ಇಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

| Published : Aug 19 2025, 01:00 AM IST

ಸಾರಾಂಶ

ಬೆಸ್ಕಾಂನಿಂದ ವಿವಿಧ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಸ್ಕಾಂನಿಂದ ವಿವಿಧ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ, ಬಿ, ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ, ಬಿ ಬ್ಲಾಕ್, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ, ಲಕ್ಷ್ಮಿ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳು. ಎಫ್-23 ವಿವೇಕಾನಂದ ಫೀಡರ್ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ, ಬನಶಂಕರಿ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

ಅವರಗೆರೆ ವಿದ್ಯುತ್ ವಿತರಣಾ ಕೇಂದ್ರ:

ದಾವಣಗೆರೆ ನಗರ ಉಪವಿಭಾಗ-2ರ ವ್ಯಾಪ್ತಿಯ 66/11 ಕೆವಿ ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ವಿವಿಧ ಫೀಡರ್‌ಗಳಲ್ಲಿ ಆ.19ರ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್13-ಆನೆಕೊಂಡ ಫೀಡರ್ ವ್ಯಾಪ್ತಿಯ ಶೇಖರಪ್ಪ ನಗರ, ಗುಜರಿ ಲೈನ್, ಬಿಟಿ ಲೇಔಟ್, ಬಂಬೂ ಬಜಾರ್, ಆನೆಕೊಂಡ, ಚೌಡೇಶ್ವರಿ ಟೆಂಪಲ್, ಮಹಾವೀರ ಭವನ ಹಾಗೂ ಸುತ್ತಮುತ್ತಲಿನ ಏರಿಯಾಗಳು. ಎಫ್14-ಮಹಾವೀರಫೀಡರ್ ವ್ಯಾಪ್ತಿಯ ಬಿಟಿ ಲೇಔಟ್, ಕೆ.ಆರ್.ರೋಡ್, ಜಾಲಿನಗರ, ಅರಳಿಮರ ಸರ್ಕಲ್, ಮಾಗಾನಳ್ಳಿ ರೋಡ್, ಬೇತೂರು ರಸ್ತೆ, ಹಾಗೂ ಸುತ್ತಮುತ್ತಲ ಪ್ರದೇಶ, ಎಫ್15-ರವಿ ಫೀಡರ್ ವ್ಯಾಪ್ತಿಯ ಎಪಿಎಂಸಿ ಎ, ಬಿ, ಸಿ, ಡಿ ಬ್ಲಾಕ್, ಶಿವ ಬ್ಯಾಂಕ್, ಕೆ.ಬಿ. ನಗರ ಹಾಗೂ ಸುತ್ತಮುತ್ತಲಿನ ಏರಿಯಾಗಳು. ಎಫ್16-ಗೋಶಾಲೆ ಫೀಡರ್ ವ್ಯಾಪ್ತಿಯ ಗೋಶಾಲ, ರುದ್ರಪ್ಪ ರೈಸ್ ಮಿಲ್, ಮಹೇಂದ್ರ ಶೋ ರೂಂ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

- - -

(ಸಾಂದರ್ಭಿಕ ಚಿತ್ರ)