ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಗೆ ಸಿದ್ಧತೆ

| Published : Sep 19 2025, 01:00 AM IST

ಸಾರಾಂಶ

ಚಿಕ್ಕಮಗಳೂರು , ಸುಮಾರು ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶಕ್ಕಾಗಿ ಕೈಗೆತ್ತಿಕೊಂಡಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಸ್ಥಳೀಯರು ಹಾಗೂ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯೋಜನೆ ಕಾರ್ಯರೂಪಕ್ಕೆ ತರಲು ಸದ್ದಿಲ್ಲದೆ ಸಿದ್ಧತೆ ಕೂಡ ನಡೆದಿದೆ.

2 ಜಿಲ್ಲೆಗಳ 54.155 ಹೆಕ್ಟೇರ್ ಅರಣ್ಯ ಭೂಮಿ ಬಳಕೆ । ಪರ್ಯಾಯ ಭೂಮಿ ಚಿಕ್ಕಮಗಳೂರಿನಲ್ಲಿ ಗುರುತು । ಕೇಂದ್ರ ವನ್ಯಜೀವಿ ಮಂಡಳಿಯಿಂದ ಗ್ರೀನ್‌ ಸಿಗ್ನಲ್‌

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸುಮಾರು ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶಕ್ಕಾಗಿ ಕೈಗೆತ್ತಿಕೊಂಡಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಸ್ಥಳೀಯರು ಹಾಗೂ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯೋಜನೆ ಕಾರ್ಯರೂಪಕ್ಕೆ ತರಲು ಸದ್ದಿಲ್ಲದೆ ಸಿದ್ಧತೆ ಕೂಡ ನಡೆದಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಎಷ್ಟು? ಮತ್ತು ಅರಣ್ಯೇತರ ಭೂಮಿಯನ್ನು ಬಳಕೆ ಮಾಡುವ ಬಗ್ಗೆ ಸವಿಸ್ತಾರವಾಗಿ ವರದಿ ಸಿದ್ಧಪಡಿಸಲಾಗಿದೆ.

ಕೇಂದ್ರದ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಗುವುದಿಲ್ಲ. ಹಾಗಾಗಿ ಯೋಜನೆ ಜಾರಿಗೆ ಬರುವುದಿಲ್ಲ ಎಂಬುದು ಪರಿಸರವಾದಿಗಳ ವಾದ. ಆದರೆ, ಈಗಾಗಲೇ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಿಕ್ಕಿದೆ ಎಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದರು.

ಕಂದಾಯ ಇಲಾಖೆಗೆ ಸೇರಿದ ಪರ್ಯಾಯ ಭೂಮಿಯನ್ನು ನೀಡಿದರೆ ಅರಣ್ಯ ಇಲಾಖೆ ತನಗೆ ಸೇರಿರುವ ಪ್ರದೇಶವನ್ನು ಬಿಟ್ಟುಕೊಟ್ಟಿರುವ ಹಲವು ನಿದರ್ಶನಗಳು ಇವೆ. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಶಿವಮೊಗ್ಗ ಜಿಲ್ಲೆಯ 26.227 ಹೆಕ್ಟೇರ್‌ ಹಾಗೂ ಉತ್ತರ ಕನ್ನಡ ಜಿಲ್ಲೆಯ 27.928 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಗೆ ಸೇರಿರುವ ಭೂಮಿಯನ್ನು ನೀಡಲು ಗುರುತು ಮಾಡಲಾಗಿದೆ. ಚಿಕ್ಕ ಮಗಳೂರು ತಾಲೂಕಿನ ಜಾಗರ ಹೋಬಳಿಯ ಮೇಲುಗಿರಿ ಗ್ರಾಮದ ಸರ್ವೆ ನಂಬರ್‌ 5 ರಲ್ಲಿ 250 ಎಕರೆ ಗೋಮಾಳ ಜಮೀನು ಇದ್ದು, ಇದರಲ್ಲಿ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿಯನ್ನು ನೀಡುವ ಪ್ರಕ್ರಿಯೆ ಈಗಾಗಲೇ ನಡೆದಿದೆ. ಹೀಗಾಗಿ ಕೇಂದ್ರದ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ.

... ಬಾಕ್ಸ್‌...

ಯೋಜನೆ ಬದಲಿಗೆ 250 ಎಕರೆ ಗೋಮಾಳ ಹಂಚಿಕೆ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಬಳಕೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆ ಯಲ್ಲಿ ನೀಡಲಿರುವ 250 ಎಕರೆ ಗೋಮಾಳ, ಮುತ್ತೋಡಿ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಒಂದೇ ಸರ್ವೆ ನಂಬರ್‌ 5 ರಲ್ಲಿ 9057 ಎಕರೆ ಮುತ್ತೋಡಿ ಮೀಸಲು ಅರಣ್ಯ ಹಾಗೂ 250 ಎಕರೆಗೋಮಾಳ ಎಂಬುದಾಗಿ ದಾಖಲಾಗಿದೆ. ಗೋಮಾಳದಲ್ಲಿ ಸುಮಾರು 50 ಎಕರೆ ಪ್ರದೇಶ ಈಗಾಗಲೇ ಅರಣ್ಯ ಸ್ವರೂಪದಲ್ಲಿದೆ. ಇನ್ನುಳಿದ ಪ್ರದೇಶಗಳಲ್ಲಿ ಅರಣ್ಯ ಬೆಳೆಸಬೇಕಾಗಿದೆ. ... ಬಾಕ್ಸ್‌....

ಯೋಜನೆಗಾಗಿ ಅವಶ್ಯವಿರುವ ಭೂ ಪ್ರದೇಶ

-

ಜಿಲ್ಲೆಅರಣ್ಯಅರಣ್ಯೇತರಒಟ್ಟು

-

ಶಿವಮೊಗ್ಗ26.22719.8146.037

-

ದಕ್ಷಿಣ ಕನ್ನಡ27.92826.6854.608

-

ಒಟ್ಟು54.15546.49100.645