ಸುಳ್ಯ: ಸುಳ್ಯ ತಾಲೂಕಿನಲ್ಲಿ ಬುಧವಾರ ಸಂಜೆ ಸುರಿದ ಮಳೆ ಹಾಗೂ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ. ಸುಮಾರು ಒಂದು ತಾಸು ಗಾಳಿ ಸಹಿತ ಮಳೆ ಸುರಿಯಿತು. ಸಂಪಾಜೆ ಪೆಲ್ತಡ್ಕದ ಚಂದ್ರಾವತಿ, ಹಾಗೂ ಗೂನಡ್ಕ ನಿವಾಸಿ ರಾಜ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ಅದೃಷ್ಟಾವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಳಿ ಮಳೆಗೆ ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದು ಹಾನಿಯಾಗಿರುವುದಾಗಿ ತಿಳಿದು ಬಂದಿದೆ.ಗುರುಂಪು ನಿವಾಸಿ ಮುನೀರ್ ಎಂಬುವವರ ಮನೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವಪಾಯ ಸಂಭವಿಸದೆ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ