ರಾಮನಗರ: ವಿದ್ಯಾರ್ಥಿಗಳಿಗೆ ಓದು ಬರಹದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸಿದಾಗ ಮಾತ್ರ‍್ರ ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಲು ಸಾಧ್ಯ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅಭಿಪ್ರಾಯಪಟ್ಟರು.
ರಾಮನಗರ: ವಿದ್ಯಾರ್ಥಿಗಳಿಗೆ ಓದು ಬರಹದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸಿದಾಗ ಮಾತ್ರ‍್ರ ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಲು ಸಾಧ್ಯ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಮೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಂಸ್ಕೃತಿಕ ಸ್ಪರ್ಧೆಗಳು ಎಂದರೆ ಕೇವಲ ನೃತ್ಯ, ಸಂಗೀತ, ನಾಟಕ, ಭಾಷಣ, ರಸಪ್ರಶ್ನೆ, ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ ಗಳಾಗಿವೆ. ಇಂತಹ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳ ಸೃಜನಶೀಲತೆ, ವೈವಿಧ್ಯಮಯ ಪ್ರತಿಭೆ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಎಂದರು.ಶ್ರೀರಾಮನ ವೈಭವವನ್ನು ಸಂಭ್ರಮದಿಂದ ಆಚರಿಸಬೇಕೆಂದು ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ ಅವರ ಕನಸ್ಸಿನಂತೆ ಇಂದು ಕ್ಷೇತ್ರದ ಎಲ್ಲ ಹೋಬಳಿಗಳು ಮತ್ತು ನಗರ ಭಾಗದಲ್ಲಿ 20ಕ್ಕೂ ಹೆಚ್ಚು ಸ್ಪರ್ಧೆಗಳು ಯಶಸ್ವಿಯಾಗಿ ನಡೆಯುವ ಮೂಲಕ ನನಸಾಗುತ್ತಿವೆ. ಯುವಕ-ಯುವತಿಯರಿಗೆ ಹಲವು ವೇದಿಕೆ ನೀಡಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಕ್ಕಿದೆ. ಈಗಾಗಲೇ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಕ್ರೀಡೆಗಳಲ್ಲಿ ಇಲ್ಲಿ ಆಯ್ಕೆಯಾದವರನ್ನು ಕನಕೋತ್ಸವಕ್ಕೆ ಕಳುಹಿಸಿಕೊಡಲಾಗುವುದು ಎಂದ ಅವರು ರಾಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಲೆಂದು ಆಶಿಸಿದರು.
ಕಲೆ, ಸಾಹಿತ್ಯ, ಸಂಸ್ಕೃತಿ ಮನುಷ್ಯನ ಬೆಳವಣಿಗೆಗೆ ಸಹಕಾರಿಯಾಗಿವೆ. ಇವುಗಳ ಬಗ್ಗೆ ಅಭಿರುಚಿ ಯನ್ನು ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಸಹಜವಾಗಿ ವಿವಿಧ ಕಲೆಗಳು ಇದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ ಎಂದು ಚೇತನ್ ಕುಮಾರ್ ಕಿವಿಮಾತು ಹೇಳಿದರು.ಈ ವೇಳೆ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಸದಸ್ಯರಾದ ಬೈರೇಗೌಡ, ಅಸ್ಮದ್, ಅಣ್ಣು, ಸಮದ್, ನಿಜಾಂಮುದ್ದೀನ್ ಷರೀಪ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಮಾಯಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ರಂಜಿತ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಮುಷೀರ್, ಸಾಂಸ್ಕೃತಿಕ ಸಂಘಟಕರಾದ ರೇಣುಕಾಪ್ರಸಾದ್, ಲಿಂಗರಾಜು, ಮೋಹನ್, ಅರೇಹಳ್ಳಿ ರವಿ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ವರ್ಣರಂಜಿತ ಉಡುಗೆ-ತೊಡುಗೆಗಳೊಂದಿಗೆ ಚಲನಚಿತ್ರ ಗೀತೆಗಳು, ದೇಶಭಕ್ತಿ ಗೀತೆಗಳಿಗೆ ನಡೆಸಿಕೊಟ್ಟ ನೃತ್ಯಗಳು ನೋಡುಗರ ಗಮನ ಸೆಳೆದವು.ಕೋಟ್ .............
ಶಾಲೆಗಳು ನಮ್ಮ ಕಲೆ, ಸಂಸ್ಕೃತಿ ಬೆಳೆಸುವ ಕೇಂದ್ರಗಳಾಗಿವೆ. ನಶಿಸಿ ಹೋಗುತ್ತಿರುವ ಕಲೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಶಾಲೆಗಳು ಮತ್ತು ಶಿಕ್ಷಕರುಗಳ ಮೇಲಿದೆ. ಮಕ್ಕಳಲ್ಲಿ ನಾಡು, ನುಡಿ, ರಾಷ್ಟ್ರದ ಬಗ್ಗೆ ಗೌರವ ಭಾವನೆ ಬರಬೇಕಾದರೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಬೇಕು. ಮಕ್ಕಳನ್ನು ಶಿಕ್ಷಣಕ್ಕೆ ಸೀಮಿತಗೊಳಿಸದೆ ನಾಡಿನ ಶ್ರೀಮಂತ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸಬೇಕು.-ಎ.ಬಿ.ಚೇತನ್‌ಕುಮಾರ್, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ.
ಬಾಕ್ಸ್..........................ರಾಮೋತ್ಸವದಲ್ಲಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಆಯ್ಕೆಯಾದ ವಿಜೇತ ತಂಡಗಳು :
ಕ್ರಿಕೆಟ್ ಪಂದ್ಯಾವಳಿ : ರಾಮನಗರದ ಹೊಯ್ಸಳ ಕ್ರಿಕೆಟ್ ತಂಡ (ಪ್ರಥಮ), ಗೌತಮ್ ಇಲವೆನ್ ತಂಡ (ದ್ವಿತೀಯ), ಹಾರೋಹಳ್ಳಿ ಹಿಲ್‌ಸೈಡ್-ಬಿ ತಂಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಕಬಡ್ಡಿ ಪುರುಷರ ವಿಭಾಗ : ಯೂತ್ ಬಾಯ್ಸ್, ರಾಮನಗರ (ಪ್ರಥಮ), ಭಜರಂಗಿ ಭಾಯ್ಸ್ (ದ್ವಿತೀಯ), ತೂಕಸಂದ್ರ (ತೃತೀಯ), ಚಾಲುಕ್ಯ ತಂಡ (ನಾಲ್ಕನೇಸ್ಥಾನ) ಪಡೆದಿವೆ. ಕಬಡ್ಡಿ ಮಹಿಳೆಯರ ವಿಭಾಗ : ಸರ್ಕಾರಿ ಕಾನೂನು ಕಾಲೇಜು (ಪ್ರಥಮ), ಹಾರೋಹಳ್ಳಿ ಭಜರಂಗಿ ತಂಡ (ದ್ವಿತೀಯ), ಮರಳವಾಡಿ ಸ.ಪ.ಪೂ.ಮಹಿಳಾ ಕಾಲೇಜು (ತೃತೀಯ), ಹಾರೋಹಳ್ಳಿ ಮಹಾತ್ಮ ಪಿಯು ಕಾಲೇಜು (ನಾಲ್ಕನೇ) ಸ್ಥಾನ. 17ನೇ ವರ್ಷದ ಬಾಲಕರ ವಿಭಾಗ : ಯಂಗ್‌ಬಾಯ್ಸ್ (ಪ್ರಥಮ), ತೂಕಸಂದ್ರ (ದ್ವಿತೀಯ), ಬಾಲಗೇರಿ ಬಾಯ್ಸ್ (ತೃತೀಯ), ಹಾರೋಹಳ್ಳಿ ಚಾಮುಂಡೇಶ್ವರಿ (ನಾಲ್ಕನೇಸ್ಥಾನ). ಬಾಲಕಿಯರ ವಿಭಾಗ : ಮರಳವಾಡಿ ಸ್ಪೂರ್ತಿವಿದ್ಯಾನಿಕೇತನ್ (ಪ್ರಥಮ), ಚನ್ನಮಾನಹಳ್ಳಿ ಪಿಎಂಶ್ರೀ (ದ್ವಿತೀಯ), ರಾಮನಗರ ಟೌನ್ ಎಂಡಿಆರ್‌ಎಸ್ (ತೃತೀಯ), ಬನ್ನಿಕುಪ್ಪೆ.ಟಿ (ನಾಲ್ಕನೆ) ಸ್ಥಾನ ಪಡೆದಿದ್ದಾರೆ.
ವಾಲಿಬಾಲ್ 17ವಯೋಮಿತಿ ಬಾಲಕರ ವಿಭಾಗ : ರಾಮನಗರದ ಠ್ಯಾಗೋರ್ ಸ್ಕೂಲ್ (ಪ್ರಥಮ), ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) (ದ್ವಿತೀಯ), ಗಾಣಾಳುದೊಡ್ಡಿ (ಹಾರೋಹಳ್ಳಿ) (ತೃತೀಯ) ಪಡೆದಿವೆ. ಬಾಲಕಿಯರ ವಿಭಾಗ : ಎಂಡಿಆರ್‌ಎಸ್ ದೊಡ್ಡಬಾದಿಗೆರೆ (ಪ್ರಥಮ), ರಾಮನಗರ, ಜಿಎಚ್‌ಎಸ್ (ದ್ವಿತೀಯ), ಜಿಎಚ್‌ಪಿಎಸ್ ಹನುಮಂತನಗರ ರಾಮನಗರ (ತೃತೀಯ) ಸ್ಥಾನ ಪಡೆದಿದ್ದಾರೆ. ವಾಲಿಬಾಲ್ ಪುರುಷರ ವಿಭಾಗ : ಗಾಣಾಳುದೊಡ್ಡಿ (ಹಾರೋಹಳ್ಳಿ) (ಪ್ರಥಮ), ತಾಮಸಂದ್ರ ವಿವೇಕ್ ಬಾಯ್ಸ್ (ದ್ವಿತೀಯ), ಶೈನಿಂಗ್ ಸ್ಟರ‍್ಸ್ (ತೃತೀಯ), ವಾಲಿಬಾಲ್ ಮಹಿಳೆಯರ ವಿಭಾಗ : ಬಿಜಿಎಸ್ ಪಿಯು ಕಾಲೇಜು ರಾಮನಗರ (ಪ್ರಥಮ), ಸರ್ಕಾರಿ ಕಾನೂನು ಕಾಲೇಜು (ದ್ವಿತೀಯ), ಬಾಲಕಿಯರ ಕಾಲೇಜು ರಾಮನಗರ (ತೃತೀಯ) ಸ್ಥಾನ ಪಡೆದಿವೆ.ಥ್ರೋಬಾಲ್ 17 ವಯೋಮಿತಿ ಬಾಲಕರ ವಿಭಾಗ : ಹೋಲಿ ಕ್ರೆಸ್ಸೆಂಟ್ ಸ್ಕೂಲ್ ರಾಮನಗರ (ಪ್ರಥಮ) ಜಿಎಚ್‌ಎಸ್ ಬನವಾಸಿಹಾರೋಹಳ್ಳಿ (ದ್ವಿತೀಯ), ಜಿಎಚ್‌ಎಸ್ ಹರೀಸಂದ್ರ (ತೃತೀಯ), ಬಾಲಕಿಯರ ವಿಭಾಗ : ಎಂಡಿಆರ್‌ಎಸ್ ದೊಡ್ಡಬಾದಿಗೆರೆ (ಪ್ರಥಮ), ಬಿಎಸ್‌ವಿಪಿ ರಾಮನಗರ (ದ್ವಿತೀಯ), ಶರತ್ ಮೆಮೋರಿಯಲ್ ಸ್ಕೂಲ್ ರಾಮನಗರ (ತೃತೀಯ), ಥ್ರೋಬಾಲ್ ಪುರುಷರ ವಿಭಾಗ : ಕೆ.ಪಿ.ಬಾಯ್ಸ್ ರಾಮನಗರ, ಟಿಪ್ಪು ಬಾಯ್ಸ್ (ದ್ವಿತೀಯ), ಹನುಮಂತನಗರ ಬಾಯ್ಸ್ (ತೃತೀಯ), ಥ್ರೋಬಾಲ್ ಮಹಿಳೆಯರ ವಿಭಾಗ : ಸಾವಿತ್ರಿಬಾಫುಲೆ ತಂಡ (ಪ್ರಥಮ), ಕಿತ್ತೂರುರಾಣಿ ಚನ್ನಮ್ಮ ತಂಡ (ದ್ವಿತೀಯ), ಸಾನಿಯಾ ಮಿರ್ಜಾ ತಂಡ (ತೃತೀಯ) ಸ್ಥಾನ ಪಡೆದುಕೊಂಡಿವೆ.
16ಕೆಆರ್ ಎಂಎನ್ 2,3.ಜೆಪಿಜಿ2.ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಮೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗೆ ಎ.ಬಿ.ಚೇತನ್ ಕುಮಾರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
3.ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.