ಬೀದರ್: ನಗರದ ಪಾಪನಾಶ ಮಹಾದೇವ ಟ್ರಸ್ಟ್ ವತಿಯಿಂದ ಶ್ರಾವಣ ನಿಮಿತ್ತ ಇಲ್ಲಿಯ ಪಾಪನಾಶ ದೇಗುಲ ದಲ್ಲಿ ಆಗಸ್ಟ್ 12 ರಿಂದ ಸೆ.11ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಅನ್ನ ಪ್ರಸಾದ ವಿತರಣೆ, ರಾತ್ರಿ 8.30 ರಿಂದ 10.30 ರ ವರೆಗೆ ಸಂಗೀತ ಹಾಗೂ ಭಜನೆ ಜರುಗಲಿದೆ. ಆ.17, 24, 31 ಹಾಗೂ ಸೆ.7 ರಂದು ಬೆಳಿಗ್ಗೆ 6ಕ್ಕೆ ಖಾನಾಪುರ ಸಮೀಪದ ಗಾಯ ಮುಖ ಗುಪ್ತಲಿಂಗೇಶ್ವರ ಮಂದಿರದಿಂದ ಪಾಪನಾಶ ದೇವಸ್ಥಾನದ ವರೆಗೆ ಕಾವಡ ಯಾತ್ರೆ ನಡೆಯಲಿದೆ ಎಂದು ಪಾಪನಾಶ ಮಹಾದೇವ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಶೆಟಕಾರ್ ತಿಳಿಸಿದ್ದಾರೆ. ಭಕ್ತರು ಶ್ರಾವಣ ಕಾರ್ಯಕ್ರಮ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.
--ಚಿತ್ರ 10ಬಿಡಿಆರ್5912ರಿಂದ ಪಾಪನಾಶ ದೇಗುಲದಲ್ಲಿ ಕಾರ್ಯಕ್ರಮ
The Papanasha Mahadeva Trust has organized various religious programs at the local Papanasha Temple from August 12 to September 11 to mark the holy month of Shravana.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.