ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಗರದ ಯುಬಿಎಂಸಿ ಆಡಿಟೋರಿಯಂನಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಗರದ ಯುಬಿಎಂಸಿ ಆಡಿಟೋರಿಯಂನಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಸಮಾರಂಭದಲ್ಲಿ ಖ್ಯಾತ ಸಾಮಾಜಿಕ ಹೋರಾಟಗಾರ, ನಟ ಪ್ರಕಾಶ್ ರಾಜ್ ಅವರಿಗೆ ಮಾನವ ರತ್ನ, ಖ್ಯಾತ ಉದ್ಯಮಿ, ದಾನಿ ಹಿದಾಯತುಲ್ಲಾ ಅಬ್ಬಾಸ್ ದುಬೈ ಅವರಿಗೆ ಸೇವಾ ರತ್ನ ಮತ್ತು ಖ್ಯಾತ ಬರಹಗಾರ ಸುರೇಶ್ ಭಟ್ ಬಾಕ್ರಬೈಲು ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಜೇರಾಲ್ಡ್ ಪಿಂಟೋ ಉಡುಪಿ, ಗೀತಾ ಸುರೇಶ್ ಕುಮಾರ್ ಬೈಂದೂರು, ಬಿಪಿನ್ ಚಂದ್ರಪಾಲ್ ಕಾರ್ಕಳ, ಚಂದ್ರಶೇಖರ ಶೆಟ್ಟಿ ಕುಂದಾಪುರ ಮತ್ತು ಲೇಖಕಿ ಫಾತಿಮಾ ರಲಿಯಾ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಮಾಜಿ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಮುಸ್ಲೀಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು. ಒಕ್ಕೂಟದ ರಾಜ್ಯ ಸಂಚಾಲಕ ಮುಹಮ್ಮದ್ ಯಾಸಿನ್ ಮಲ್ಪೆ ಅಭಿನಂದನಾ, ಆಶಯ ಭಾಷಣ ಮಾಡಿದರು.
ಅತಿಥಿಗಳಾಗಿ ಪ್ರಮುಖರಾದ ದಿವಾಕರ ಸನಿಲ್, ಉದಯಕುಮಾರ್ ಶೆಟ್ಟಿ ಮುನಿಯಾಲು, ಪ್ರೊ. ಫಣಿರಾಜ್, ಸುಂದರ ಮಾಸ್ತರ್, ಕೆ. ಎಲ್.ಅಶೋಕ್, ಆಸೀಫ್ ಕೋಟೇಶ್ವರ, ಸುರೇಶ್ ಕಲ್ಲಾಗರ, ಕೆ. ಅಶ್ರಫ್, ಹಾಜಿ ಸುಲೈಮಾನ್ ಸಾಹೇಬ್, ಇಮ್ತಿಯಾಝ್ ಅಹ್ಮದ್ ಉಮರ್ ಶೇಖ್, ಕರುಣಾಕರ ಶೆಟ್ಟಿ, ಎಂ.ಇ.ಮೂಳೂರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಜಮೀರ್ ಸಾಹೇಬ್ ಸ್ವಾಗತಿಸಿದರು.