ತಿಪಟೂರು: ತಾಲೂಕಿನ ಚಿಕ್ಕಹೊನ್ನವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ₹೩೦ ಸಾವಿರ ಮೊತ್ತದ ಡಿಡಿ ಮಂಜೂರಾಗಿದ್ದು ತಾಲೂಕು ಯೋಜನಾಧಿಕಾರಿ ಉದಯ್.ಕೆ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿಗಳು, ಧರ್ಮಸ್ಥಳ ಕ್ಷೇತ್ರವು ಅನ್ನದಾನ, ವಿದ್ಯಾದಾನ, ಔಷಧಿದಾನ ಹಾಗೂ ಅಭಯದಾನ ಎಂಬ ಚರ್ತುದಾನಗಳಿಗೆ ಪ್ರತೀತಿ ಪಡೆದಿದ್ದು, ವಿಶೇಷವಾಗಿ ವಿದ್ಯಾದಾನದ ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಒಳಿತಾಗುವ ಉದ್ದೇಶದಿಂದ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸುಜ್ಞಾನನಿಧಿ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ಒದಗಣೆ, ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆಯಂಥ ಸೇವೆಗಳನ್ನು ಮಾಡುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಚಿಕ್ಕಹೊನ್ನವಳ್ಳಿ ಶಾಲಾ ಕೊಠಡಿ ರಚನೆಗೆ ₹೩೦ ಸಾವಿರ ಮೊತ್ತದ ಡಿಡಿ ಮಂಜೂರುಗೊಳಿಸಿದ್ದು ಸೇವೆಯ ಸದುಪಯೋಗವನ್ನು ಶಾಲೆಯು ಪಡೆದುಕೊಳ್ಳುವಂತಾಗಲಿ ಎಂದು ತಿಳಿಸಿದರು. ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಅಶೋಕ್, ಶಾಲಾ ಮುಖ್ಯೋಪಾಧ್ಯಾಯರಾದ ಉಮೇಶ್, ಒಕ್ಕೂಟ ಅಧ್ಯಕ್ಷರಾದ ವೀಣಾ, ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಸೇವಾಪ್ರತಿನಿಧಿ ಮಮತ, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶೈಕ್ಷಣಿಕ ಕ್ಷೇತ್ರಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅವಿಸ್ಮರಣೀಯ: ಉದಯ್. ಕೆ
ಧರ್ಮಸ್ಥಳ ಕ್ಷೇತ್ರವು ಅನ್ನದಾನ, ವಿದ್ಯಾದಾನ, ಔಷಧಿದಾನ ಹಾಗೂ ಅಭಯದಾನ ಎಂಬ ಚರ್ತುದಾನಗಳಿಗೆ ಪ್ರತೀತಿ ಪಡೆದಿದ್ದು, ವಿಶೇಷವಾಗಿ ವಿದ್ಯಾದಾನದ ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಒಳಿತಾಗುವ ಉದ್ದೇಶದಿಂದ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸುಜ್ಞಾನನಿಧಿ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ಒದಗಣೆ, ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆಯಂಥ ಸೇವೆಗಳನ್ನು ಮಾಡುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಚಿಕ್ಕಹೊನ್ನವಳ್ಳಿ ಶಾಲಾ ಕೊಠಡಿ ರಚನೆಗೆ ₹೩೦ ಸಾವಿರ ಮೊತ್ತದ ಡಿಡಿ ಮಂಜೂರುಗೊಳಿಸಿದ್ದು ಸೇವೆಯ ಸದುಪಯೋಗವನ್ನು ಶಾಲೆಯು ಪಡೆದುಕೊಳ್ಳುವಂತಾಗಲಿ .
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.