ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ 2K26 Season 02 ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಎಸ್ ಜಿ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯ ಶಂಕರ್ ಇವರು ಕಾಲೇಜಿನ ಪ್ರಗತಿಯ ಕುರಿತು ಮಾತನಾಡಿ ಸತತ ಪ್ರಯತ್ನಗಳ ಮೂಲಕ ಶ್ರಮಿಸಿದರೆ ಗೆಲುವು ಶತಸಿದ್ಧ ಎಂದು ಹೇಳಿದರು.

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕಲಾವತಿ ಜಯಂತ್ ಮಾತನಾಡಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಛಲ ಎಂಬುದು ಅತ್ಯಗತ್ಯ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ನಿಖರ ಗುರಿ ಅತ್ಯಗತ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ರೂಪದರ್ಶಿ ತಷ್ಮಾ ಚೇತನ್ ಇವರು ಪದವಿ ಮತ್ತು ಪ್ಯಾಷನ್ ಸಹಸಂಬಂಧ ಹೊಂದಿದ್ದು ಇದು ಖಂಡಿತ ಮುಂದಿನ ದಿನಗಳಲ್ಲಿ ಉತ್ತಮ ಬದುಕು ಕೊಡುತ್ತದೆ. ಅದಕ್ಕೆ ನಾನೇ ನಿದರ್ಶನ. ನಿಮ್ಮೆಲ್ಲರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಜಯಂತ್ ನಡುಬೈಲು ಮಾತನಾಡಿ ಇಂದು ಮಕ್ಕಳ ನಡೆಯು ಕಾಲೇಜಿನಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲ ಅಕ್ಷಯ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸಾಧನೆಯು ಸಾಗರದ ಆಚೆಗೂ ವಿಸ್ತರಿಸಿಕೊಂಡಿದೆ. ಅದು ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಅದನ್ನು ನಮ್ಮ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎನ್ನುತ್ತಾ ಎಲ್ಲರಿಗೂ ಶುಭಾಶಯಗಳನ್ನು ಸಲ್ಲಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಇಲಾಖೆ ಸಹನಿರ್ದೇಶಕ ಆನಂದ. ಪಿ ಇವರು ಗ್ರಾಮೀಣ ಪ್ರದೇಶದಲ್ಲಿ ಅಕ್ಷಯ ಎಂಬ ಶಿಕ್ಷಣ ಸಂಸ್ಥೆ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದರು. ಮರ್ಸಿ ಬ್ಯೂಟಿ ಅಕಾಡೆಮಿ ಇದರ ಸಂಸ್ಥಾಪಕ ಮರ್ಸಿ ವೀಣಾ ಡಿಸೋಜ ಇವರು ವೇದಿಕೆಗಳಿಗೆ ಹತ್ತಿದ ಕ್ಷಣವೇ ನೀವು ಗೆದ್ದಂತೆ ಎಂದರು. ರೆಡ್ ಬುಟಿಕ್ & ಸ್ಟೈಲ್ ಸ್ಟುಡಿಯೋ ಇದರ ಒಡತಿಯಾಗಿರುವ ಮೋನಿಷ ಕಂಪ ಶುಭ ಹಾರೈಸಿದರು. ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಇಲ್ಲಿನ ನಿಮ್ಮ ಶ್ರಮಕ್ಕೆ ಶುಭವಾಗಲಿ ಎಂದು ಹಾರೈಸಿದರು.ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಶುಭಹಾರೈಸಿದರು. ಆಡಳಿತ ಅಧಿಕಾರಿ ಅರ್ಪಿತ್. ಟಿ. ಎ., ಶೈಕ್ಷಣಿಕ ಮಾರ್ಗದರ್ಶಕ ಅಭಿಲಾಷ್ ಕ್ಷತ್ರಿಯ ಶುಭ ಹಾರೈಸಿದರು.ಕಾರ್ಯಕ್ರಮದ ಇನ್ನೊರ್ವ ಪ್ರಾಯೋಜಕರಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ಮಾಲೀಕರಾದ ಬಲರಾಮ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿನಿಯರಾದ ರಮ್ಯಾ ಮತ್ತು ಮೋಕ್ಷ ಪ್ರಾರ್ಥಿಸಿದರು. ಉಪನ್ಯಾಸಕಿ ವೀಣಾ ಪ್ರಸ್ತಾವನೆಗೈದು, ಪ್ರಭಾವತಿ ಮತ್ತು ಶ್ರೀಮತಿ ರಶ್ಮಿ ಸ್ವಾಗತಿಸಿದರು. ಶೈಲಶ್ರೀ ಮತ್ತು ಅನುಷಾ ಪ್ರವೀಣ್. ಮತ್ತು ರಶ್ಮಿತಾ.ಎಸ್ ಅತಿಥಿಗಳ ಪರಿಚಯ ವಾಚಿಸಿ,ಧನ್ಯಶ್ರೀ ಮತ್ತು ವಿದ್ಯಾರ್ಥಿನಿ ಜೆನ್ನಿಫರ್ ಡಿಸೋಜ ವಂದಿಸಿದರು. ವಿದ್ಯಾರ್ಥಿನಿ ರಝೀನ ಬಾನು ನಿರೂಪಿಸಿದರು ಬಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.Prince & Princess of Dakshina kannada 2K26 Season 02 ಫ್ಯಾಷನ್ ಶೋ ವಿಜೇತರು :ವಿಭಾಗ1ಹುಡುಗರ ವಿಭಾಗ: ಜಯಗಳಿಸಿದವರು: ಅಯಂಶ್ ಎನ್, ಮೊದಲ ರನ್ನರ್‌ ಅಪ್‌: ಯಜ್ವಯ್ ಜಿ , ಸೆಕೆಂಡ್‌ ರನ್ನರ್ ಅಪ್‌: ತಸ್ಮಯ್ ಎಸ್ ಪಕ್ಕಳ

ಹುಡುಗಿಯರ ವಿಭಾಗ: ವಿನ್ನರ್‌: ಮನಸ್ವಿ, ಮೊದಲ ರನ್ನರ್‌ ಅಪ್‌: ಸಮೃದ್ಧಿ ಎಸ್, ಸೆಕೆಂಡ್‌ ರನ್ನರ್ ಅಪ್‌: ರಿಧೀಷಾ ಎಸ್


ವಿಭಾಗ 2:* ಹುಡುಗರ ವಿಭಾಗ:ವಿನ್ನರ್‌: ಧನ್ವಿತ್ ಡಿ. ಪಿ , ಮೊದಲ ರನ್ನರ್‌ ಅಪ್‌: ಅಧಿಶ್ ಎಲ್. ಎಸ್ , ಸೆಕೆಂಡ್‌ ರನ್ನರ್‌ ಅಪ್‌: ಮೌರ್ಯಹುಡುಗಿಯರ ವಿಭಾಗ:

ವಿನ್ನರ್‌: ಪ್ರಶ್ವಿ ಎಸ್, ಫಸ್ಟ್‌ ರನ್ನರ್‌ ಅಪ್‌: ಅಮೃತ ಜೆ. ಎನ್ , ಸೆಕೆಂಡ್‌ ರನ್ನರ್‌ ಅಪ್‌: ಶೈವಿ ಮರಕ್ಕಡ

ವಿಭಾಗ 3:ಹುಡುಗರ ವಿಭಾಗ: ವಿನ್ನರ್‌: ಅಹಿಲ್ ಹುಸೈನ್, ಫಸ್ಟ್‌ ರನ್ನರ್‌ ಅಪ್‌: ಹಬೀಬ್ ಜರಾರ್ , ಸೆಕೆಂಡ್‌ ರನ್ನರ್‌ ಅಪ್‌: ಸ್ಲಾಹುದ್ದಿನ್

ಹುಡುಗಿಯರ ವಿಭಾಗ: ವಿನ್ನರ್: ವಿಹಾನಿ ಜಕೆ ರ್ಫಸ್ಟ್‌ ರನ್ನರ್‌ ಅಪ್‌: ಮಿಸ್ಚ ಅನ ಡಿಸೋಜ , ಸೆಕೆಂಡ್‌ ರನ್ನರ್‌ ಅಪ್‌: ಮೌಲ್ಯ ಪೂಜಾರಿ.