ಪ್ರಧಾನಿ ಮೋದಿ ಭೂಮಿಗೆ ಬಂದ ಭಗವಂತ

| Published : Sep 18 2024, 01:56 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 74ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಸಮಾರಂಭದಲ್ಲಿ, 2014ರಲ್ಲಿ ಪ್ರಧಾನಿಯಾದ ಮೋದಿ ಹಗಲುರಾತ್ರಿಯೆನ್ನದೆ ದೇಶಕ್ಕಾಗಿ ದುಡಿದು ಅಭಿವೃದ್ದಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 96ನೇ ಸ್ಥಾನದಲ್ಲಿದ್ದ ಭಾರತವನ್ನು 12ನೇ ಸ್ಥಾನಕ್ಕೆ ತಂದು ಭಾರತೀಯರು ಹೆಮ್ಮೆಪಡುವಂತ ಸಾಧನೆಯನ್ನು ಮಾಡಿದ ಮಹಾನ್‌ ಸಾಧಕ ನರೇಂದ್ರ ಮೋದಿಯವರು ಭಾರತೀಯರ ದೃಷ್ಠಿಯಲ್ಲಿ ಕೇವಲ ಅವರು ನರ ಮಾನವರಲ್ಲ ಭೂಮಿಗೆ ಬಂದ ಭಗವಂತ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ವಕೀಲ ಎನ್.ಡಿ. ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸ್ವಾರ್ಥಕ್ಕಾಗಿ ಏನನ್ನೂ ಬಯಸದೆ ದೇಶವೇ ನನ್ನ ಮನೆ ಎಂದು ದೇಶದ ಸರ್ವಾಂಗೀಣ ಪ್ರಗತಿಯೇ ನನ್ನ ಕನಸು ಎಂದು ರಾಷ್ಟ್ರ ಪ್ರಗತಿಗೆ ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿ ದೇಶಕ್ಕಾಗಿ ದುಡಿಯುತ್ತಿರುವ ನಮ್ಮ ಪ್ರಧಾನಿ ನರೇಂದ್ರಮೋದಿಯವರು ಭಾರತೀಯರ ದೃಷ್ಠಿಯಲ್ಲಿ ಕೇವಲ ಅವರು ನರ ಮಾನವರಲ್ಲ ಭೂಮಿಗೆ ಬಂದ ಭಗವಂತ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ವಕೀಲ ಎನ್.ಡಿ. ಪ್ರಸಾದ್ ಹೇಳಿದರು.

ನಗರದ ಬಸವೇಶ್ವರ.ವೃತ್ತದಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲಗಳ ಅಧ್ಯಕ್ಷರುಗಳಾದ ಅವಿನಾಶ್ ನಾಯ್ಡ ಮತ್ತು ಯತೀಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ 74ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಸಮಾರಂಭದಲ್ಲಿ, 2014ರಲ್ಲಿ ಪ್ರಧಾನಿಯಾದ ಮೋದಿ ಹಗಲುರಾತ್ರಿಯೆನ್ನದೆ ದೇಶಕ್ಕಾಗಿ ದುಡಿದು ಅಭಿವೃದ್ದಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 96ನೇ ಸ್ಥಾನದಲ್ಲಿದ್ದ ಭಾರತವನ್ನು 12ನೇ ಸ್ಥಾನಕ್ಕೆ ತಂದು ಭಾರತೀಯರು ಹೆಮ್ಮೆಪಡುವಂತ ಸಾಧನೆಯನ್ನು ಮಾಡಿದ ಮಹಾನ್‌ ಸಾಧಕ ನರೇಂದ್ರ ಮೋದಿ ಎಂದು ನುಡಿದರು.ಇದೇ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಬಗ್ಗೆ ಪಕ್ಷದ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್‌ ಮಾತನಾಡಿ, ಗ್ರಾಮಾಂತರ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ಸಿಂಧು, ಸುನೀಲ್ ಶಾಸ್ತ್ರಿ, ಕಿರಣ್ ಮುಖಂಡರಾದ ಮೇಘರಾಜ್, ಸರ್ವೇಚಂದ್ರು, ಬಂಡೆ ಲೋಕೇಶ್, ಪುರುಶೋತ್ತಮ್, ಚಂದ್ರಶೇಖರ್, ಗಾಯತ್ರಿ ದೇವಿ, ಚೇತನ್ ಜೈನ್, ಮಹಲಿಂಗಪ್ಪ, ಮುರುಳೀಧರ, ವಿನೋದ್ ಜೈನ್, ಸೋಮಶೇಖರ್, ಚಂದ್ರಕಲಾ ವಾಗೇಶ್, ಸರೋಜಮ್ಮ, ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.