ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾತಾಲೂಕು ಚಿರತಹಳ್ಳಿ- ಕರಿದಾಸರಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ. ಕಾಂತರಾಜ್ ಅರಸ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವ ಬಗ್ಗೆ ಸಾರ್ವಜನಿಕರು ಮತ್ತು ಮುಖಂಡರು ಮೂಲಸ್ಥಳದಲ್ಲಿ ಉಳಿಸುವಂತೆ ಆಸ್ಪತ್ರೆ ಮುಂಭಾಗ ವರ್ಗಾವಣೆ ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ಒತ್ತಾಯಿಸಿ ಪ್ರತಿಭಟಿಸಿದರು.ತಡಕಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಮಾತನಾಡಿ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಗಡಿ ಗ್ರಾಮದ ಆಸ್ಪತ್ರೆಯಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಡವರ ಪರ ಉತ್ತಮ ಸೇವೆ ನೀಡಿ ಎಲ್ಲರಿಗೂ ಸ್ಪಂದಿಸುವ ವೈದ್ಯಾಧಿಕಾರಿಗಳಾಗಿ ಉಳಿದಿದ್ದಾರೆ. ಈ ಗಡಿ ಭಾಗದ ಜನತೆಗೆ ಇವರ ಸೇವೆ ಇನ್ನೂ ಅಗತ್ಯವಾಗಿದ್ದು ಯಾವುದೇ ಕಾರಣಕ್ಕೂ ಇವರನ್ನು ಬೆರಡೆಗೆ ವರ್ಗಾಯಿಸದಂತೆ ಇಲ್ಲಿ ಉಳಿಸುವಂತೆ, ಸರ್ಕಾರ ಈ ಕೂಡಲೇ ವರ್ಗಾವಣೆ ರದ್ದುಪಡಿಸಿವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾಜಿ ಸದಸ್ಯರಾದ ವಿಶ್ವನಾಥ್, ನರಸಿಂಹಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್, ಬೇಜ್ಜಿಹಳ್ಳಿ ಕದೂರಪ್ಪ, ಕರಿದಾಸರಹಳ್ಳಿ ಪ್ರಕಾಶ್, ದುರ್ಗಪ್ಪ ಪ್ರಭಾಕರ್ ಎಂ, ಬಾಲಚಂದ್ರ ಬೇವಿನ ನಾಗಪ್ಪ, ಗಂಗಾಧರ್, ನರಸಿಂಹಯ್ಯ ಹಾಜರಿದ್ದರು. ೩೦ಶಿರಾ೧: ಸಾರ್ವಜನಿಕರು ಮತ್ತು ಮುಖಂಡರು ಆಸ್ಪತ್ರೆ ಮುಂಭಾಗ ಡಾ. ಕಾಂತರಾಜ್ ಅರಸ್ ವರ್ಗಾವಣೆ ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ಒತ್ತಾಯಿಸಿ ಪ್ರತಿಭಟಿಸಿದರು.