ನೆಹರೂ ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ ಹನುಮ ಜಯಂತಿಗೆ ಪೊಲೀಸ್ ಭದ್ರತೆ ನೀಡಬೇಕಾದ ಹಿನ್ನೆಲೆಯಲ್ಲಿ ಸಮಿತಿಯವರು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಿಕೊಂಡು ಅವರಿಗೆ ಸಮವಸ್ತ್ರ ನೀಡಬೇಕಿದೆ. ಮೆರವಣಿಗೆ ಮತ್ತು ವಾಹನಗಳಿಗೆ ಸುಗಮ ಸಂಚಾರಕ್ಕೆ ಡಿವೈಎಸ್‌ಪಿಯವರು ಇಲ್ಲಿನ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿ ಅಂಗಡಿಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಮುಂದಾಗಬೇಕು. ಕಳೆದ ವರ್ಷ ಕೂಡ ಶಾಂತಿಯುತ ಮೆರವಣಿಗೆ ನಡೆದ ಬಗ್ಗೆ ಇಲ್ಲಿನ ಶಾಸಕರೇ ನಮಗೆ ಅಭಿನಂದನಾ ಪತ್ರ ನೀಡಿದ್ದಾರೆ. ಈ ಬಾರಿ ಕೂಡ ಶಾಂತಿಯುತವಾಗಿ ನಡೆಯಲಿ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದಲ್ಲಿ ಶನಿವಾರ ನಡೆಯಲಿರುವ ಹನುಮ‌ ಜಯಂತಿ ಮತ್ತು ಶೋಭಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದ್ದು ಶಾಂತಿ ಸೌಹಾರ್ದತೆಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಹೇಳಿದರು.ಪಟ್ಟಣದ ನೆಹರೂ ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ ಹನುಮ ಜಯಂತಿಗೆ ಪೊಲೀಸ್ ಭದ್ರತೆ ನೀಡಬೇಕಾದ ಹಿನ್ನೆಲೆಯಲ್ಲಿ ಸಮಿತಿಯವರು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಿಕೊಂಡು ಅವರಿಗೆ ಸಮವಸ್ತ್ರ ನೀಡಬೇಕಿದೆ. ಮೆರವಣಿಗೆ ಮತ್ತು ವಾಹನಗಳಿಗೆ ಸುಗಮ ಸಂಚಾರಕ್ಕೆ ಡಿವೈಎಸ್‌ಪಿಯವರು ಇಲ್ಲಿನ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿ ಅಂಗಡಿಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಮುಂದಾಗಬೇಕು. ಕಳೆದ ವರ್ಷ ಕೂಡ ಶಾಂತಿಯುತ ಮೆರವಣಿಗೆ ನಡೆದ ಬಗ್ಗೆ ಇಲ್ಲಿನ ಶಾಸಕರೇ ನಮಗೆ ಅಭಿನಂದನಾ ಪತ್ರ ನೀಡಿದ್ದಾರೆ. ಈ ಬಾರಿ ಕೂಡ ಶಾಂತಿಯುತವಾಗಿ ನಡೆಯಲಿ ಎಂದರು.ಹನುಮ ಉತ್ಸವ ಈಗಾಗಲೇ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾದಾಗ ಉದ್ದೇಶಪೂರ್ವಕವಾಗಿ ಅಹಿತಕರ ಘಟನೆಗಳು ಸಂಭವಿಸುವ ಕಾರಣದಿಂದ ಅಯೋಜಕರು ಇಂತವರ ಬಗ್ಗೆ ತಕ್ಷಣವೇ ಮಾಹಿತಿ‌ ನೀಡಬೇಕು. ಒಂದು ವೇಳೆ ಇಂತಹ ಪುಂಡಪೋಕರಿಗಳು ಕಂಡುಬಂದರೆ ಯಾವುದೇ ಮೂಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.ಶ್ರೀ ವೀರಾಜಂನೇಯ ದೇಗುಲ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಕಳೆದ 12 ವರ್ಷದಿಂದ ಬೇಲೂರಿನಲ್ಲಿ ಹನುಮ ಜಯಂತಿ ವರ್ಷ ವರ್ಷಕ್ಕೆ ಹೊಸತನ ಮತ್ತು ಅದ್ಧೂರಿಯಾಗಿ ನಡೆಯುತ್ತಿದೆ. ಡಿಸೆಂಬರ್ 13 ಶನಿವಾರ ಬೆಳಿಗ್ಗೆ ಪೂಜೆ ಬಳಿಕ ಮಧ್ಯಾಹ್ನ 12ಕ್ಕೆ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಿದೆ. ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆಗೆ ಪೊಲೀಸ್ ಇಲಾಖೆಯ ಜೊತೆಗೆ ಮುಖಂಡರಾದ ಎನ್.ಆರ್‌. ಸಂತೋಷ ನೇತೃತ್ವದಲ್ಲಿ 25ಕ್ಕೂ ಹೆಚ್ಚಿನ ಸ್ವಯಂಸೇವಕರು ಸಮವಸ್ತ್ರದೊಂದಿಗೆ ಕೆಲಸ‌ ಮಾಡುತ್ತಾರೆ, ಈ ಬಾರಿ 25 ಸಾವಿರಕ್ಕೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇರುವ ಕಾರಣದಿಂದ ಪೊಲೀಸ್ ಇಲಾಖೆ ಕೂಡ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕು. ವಿಶೇಷವಾಗಿ ಕಳೆದ ಬಾರಿ ಇಲ್ಲಿನ ಸಿಪಿಐ ರೇವಣ್ಣನವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಿದ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಹಾಸನ ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿಧಿ, ಅರಸೀಕೆರೆ ಡಿವೈಎಸ್‌ಪಿ ಗೋಪಿ, ಸಿಪಿಐ ರೇವಣ್ಣ, ಬ ಕರವೇ ಅಧ್ಯಕ್ಷ ಚಂದ್ರಶೇಖರ್‌, ಹಿಂದೂ ಸಂಘಟನೆ ಮುಖಂಡ ಎನ್. ಆರ್‌. ಸಂತೋಷ, ಕರವೇ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್‌ ಮುಂತಾದವರು ಹಾಜರಿದ್ದರು.