ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನಡೆದ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಿತು. ಕಳೆದ ನವೆಂಬರ್ 3 ರಂದೇ ಚುನಾವಣೆ ನಡೆದಿತ್ತಾದರೂ ಸಹ ಸದಸ್ಯರೋರ್ವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮತ ಎಣಿಕೆಗೆ ತಡೆ ಬಿದ್ದಿತ್ತು.ಒಟ್ಟು 14 ನಿರ್ದೇಶಕರ ಆಯ್ಕೆ ನಡೆಯಿತು. ಕಸಬಾ ಮತ್ತು ದಂಡಿನಶಿವರದ ಸಾಲಗಾರರ ವಿಭಾಗದಿಂದ 7 ಸ್ಥಾನಗಳಿಗೆ 14 ಮಂದಿ ಸ್ಪರ್ಧಿಸಿದ್ದರು. 7 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ಟಿ.ಎಸ್.ಬೋರೇಗೌಡ ಮತ್ತು ಟಿ.ಎಸ್.ಶ್ರೀಕಾಂತ್ ನೇತೃತ್ವದ ತಂಡಗಳಿಸಿತು. ದಬ್ಬೇಘಟ್ಟ ಮತ್ತು ಮಾಯಸಂದ್ರದ ಸಾಲಗಾರರ ವಿಭಾಗದಿಂದ 6 ಸ್ಥಾನಗಳಿಗೆ 18 ಮಂದಿ ಸ್ಪರ್ಧಿಸಿದ್ದರು. 6 ಸ್ಥಾನಗಳಲ್ಲಿ 5 ಸ್ಥಾನ ದಬ್ಬೇಘಟ್ಟ ಉಗ್ರೇಗೌಡ ಮತ್ತು ಹೊಣಕೆರೆ ಮೂಡಲಗಿರಿಗೌಡರ ನೇತೃತ್ವದ ತಂಡಗಳಿಸಿತು. ಸದ್ಯ ಎರಡೂ ತಂಡಗಳು ಒಂದೇ ಆಗಿರುವುದರಿಂದ ಈ ಎರಡೂ ತಂಡದಿಂದ 14 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗಳಿಸಿದೆ. ಅಲ್ಲದೇ ಸಾಲಗಾರರಲ್ಲದ ಕ್ಷೇತ್ರದಿಂದ ಜಯಗಳಿಸಿರುವ ಮಾದಿಹಳ್ಳಿ ಲಕ್ಷ್ಮೀಕಾಂತ್ ಸಹ ಈ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಒಟ್ಟು 14 ಸಾನಕ್ಕೆ 11 ಸ್ಥಾನಗಳಲ್ಲಿ ಜಯಗಳಿಸಿದಂತಾಗಿದೆ. ಕಸಬಾ ಮತ್ತು ದಂಡಿನಶಿವರದ ಸಾಲಗಾರರ ಕ್ಷೇತ್ರದಿಂದ ತಾವರೇಕೆರೆಯ ಟಿ.ಎಸ್.ಬೋರೇಗೌಡ, ತಾಳಕೆರೆ ಟಿ.ಎಸ್.ಶ್ರೀಕಾಂತ್, ಗುಡ್ಡೇನಹಳ್ಳಿ ಜಿ.ಎಮ್.ಪ್ರಸನ್ನಕುಮಾರ್, ಮಾಚೇನಹಳ್ಳಿಯ ಎಂ.ಪಿ.ಲೋಕೇಶ್, ತುರುವೇಕೆರೆಯ ಕೆ.ಬಿ.ಕೃಷ್ಣಪ್ಪ, ಮಲ್ಲಾಘಟ್ಟದ ಪ್ರೇಮಕುಮಾರಿ ಹುಚ್ಚೇಗೌಡ, ದೊಡ್ಡೇನಹಳ್ಳಿಯ ಕೆ.ಕೆಂಪರಾಜು ಆಯ್ಕೆಯಾದರು. ದಬ್ಬೇಘಟ್ಟ ಮತ್ತು ಮಾಯಸಂದ್ರದ ಸಾಲಗಾರರ ವಿಭಾಗದಿಂದ ದಬ್ಬೇಘಟ್ಟದ ಡಿ.ಕೆ.ಉಗ್ರೇಗೌಡ, ಹೊಣಕೆರೆಯ ಎಚ್.ಎಲ್.ಮೂಡಲಗಿರಿಗೌಡ, ಮಾವಿನಕೆರೆಯ ಎಸ್.ಪ್ರಸನ್ನಕುಮಾರ್, ಹುಲಿಕಲ್ ನ ಎಚ್.ಬಿ.ಜಗದೀಶ್, ಮುತ್ತುಗದಹಳ್ಳಿಯ ಶಿವಮ್ಮ, ವಿಠಲಾಪುರದ ವಿ.ಟಿ.ವೆಂಕಟರಾಮಯ್ಯ ಜಯಶೀಲರಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೋಳಘಟ್ಟದ ಕೆ.ಯೋಗಾನಂದ್ ಮತ್ತು ಮಾದಿಹಳ್ಳಿಯ ಎಂ.ಪಿ.ಲಕ್ಷ್ಮೀಕಾಂತ್ ನಡುವೆ ನೇರಸ್ಪರ್ಧೆ ಇದ್ದು ಹಣಾಹಣಿ ನಡೆಯಿತು. ಅಂತಿಮವಾಗಿ ಮಾದಿಹಳ್ಳಿಯ ಎಂ.ಪಿ.ಲಕ್ಷ್ಮೀಕಾಂತ್ 336 ಮತಗಳನ್ನುಗಳಿಸಿ ತಮ್ಮ ಪ್ರತಿಸ್ಪರ್ಧಿ ಯೋಗಾನಂದ್ ರವರನ್ನು 13 ಮತಗಳ ಅಂತರದಿಂದ ಸೋಲಿಸಿ ಜಯದ ನಗೆ ಬೀರಿದರು. ನೂತನ ನಿರ್ದೇಶಕರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಹಲವಾರು ಯುವಕರು ತಮ್ಮ ನಾಯಕನನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚುನಾವಣಾಧಿಕಾರಿಗಳಾಗಿ ಸಿಡಿಓ ಮಾಲ್ತೇಶ್ ಕಾರ್ಯ ನಿರ್ವಹಿಸಿದರು.
;Resize=(128,128))
;Resize=(128,128))