7ಎಚ್ಎಸ್ಎನ್8 : ಹೊಳೆನರಸೀಪುರ ತಾ. ಬಾಗಿವಾಳಿನಲ್ಲಿ ಎನ್‌ಆರ್‌ಎಲ್‌ಎಂ ಮತ್ತು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ(ರಿ) ವತಿಯಿಂದ ಸಕ್ಷಮ್ ಕೇಂದ್ರವನ್ನು ತಾ.ಪಂ. ಇಒ ಮುನಿರಾಜು ಉದ್ಘಾಟಿಸಿದರು. | Kannada Prabha
Image Credit: KP
ಬಾಗಿವಾಳು ಗ್ರಾಮದಲ್ಲಿ ತಾಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಮತ್ತು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ(ರಿ) ವತಿಯಿಂದ ಸಕ್ಷಮ್ ಕೇಂದ್ರ(ಆರ್ಥಿಕ ಸಾಕ್ಷರತಾ ಹಾಗೂ ಸೇವಾ ವಿತರಣಾ ಕೇಂದ್ರ) ಉದ್ಘಾಟಿಸಿ ಮಾತನಾಡಿದರು. ಖಾಸಗಿ ಫೈನಾನ್ಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ವಂಚನೆಯ ಜಾಲದ ಮೋಸಕ್ಕೆ ಮಹಿಳೆಯರು ಮತ್ತು ಸಂಘ ಸಂಸ್ಥೆಗಳು ಬಲಿಯಾಗಬಾರದು ಈ ನಿಟ್ಟಿನಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸಂಬಂಧಿತ ಮಾಹಿತಿಗಾಗಿ ಸಕ್ಷಮ್ ಕೇಂದ್ರ ಕಾರ್ಯ ನಿರ್ವಹಿಸಲಿದೆ ಮತ್ತು ಸ್ವಸಹಾಯ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಹಿಳೆಯರ ಸ್ವಸಹಾಯ ಸಂಘ ಗುಂಪುಗಳಿಗೆ ಮಾಹಿತಿ ನೀಡಲು ಸಕ್ಷಮ್ ಕೇಂದ್ರ ಪ್ರಾರಂಭಿಸಲಾಗಿದೆ. ಸ್ವಸಹಾಯ ಸಂಘದ ಗುಂಪುಗಳು ಈ ಕೇಂದ್ರದ ಮೂಲಕ ಆರ್ಥಿಕ ನೆರವಿನ ಸೌಲಭ್ಯಗಳ ಮಾಹಿತಿ ಪಡೆದು ಸದೃಢರಾಗಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ, ಕುಟುಂಬ ಮತ್ತು ಸಮಾಜ ಸದೃಢವಾಗುತ್ತದೆ ಎಂದು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಣಾಧಿಕಾರಿ ಮುನಿರಾಜು ತಿಳಿಸಿದರು.
ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ತಾಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಮತ್ತು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ(ರಿ) ವತಿಯಿಂದ ಸಕ್ಷಮ್ ಕೇಂದ್ರ(ಆರ್ಥಿಕ ಸಾಕ್ಷರತಾ ಹಾಗೂ ಸೇವಾ ವಿತರಣಾ ಕೇಂದ್ರ) ಉದ್ಘಾಟಿಸಿ ಮಾತನಾಡಿದರು. ಖಾಸಗಿ ಫೈನಾನ್ಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ವಂಚನೆಯ ಜಾಲದ ಮೋಸಕ್ಕೆ ಮಹಿಳೆಯರು ಮತ್ತು ಸಂಘ ಸಂಸ್ಥೆಗಳು ಬಲಿಯಾಗಬಾರದು ಈ ನಿಟ್ಟಿನಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸಂಬಂಧಿತ ಮಾಹಿತಿಗಾಗಿ ಸಕ್ಷಮ್ ಕೇಂದ್ರ ಕಾರ್ಯ ನಿರ್ವಹಿಸಲಿದೆ ಮತ್ತು ಸ್ವಸಹಾಯ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನವೀನ್, ಬಾಗಿವಾಳು ಗ್ರಾಪಂ ಮಾಜಿ ಸದಸ್ಯ ರುದ್ರಮೂರ್ತಿ, ಕೆ.ಸಿ.ವಿಜಯ್, ನಿಸರ್ಗ, ಚೈತ್ರ, ಮಂಜುಳಾ, ಸೌಮ್ಯ, ಸವಿತಾ, ಭೂಮಿಕಾ ಮುಖಂಡರಾದ ರಾಜೇಗೌಡ, ಮುರಳಿ, ರುದ್ರಪ್ಪ, ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.