ಕನ್ನಡಪ್ರಭ ವಾರ್ತೆ ಗುಬ್ಬಿ

52,000 ಕೋಟಿ ವೆಚ್ಚದಲ್ಲಿ ರೈಲ್ವೆ ಖಾತೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಒಂದು ವರ್ಷದಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳ ಅನುಷ್ಠಾನ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.ಗುಬ್ಬಿ ತಾಲೂಕಿನ ಬಾಡೇನಹಳ್ಳಿ ಬಂಡೆಹಳ್ಳಿ ಹಾಗೂ ಗುಬ್ಬಿಯಲ್ಲಿ ರೈಲ್ವೆ ಕೆಲ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದ 31 ಕಡೆ ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳು ಇದ್ದು ಇದರಲ್ಲಿ 27 ಕಾಮಗಾರಿಗಳು ಪ್ರಾರಂಭವಾಗಿ ಉಳಿಕೆ ನಾಲ್ಕು ಕೆಲಸ ಮುಂಜೂರು ಆಗಿದೆ. ಅರಸೀಕೆರೆ ಮತ್ತು ತುಮಕೂರು ಗುಬ್ಬಿ ಪ್ರತಿಯೊಂದು ರೈಲ್ವೆ ಸ್ಟೇಷನ್‌ಗಳಲ್ಲೂ ಹೊಸ ರೈಲ್ವೆ ಬಿಡುತ್ತಿದ್ದು ರೈಲಿನ ದರ ಕೂಡ ಕಡಿಮೆ ಇದ್ದು ಎಲ್ಲರೂ ಕೂಡ ಪ್ರಯಾಣ ಬೆಳೆಸಬಹುದು. ಬೆಂಗಳೂರು ಗುಬ್ಬಿ ನಿಟ್ಟೂರು ಎಲ್ಲಾ ಕಡೆ ರೈಲ್ವೆ ಸ್ಟೇಷನ್‌ಗಳಲ್ಲಿ ರೈಲು ನಿಲ್ಲುತ್ತದೆ ಎಂದರು.

ತುಮಕೂರು ರಾಯದುರ್ಗ ರಸ್ತೆಗೆ ಸುಮಾರು 2800 ಎಕರೆ ಜಮೀನನ್ನು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಸಹಕಾರದಿಂದ ಭೂ ಸ್ವಾಧೀನ ಪಡೆಯಲಾಗಿದೆ. 2027 ಡಿಸೆಂಬರ್ ಒಳಗೆ ರೈಲ್ವೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜಿಲ್ಲೆಯಲ್ಲಿ ಗುಬ್ಬಿ ತಾಲೂಕಿನಲ್ಲಿ ಹೆಚ್ಚು ಸೌಲಭ್ಯ ಪಡೆದಿದ್ದು, ನಂತರ ತುಮಕೂರು, ತಿಪಟೂರು ತಾಲೂಕು ಪಡೆದಿವೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಲರಾಮಯ್ಯ , ಜಿಲ್ಲಾ ಉಪಾಧ್ಯಕ್ಷ ಲಿಂಗಪ್ಪ , ಮುಖಂಡರಾದ ಚಂದ್ರಶೇಖರ ಬಾಬು , ಬಿ.ಎಸ್.ನಾಗರಾಜು ಎನ್.ಸಿ.ಪ್ರಕಾಶ್ , ವಿಜಯ್ ಕುಮಾರ್ , ಎಕೆಪಿರಾಜು , ನವ್ಯಬಾಬು ,ತಾತಯ್ಯ ರೈಲ್ವೆ ಪೋಲೀಸ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.