ಸಾರಾಂಶ
ಲಕ್ಷ್ಮೇಶ್ವರ: ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವನ್ನು ಜನರ ಸೇವೆಗಾಗಿ ಮೀಸಲಿಡುತ್ತಾರೆ. ಮೋದಿಯವರು ಈ ದೇಶಕ್ಕೆ ದೊರತೆ ದೊಡ್ಡ ಶಕ್ತಿಯಾಗಿದ್ದು, ಅವರ ಮೂಲಕ ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚುವಂತಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಬುಧವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ೭೫ನೇ ವರ್ಷದ ಜನ್ಮದಿನದಂಗವಾಗಿ ಬಿಜೆಪಿ ಶಿರಹಟ್ಟಿ ಮಂಡಳದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ ಮತ್ತು ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮೋದಿಯವರು ಜನರ ಸೇವೆಗಾಗಿರುವ ತಮ್ಮ ಬದ್ಧತೆ ಬಲಪಡಿಸಿಕೊಳ್ಳಲು ಹಾಗೂ ಜನರ ಸೇವೆ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಜನ್ಮದಿನದ ಪ್ರಯುಕ್ತ ದೇಶಾದ್ಯಂತ ೧೫ ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಸ್ವಚ್ಛತಾ ಅಭಿಯಾನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ಪಕ್ಷದ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಹಮ್ಮಿಕೊಂಡಿದೆ, ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿ ಮೋದಿ ಅವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ,ದೇಶಕ್ಕಾಗಿ ಹೋರಾಟ ಮಾಡಿದ ಮಹನೀಯರ ಅನೇಕ ಜನಪರ ಕಾರ್ಯಕ್ರಮ ಮಾಡಲಾಗುತ್ತಿದೆ. ಮೋದಿ ಅವರು ಅಖಂಡ ಭಾರತದ ಕಲ್ಪನೆ ಸಾಕಾರಗೊಳಿಸಿ ಬಿ.ಆರ್.ಅಂಬೇಡ್ಕರ ಕಂಡ ಸಂವಿಧಾನ ಸಾಕಾರಗೊಳಿಸಿದ್ದಾರೆ. ಮೋದಿ ಅವರು ಜಗತ್ತು ಕಂಡ ಅಪ್ರತಿಮ ದಕ್ಷ, ಪ್ರಾಮಾಣಿಕ ಆಡಳಿತಗಾರ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ್, ನಿಂಗಪ್ಪ ಬನ್ನಿ, ಮಾದೇವಪ್ಪ ಅಣ್ಣಿಗೇರಿ, ಅಶ್ವಿನಿ ಅಂಕಲಕೋಟಿ, ಪಿ.ಬಿ.ಖರಾಟೆ, ವಿಜಯ ಹತ್ತಿಕಾಳ, ವಿಜಯ ಮೆಕ್ಕಿ, ಅಶೋಕ ಶಿರಹಟ್ಟಿ, ಜಿಮ್ಸ್ ನ ಡಾ.ಶ್ವೇತಾ ಪಾಟೀಲ, ತಾಲೂಕ ವೈದ್ಯಾಧಿಕಾರಿ ಡಾ. ಸುಭಾಸ್ ದಾಯಗೊಂಡ, ಡಾ. ಶ್ರೀಕಾಂತ ಕಾಟೇವಾಲೆ, ಪರಶುರಾಮ ಇಮ್ಮಡಿ, ಜಗದೀಶಗೌಡ ಪಾಟೀಲ, ಎಂ.ಆರ್.ಪಾಟೀಲ, ರಮೇಶ ದನದಮನಿ, ವಿಜಯ ಕುಂಬಾರ, ಈರಣ್ಞ ಅಕ್ಕೂರ, ಪ್ರವೀಣ ಬೋಮಲೆ, ನೀಲಪ್ಪ ಹತ್ತಿ, ಮಂಜನಗೌಡ ಕೆಂಚನಗೌಡ, ಸಂತೋಷ ಜಾವೂರ, ಶಿವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಪ್ರ.ಕಾರ್ಯದರ್ಶಿ ಅನಿಲ ಮುಳಗುಂದ, ನವೀನ ಹಿರೇಮಠ,ಗಂಗಾಧರ ಮೆಣಸಿನಕಾಯಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.