರಿ ಅವರ 3 ಎಕರೆ ಬತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ನಾಟೀ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಬತ್ತದ ಗದ್ದೆಗಳು ಕಣ್ಮರೆಯಾಗುತ್ತಿದೆ. ಕಳೆದ 5 ವರ್ಷಗಳಿಂದ ಧ.ಗ್ರಾ.ಯೋಜನೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವ ಯಂತ್ರಶ್ರೀ ಬತ್ತದ ಬೇಸಾಯದ ಪದ್ಧತಿಯನ್ನು ರೈತರಿಗೆ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸುತ್ತಿದ್ದೇವೆ. ಸುತ್ತ ಗ್ರಾಮದಲ್ಲಿ ಅಂದಾಜು 60 ಎಕ್ರೆ ಗದ್ದೆಯಲ್ಲಿ ಯಂತ್ರಶ್ರೀ ಪದ್ಧತಿಯಲ್ಲಿ ಬೇಸಾಯ ಮಾಡಲಾಗುತ್ತಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಯಂತ್ರಶ್ರೀ ಪದ್ಧತಿಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ರೈತರು ಬತ್ತ ಬೆಳೆಯು ವುದನ್ನು ಕಡಿಮೆ ಮಾಡಿ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಆದರೆ, ಆಹಾರ ಬೆಳೆ ಅತಿ ಅವಶ್ಯಕವಾಗಿದ್ದು ರೈತರು ಯಂತ್ರಶ್ರೀ ಪದ್ಧತಿ ಪ್ರಕಾರ ಬತ್ತದ ಬೆಳೆ ಬೆಳೆದರೆ ಖರ್ಚು ಕಡಿಮೆಯಾಗಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯವರು ಶ್ರೀ ಪದ್ಧತಿಯಿಂದ ಯಂತ್ರದಲ್ಲಿ ಬತ್ತದ ಬೇಸಾಯವನ್ನು ಪ್ರಾತ್ಯಾಕ್ಷಿಕೆಯೊಂದಿಗೆ ತೋರಿಸಿದ್ದು ರೈತರು ಈ ಪದ್ಧತಿ ಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗುಬ್ಬಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್, ಕೃಷಿ ಇಲಾಖೆ ಸಹಾಯಕ ಪ್ರಬಂಧಕ ಮಮತಾ, ಸಿಎಚ್ಎಸ್ಸಿ ಪ್ರಬಂಧಕ ದೀಕ್ಷಿತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಾಂತ್ರಶ್ರೀ ಅನುಷ್ಠಾನಗೊಳಿಸುವ ರೈತರು ಭಾಗವಹಿಸಿದ್ದರು.