ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಂದ್ರ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ದಾಂಡೇಲಿ
ದಿನ ಬಳಕೆಯ ಅಡುಗೆ ಅನಿಲದ ಕೊರತೆ ಮತ್ತು ಬೆಲೆ ಏರಿಕೆ ವಿರೋಧಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ದಾಂಡೇಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಟ್ಟಿಗೆ ಒಲೆ ಹಚ್ಚಿ ಚಹಾ ತಯಾರಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ವಿಶ್ವದಲ್ಲಿ ಭಾರತ ನಂ. ೧ ಎಂದು ಹೇಳಿಕೊಳ್ಳುವ ಅಂಧ ಭಕ್ತರು ಈಗ ದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಕೊರತೆಯಾದರೂ ಮೌನವಾಗಿರುವುದು ಯಾಕೆ? ದಾಂಡೇಲಿ ನಗರದ ಜನರು ಕಟ್ಟಿಗೆ ಬಳಕೆ ಮಾಡಿ ಅಡುಗೆ ಮಾಡದಂತಹ ಸ್ಥಿತಿ ಇದೆ. ಕೇವಲ ಧರ್ಮ, ದೇವರ ಹೆಸರು ಹೇಳಿ ಬದುಕಲು ಸಾಧ್ಯವಿಲ್ಲ. ಅಂಧ ಭಕ್ತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಕೇಂದ್ರದ ಬಿಜೆಪಿ ಸರಕಾರದಿಂದ ಈ ದೇಶದ ಜನರಿಗೆ ಅದರಲ್ಲೂ ಮುಖ್ಯವಾಗಿ ಬಡ ಜನರಿಗೆ ತೀವ್ರ ಅನ್ಯಾಯವಾಗುತ್ತಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೇ ಮಾತ್ರ ಭವಿಷ್ಯ ಉಜ್ವಲವಾಗಲಿದೆ. ಇಲ್ಲದಿದ್ದರೇ ಸ್ವಾತಂತ್ರಕ್ಕೂ ಪೂರ್ವದಲ್ಲಿದ್ದ ಭಾರತ ನಮಗೆ ಕಾಣಸಿಗಲಿದೆ ಎಂದರು.
ಹಿರಿಯ ಮುಖಂಡರಾದ ತಸ್ವರ ಸೌದಾಗರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಮಹಿಳಾ ಅಧ್ಯಕ್ಷೆ ರೇಣುಕಾ ಬಂದಮ್ ಮಾತನಾಡಿ, ಅಡುಗೆ ಅನಿಲದ ಕೊರತೆಯಿಂದ ಬಹುತೇಕ ಹೋಟೆಲ್‌ಗಳು ಬೀಗ ಹಾಕುವುದು ಅನಿವಾರ್ಯವಾಗಿದೆ. ಹೋಂ-ಸ್ಟೇ ರೇಸಾರ್ಟ್‌ಗಳ ಪರಿಸ್ಥಿತಿಯಂತೂ ಹೇಳತಿರದಾಗಿದೆ. ಗೃಹಣಿಯರ ಪರಿಸ್ಥಿತಿ ಇನ್ನೂ ಕಷ್ಟದಲ್ಲಿದೆ. ಬಿಜೆಪಿಯನ್ನು ಬೆಂಬಲಿಸುವ ಜನರು ಈಗ ಉತ್ತರಿಸಬೇಕಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಿನ ದರಕ್ಕಿಂತ ದುಪ್ಪಟ್ಟಾಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೇಂದ್ರ ಸರಕಾರ ತನ್ನ ವಿದೇಶಾಂಗ ನೀತಿ ಬದಲಿಸಿಕೊಳ್ಳದಿದ್ದರೆ ಕಠಿಣ ದಿನಗಳನ್ನು ಕಾಣಬೇಕಾಗುತ್ತದೆ. ಟ್ರಂಪ್ ಹೇಳಿದಂತೆ ಕೇಳುವ ಬಿಜೆಪಿ ಸರಕಾರವನ್ನು ತೊಲಗಿಸದಿದ್ದರೆ ಇನ್ನಷ್ಟು ಕಷ್ಟಕರ ದಿನಗಳನ್ನು ಕಾಣಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಅದ್ಯಕ್ಷ ಅಷ್ಪಾಕ್ ಶೇಖ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸೀರ ಗಿರಿಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪಿ. ನಾಯ್ಕ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ರಿಯಾಜ್ ಸಯ್ಯದ್, ಕೆಪಿಸಿಸಿ ಸದಸ್ಯ ಕರೀಮ ಅಜ್ರೇಕರ, ಮುಖಂಡರಾದ ಸಂಜಯ ನಂದ್ಯಾಳಕರ, ಅನೀಲ ದಂಡಗಲ್, ಯಾಸ್ಮೀನ ಕಿತ್ತೂರ, ಸರಸ್ವತಿ ರಜಪೂತ, ದಿವಾಕರ ನಾಯ್ಕ, ದಾದಾಪೀರ ನದಿಮುಲ್ಲಾ, ಪ್ರತಾಪಸಿಂಗ ರಜಪೂತ, ರಾಜಾಸಾಬ ಸುಂಕದ, ಇಮ್ತಿಯಾಜ್ ಅತ್ತಾರ, ರಫೀಕ ಖಾನ್, ರವಿಕುಮಾರು ಚವ್ಹಾಣ, ಕಿರಣಸಿಂಗ್ ರಜಪೂತ, ಪ್ರಭಾರ ಗೊನಾ, ರವಿ ಚಾಟ್ಲಾ, ಸರಸ್ವತಿ ಚವ್ಹಾಣ, ಆಯಿಶಾ ಪಠಾಣ, ವೆಂಕಟರಮನಮ್ಮ ಮೈತಕೂರಿ, ಸುಧಾ ರಾಮಲಿಂಗ ಜಾಧವ, ಮಂಜು ರಾಥೋಡ, ರೇಣುಕಾ ಮಾದರ, ರೇಣುಕಾ ಭಜಂತ್ರಿ, ಅಫ್ರೀನ ಕಿತ್ತೂರ, ರೇಶ್ಮಾ ಮಾಲ್ದಾರ, ಸುಜಾತಾ ಸಂದಮ್, ಅನಿಲ ನಾಯ್ಕ, ಅಡಿವೆಪ್ಪ ಭದ್ರಕಾಳಿ, ಆಸಿಫ್ ಮುಜಾವರ, ಫ್ರಾನ್ಸಿಸ್ ಜೆವಿಯರ, ಸಪುರಾ ಯರಗಟ್ಟಿ, ವಿನಾಯಕ ಬಾರಿಕೇರ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.