ಪ್ರತಿ ಕೆಲಸಕ್ಕೂ ಲಂಚ । ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಧರಣಿ
ಕನ್ನಡಪ್ರಭ ವಾರ್ತೆ ಮಾಲೂರುಪ್ರತಿ ಕೆಲಸಕ್ಕೂ ಲಂಚಕ್ಕಾಗಿ ರೈತರಿಗೆ ಹಾಗೂ ಸಾರ್ವಜನಿಕರನ್ನು ಪೀಡಿಸುವ ಇಲ್ಲಿನ ಭೂದಾಖಲೆಗಳ ಸಹಾಯಕ ಕಚೇರಿ ಸಿಬ್ಬಂದಿ ವಿರೋಧ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಾಲೂಕು ಕಚೇರಿಯ ಗೋಡೆಗಳಿಗೆ ಲಂಚದ ಪಟ್ಟಿಯ ಪೋಟೋ ಆಂಟಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬೆಂಡಶೆಟ್ಟಿ ರಮೇಶ್ ಅವರು ಸರ್ವೇ ಇಲಾಖೆಯಲ್ಲಿ ರೈತರ ಮತ್ತು ಸಾರ್ವಜನಿಕರ ಕೆಲಸ ಸುಸೂತ್ರವಾಗಿ ಆಗುತ್ತಿಲ್ಲ. ಏನೇ ಕೆಲಸವಾದರೂ ಕಚೇರಿಯ ಸಿಬ್ಬಂದಿ ತಿಂಗಳಾನುಗಟ್ಟಲೇ ಓಡಾಡುವಂತೆ ಸತ್ತಾಯಿಸುತ್ತಾರೆ. ಲಂಚ ಇಲ್ಲದೇ ಯಾವುದೇ ಕೆಲಸ ವಾಗುವುದಿಲ್ಲ. ತತ್ಕಾಲ್ ಪೋಡಿಗೆ 15 ಸಾವಿರ, ಹೊಸ ಸರ್ವೆ ನಂಬರ್ ಎಕರೆಗೆ 1 ಲಕ್ಷ, ಹದ್ದುಬಸ್ತು ಮಾಡಲು 15 ಸಾವಿರ, ದುರಸ್ಥಿ ಪೋಡಿ ಮಾಡಲು ಎಕರೆಗೆ 3 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದರು.ಇದೇ ಪಟ್ಟಿಯನ್ನು ಪೋಸ್ಟರ್‌ಗಳನ್ನು ಕಚೇರಿಗೋಡೆಗಳ ಆಂಟಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ರೈತರನ್ನು ಸತಾಯಿಸುವ ಇಲಾಖೆ ಸಿಬ್ಬಂದಿ ಭೂ ಮಾಫಿಯಾ, ಬ್ರೋಕರ್‌ಗಳಿಗೆ ಕೊಡಲೇ ಕೆಲಸ ಮಾಡಿಕೊಡುತ್ತಿದ್ದಾರೆ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅದರಲ್ಲೂ ಕೇಸ್ ವರ್ಕರ್ ಮಂಜುನಾಥ್ ಮತ್ತು ಮೇಘಮಂದಾರ ಅವರನ್ನು ಈ ಕೊಡಲೇ ವರ್ಗಾಯಿಸಿ ಎಂದರು.
ಪ್ರತಿಭಟನೆಕಾರರ ಹೋರಾಟಕ್ಕೆ ಮಣಿದ ಎಡಿಎಲ್‌ಆರ್ ಕೃಷ್ಣಪ್ಪ ಅವರು ಸ್ಥಳದಲ್ಲಿಯೇ ಬೆಡಶೆಟ್ಟಿ ಹಳ್ಳಿ ಗ್ರಾಮದ ಸಂಪಂಗಪ್ಪರವರ ವೆಂಕಟಾಪುರ ಸರ್ವೇ ಮೂಲ ಸರ್ವೆ ನಂ.13 ದುರಸ್ಥಿಯಾಗಿ ಹೊಸ ಸರ್ವೆ ನಂ.35 ರಂತೆ ಇಂಡೀಕರಣ ಮಾಡಿಕೊಟ್ಟರು. ಶಿರಸ್ತೇದಾರ ಹರಿಪ್ರಸಾದ್, ತಾಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್, ರಾಜ್ಯ ಕಾರ್ಯದರ್ಶಿ ಅಬ್ಬಿಣ್ಣ ಶಿವಣ್ಣ, ರಾಮು, ಪಂಚಾಯ್ತಿ ಅಧ್ಯಕ್ಷ ಸೀತಪ್ಪ, ತಿಮ್ಮರಾಯಪ್ಪ, ಚಂದ್ರಪ್ಪ ಇನ್ನಿತರರು ಇದ್ದರು.