ಹೆಬ್ಬಾಳಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

| Published : Apr 16 2024, 01:02 AM IST

ಹೆಬ್ಬಾಳಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡ ಸಂಜಯ ಪಾಟೀಲ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ನೀಡಿರುವ ಅವಹೇಳನ ಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ರಾಜಕೀಯವಾಗಿ ಟೀಕೆ ಸರಿಯಲ್ಲ. ವೈಯಕ್ತಿಕ ಟೀಕೆ ಮಾಡಬೇಡಿ. ನಿಮ್ಮನ್ನು ಹಡೆದ ತಾಯಿಯೂ ಸಹ ಓರ್ವ ಹೆಣ್ಣು, ನಿಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಇಂತಹ ಹೇಳಿಕೆ ರಾಜಕಾರಣದಲ್ಲಿ ತರವಲ್ಲ ಕೂಡಲೇ ಸಚಿವೆ ಹೆಬ್ಬಾಳಕರ್‌ ಬಳಿ ಕ್ಷಮೆ ಕೇಳಿ ಎಂದು ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಹೇಳಿದರು.

ಭಾನುವಾರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡ ಸಂಜಯ ಪಾಟೀಲ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ನೀಡಿರುವ ಅವಹೇಳನ ಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು. ಸಂಜಯ ಡ್ರಾಮಾ ಥೇಟರ್ ಲಕ್ಷ್ಮೀ ಅಕ್ಕಾ ಬಂದ್ ಮಾಡಿದ್ದಾರೆ. ಹೀಗಾಗಿ ಎಲ್ಲಂದರಲ್ಲಿ ಅವಹೇಳನ ಕಾರಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಏಕೈಕ ಮಹಿಳಾ ಮಂತ್ರಿಗೆ ಈ ರೀತಿಯಾಗಿ ಮಾತನಾಡುವದು ತಪ್ಪು. ಈ ರೀತಿಯಾಗಿ ನಾಲಿಗೆ ಹರಿ ಬಿಟ್ಟಲ್ಲಿ ಹಾಗೂ ನೀವು ಹೊರಗೆ ನಮ್ಮ ಮಹಿಳಾ ಕಾರ್ಯಕರ್ತರಿಗೆ ಸಿಕ್ಕಲ್ಲಿ ಅವರೆ ತಮಗೆ ತಕ್ಕ ಪಾಠ ಕಲಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನಿಯ ಸ್ಥಾನ ಇದೆ. ಅವಹೇಳನಕಾರಿಯಾಗಿ ಮಾತನಾಡಿದಂತ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಡರಾದ ಚಂದ್ರಶೇಖರ ಕೊಣ್ಣೂರ, ಚಂದನ ಗಿಡ್ಡನವರ, ಸಂಜು ಪೂಜಾರಿ, ದಸಗೀರ ಪೈಲ್ವಾನ್‌, ವಕೀಲರಾದ ಕುಮಾರನಾಯ್ಕ, ಮುಲ್ಲಾ, ಯಶೋಧಾ ಬಿರಡಿ, ಪರವಿನ ಬೋಜಗಾರ ಸೇರಿದಂತೆ ಅನೇಕರು ಇದ್ದರು.