ಸಾರಾಂಶ
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ತುಂಗಾ ಜಲಾಯಶದಿಂದ ಹೆಚ್ಚುವರಿ ನೀರು ನದಿಗೆ ಹರಿಸಿರುವ ಕಾರಣ ಹೊನ್ನಾಳಿಯಲ್ಲಿ ಮಂಗಳವಾರ ರಾತ್ರಿ ನದಿ ನೀರಿನ ಮಟ್ಟ 9.800 ಮೀ.ಗೆ ಏರಿಕೆಯಾಗಿದೆ. ಪರಿಣಾಮ ಹೊನ್ನಾಳಿ ಪಟ್ಟಣದ ಜನವಸತಿ ತಗ್ಗು ಪ್ರದೇಶವಾದ ಬಾಲರಾಜ್ ಘಾಟ್ ಸಮೀಪಕ್ಕೆ ನೀರು ಬಂದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
- ಹೊನ್ನಾಳಿ ಪಟ್ಟಣ ತಗ್ಗು ಪ್ರದೇಶ ಬಾಲರಾಜ್ ಘಾಟ್ ಬಳಿ ಎಸಿ ನೇತೃತ್ವದಲ್ಲಿ ತಾಲೂಕು ಆಡಳಿತ ಪರಿಶೀಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ತುಂಗಾ ಜಲಾಯಶದಿಂದ ಹೆಚ್ಚುವರಿ ನೀರು ನದಿಗೆ ಹರಿಸಿರುವ ಕಾರಣ ಹೊನ್ನಾಳಿಯಲ್ಲಿ ಮಂಗಳವಾರ ರಾತ್ರಿ ನದಿ ನೀರಿನ ಮಟ್ಟ 9.800 ಮೀ.ಗೆ ಏರಿಕೆಯಾಗಿದೆ. ಪರಿಣಾಮ ಹೊನ್ನಾಳಿ ಪಟ್ಟಣದ ಜನವಸತಿ ತಗ್ಗು ಪ್ರದೇಶವಾದ ಬಾಲರಾಜ್ ಘಾಟ್ ಸಮೀಪಕ್ಕೆ ನೀರು ಬಂದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಯಾವುದೇ ಸಂದರ್ಭದಲ್ಲಿ ನದಿ ನೀರಿನಮಟ್ಟ ಇನ್ನೂ ಹೆಚ್ಚಿಯಾಗಬಹುದು. ಈ ಕಾರಣಕ್ಕೆ ತೀರಾ ತಗ್ಗು ದೇಶದಲ್ಲಿರುವ 13 ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಉಪವಿಭಾಗಾಧಿಕಾರಿ ಅಭಿಷೇಕ್ ಈ ಸಂದರ್ಭ ಮಾತನಾಡಿ, ಚಿಕ್ಕಮಗಳೂರು ಶೃಂಗೇರಿ, ಕೊಪ್ಪ, ಮತ್ತಿತರ ಕಡೆಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಭದ್ರಾ ಜಲಾಶಯಕ್ಕೂ ಹೆಚ್ಚಿನ ಒಳಹರಿವು ಉಂಟಾಗಿದೆ. ಒಂದೇ ದಿನದಲ್ಲಿ ಸುಮಾರು 3.50 ಅಡಿಯಷ್ಟು ಹೆಚ್ಚು ನೀರು ಜಲಾಶಯಕ್ಕೆ ಬಂದಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಕೂಡ ಉತ್ತಮ ಮಳೆ ಆಗುತ್ತಿರುವ ಕಾರಣ ತುಂಗಾನದಿಗೆ ಸುಮಾರು 61.70 ಕ್ಯುಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಈ ಕಾರಣಗಳಿಂದ ನದಿ ಪಾತ್ರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಜನ-ಜಾನುವಾರುಗಳು ನದಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಸತತ ಮಳೆಯಿಂದಾಗಿ ಚನ್ನಗಿರಿ ತಾಲೂಕಿನಲ್ಲಿ 6 ಮನೆಗಳ ಹಾನಿ ಹಾಗೂ ಹೊನ್ನಾಳಿಯಲ್ಲಿ 1 ಮನೆಯ ಮಹಡಿ ಗೋಡಿ ಬಿದ್ದು ಹಾನಿಯಾಗಿದೆ ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಬೆಸ್ಕಾಂ ಎ.ಇ.ಇ. ಜಯಪ್ಪ, ಕಂದಾಯ, ಪುರಸಭೆ, ಬೆಸ್ಕಾಂ ಇಲಾಖೆಗಳ ನೌಕರರು ಇದ್ದರು.- - -
ಬಾಕ್ಸ್ ಮಳೆ ವಿವರ ಹೊನ್ನಾಳಿ 45.0 ಮಿಮೀ. ಸವಳಂಗ 5.4. ಬೆಳಗುತ್ತಿ 66.8.ಹರಳಹಳ್ಳಿ 43.5, ಗೋವಿನಕೋವಿ 38.4.ಕುಂದೂರು 34.5.ಸಾಸ್ವೇಹಳ್ಳಿ 38.5 ಮಿಮೀನಷ್ಟು ಮಳೆಯಾಗಿದೆ, ಸರಾಸರಿ 46.6 ಮಿ.ಮೀ ಮಳೆಯಾಗಿದೆ.- - - -17ಎಚ್.ಎಲ್.ಐ1: ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಸಮೀಪ ಮಂಗಳವಾರ ಮನೆಗಳ ಸಮೀಪಕ್ಕೆ ನದಿ ನೀರು ಬಂದಿರುವುದು.
-17ಎಚ್.ಎಲ್.ಐ,1ಎ: ತುಂಗಾಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿ ಮಂಗಳವಾರ ರಾತ್ರಿ ಹೊನ್ನಾಳಿಯ ಪಟ್ಟಣದ ಬಾಲರಾಜ್ ಘಾಟ್ ಜನವಸತಿ ಪದೇಶದ ಸಮೀಪ ನೀರು ಬಂದಿದ್ದು, ಉಪವಿಭಾಗಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು.