ಸಾರಾಂಶ
ಬಳ್ಳಾರಿ: ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿ ಎರಡು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣ ಬಳಿಯ ಕ್ರೀಡಾ ಸಮುಚ್ಛಯದಲ್ಲಿ ನಡೆದ ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ ಭಾನುವಾರ ಸಮಾರೋಪಗೊಂಡಿದೆ.
ಆತಿಥೇಯ ಬಳ್ಳಾರಿಯ ವೈದ್ಯರು ವಿಜೇತರಾಗದಿದ್ದರೂ ಬಹುತೇಕ ಭಾಗಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವಲ್ಲಿ ಯಶ ಸಾಧಿಸಿದ್ದಾರೆ. ನಾಕೌಟ್ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 58ಕ್ಕೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.ಮಹಿಳೆಯರ ವಿಭಾಗ:
40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪಾ ಎಂ. ಮತ್ತು ಹುಬ್ಬಳ್ಳಿಯ ಡಾ.ಪೂಜಾ ಬಳ್ಳಾರಿಯ ಡಾ. ವಿಜಯಲಕ್ಷ್ಮಿ, ಡಾ.ದೀಪಾ ಪಿ. ಅವರನ್ನು ನೇರ ಸೆಟ್ ಗಳಿಂದ (2-0) 21-08, 21-02 ಅಂಕಗಳಿಂದ ಮಣಿಸಿದರು.40 ವರ್ಷ ಮೇಲ್ಪಟ್ಟ ಸಿಂಗಲ್ಸ್ ನಲ್ಲಿ ಉತ್ತರ ಕನ್ನಡದ ಡಾ.ಅರ್ಪಣಾ ಅವರು ಡಾ.ಕೋಕಿಲಾ ಹೆಗಡೆ ಅವರನ್ನು 21-16 ಮತ್ತು 21-12 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪ ಎಂ. ಮತ್ತು ಉತ್ತರ ಕನ್ನಡದ ಡಾ.ಅರ್ಪಣಾ ಅವರು ಉತ್ತರ ಕನ್ನಡದ ಡಾ.ಸಂಗೀತಾ ಮತ್ತು ಡಾ.ಕೋಕಿಲಾ ಅವರನ್ನು 21-17, 21-16 ಅಂಕಗಳಿಂದ ಸೋಲಿಸಿದರು.40 ವರ್ಷ ಕೆಳಗಿನ ಮಿಕ್ಸ್ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ಸುರೇಶ್ ಮತ್ತು ಡಾ.ದೀಪಾ ಪಿ. ಅವರನ್ನು ನೇರ ಸೆಟ್‌ನಿಂದ ಮಣಿಸಿ 21-15, 22-20 ಅಂಕಗಳಿಂದ ವಿಜಯ ಸಾಧಿಸಿದ್ದಾರೆ.
40 ವರ್ಷ ಕೆಳಗಿನ ಸಿಂಗಲ್ಸ್ ನಲ್ಲಿ ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ದೀಪಾ ಪಿ. ಅವರನ್ನು 21-07, 21-05 ಅಂಕಗಳಿಂದ ಮಣಿಸಿ ವಿಜಯಿಯಾದರು.ಪುರುಷರ ವಿಭಾಗ:
40 ವರ್ಷ ಮೇಲ್ಪಟ್ಟ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ರಾಘವ ಭಟ್ ಅವರು ಶಿವಮೊಗ್ಗದ ಡಾ.ಶೈಲೇಂದ್ರ ಅವರನ್ನು 15-04, 15-05 ಅಂಕಗಳಿಂದ ಮಣಿಸಿದರು.40 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ವಿಕ್ರಂ ಅವರು ಬಳ್ಳಾರಿಯ ಡಾ.ಸುರೇಶಕುಮಾರ್ ಎಸ್.ಕೆ. ಅವರನ್ನು 21-11, 21-10 ಅಂಕಗಳಿಂದ ಸೋಲಿಸಿ ವಿಜಯಿಯಾದರು.
40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಡಾ.ರಾಘವ ಭಟ್ ಅವರು ಶಿವಮೊಗ್ಗದ ಡಾ.ಜೈ ಭಾರತ್ ರೆಡ್ಡಿ ಹಾಗೂ ಡಾ.ಶೈಲೇಂದ್ರ ಅವರನ್ನು 21-16 ಮತ್ತು 21-11 ಅಂಕಗಳಿಂದ ಮಣಿಸಿದರು.40 ವರ್ಷ ಮೇಲ್ಪಟ್ಟ ವಿಭಾಗದಲ್ಲೂ ಬೆಂಗಳೂರಿನ ಡಾ.ಶಶಿಧರ ಬಿ.ವಿ ಮತ್ತು ಡಾ.ರಾಘವ ಭಟ್ ಅವರು ಡಾ.ಆದರ್ಶನ ಎನ್. ಹಾಗೂ ಡಾ.ಸುರೇಶಕುಮಾರ್ ಎಸ್.ಕೆ. ಅವರನ್ನು 21-18, 22-20 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ಮಿಕ್ಸ್ ಡಬಲ್ಸ್ ನಲ್ಲಿ ಡಾ.ಶಶಿಧರ್ ಹಾಗೂ ಡಾ.ದೀಪಾ ಎಂ. ಅವರು ಡಾ.ಶೈಲೇಂದ್ರ ಮತ್ತು ಡಾ.ಕೋಕಿಲಾ ಹೆಗಡೆ ಅವರನ್ನು 21-19, 21-18 ಅಂಕಗಳಿಂದ ಮಣಿಸಿದರು.ಅಂತಿಮವಾಗಿ ಆಡಿದ ವಿವಿಧ ವಿಭಾಗಗಳ 10 ಪೈನಲ್ ಪಂದ್ಯಗಳಲ್ಲಿ ಬೆಸ್ಟ್ ಆಫ್ 3 ಯಾವೂ ಆಗಲಿಲ್ಲ. ಎಲ್ಲವೂ ನೇರ ಸೆಟ್ ಗಳಿಂದ ಗೆಲುವು ಆಗಿದ್ದವು. (ಬಹುತೇಕ ಮ್ಯಾಚ್ ಒನ್ ಸೈಡ್).
ಟ್ರೋಪಿ ವಿತರಣೆ ಸಮಾರಂಭ:ಕೊನೆಯಲ್ಲಿ ಜರುಗಿದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಎಸ್ಪಿ ಡಾ.ಶೋಭಾರಾಣಿ ವಿನ್ನರ್ ಹಾಗೂ ರನ್ನರ್ ಅಪ್‌ಗಳಿಗೆ ಟ್ರೋಫಿ ವಿತರಿಸಿದರು.
ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಮಹೇಶ್ ಚಂದ್ರ, ಖಜಾಂಚಿ ಡಾ.ಸಂಜತಕುಮಾರ್, ಉಪಾಧ್ಯಕ್ಷ ನರೇಂದ್ರಕುಮಾರ್, ಹಿರಿಯ ದಂತ ವೈದ್ಯ ಶೇಷಗಿರಿ ರಾವ್, ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ.ಮಧುಸೂದನ ರೆಡ್ಡಿ, ಕಾರ್ಯದರ್ಶಿ ಡಾ.ಶ್ರೀಧರ ರೆಡ್ಡಿ, ಖಜಾಂಚಿ ಡಾ.ರಾಜೀವ್ ವಿ., ರಾಜ್ಯ ಪ್ರತಿನಿಧಿ ಡಾ.ಮಂಜುನಾಥ, ಡಾ.ವೀರಾರೆಡ್ಡಿ ಉಪಸ್ಥಿತರಿದ್ದರು.