ನಾಡು ನುಡಿ ಉಳಿಸುವ, ಬೆಳೆಸುವ ರೀತಿ ರಾಜ್ಯೋತ್ಸವ ಆಚರಿಸಬೇಕಿದೆ: ತಹಸೀಲ್ದಾರ್ ಲಿಖಿತ ಮೋಹನ್

| Published : Nov 04 2025, 02:00 AM IST

ನಾಡು ನುಡಿ ಉಳಿಸುವ, ಬೆಳೆಸುವ ರೀತಿ ರಾಜ್ಯೋತ್ಸವ ಆಚರಿಸಬೇಕಿದೆ: ತಹಸೀಲ್ದಾರ್ ಲಿಖಿತ ಮೋಹನ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ಇಂದು ನಾವೆಲ್ಲ ರಾಜ್ಯದಾದ್ಯಂತ ಸರಳವಾದ ರೀತಿಯಲ್ಲಿ ನಮ್ಮ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದೇವೆ. ನಾವೆಲ್ಲರೂ ಸೇರಿ ನಮ್ಮ ನಾಡು ನುಡಿ ಉಳಿಸುವ, ಬೆಳೆಸುವ, ಸ್ಮರಿಸುವ ರೀತಿ ಕನ್ನಡ ರಾಜ್ಯೋತ್ಸವ ಆಚರಿಸಬೇಕಿದೆ ಹಾಗೂ ನಮ್ಮೆಲ್ಲರ ಜವಾಬ್ದಾರಿಯೂ ಹೌದು ಎಂದು ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ ಹೇಳಿದರು.

- ತಾಲ್ಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪ

ಇಂದು ನಾವೆಲ್ಲ ರಾಜ್ಯದಾದ್ಯಂತ ಸರಳವಾದ ರೀತಿಯಲ್ಲಿ ನಮ್ಮ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದೇವೆ. ನಾವೆಲ್ಲರೂ ಸೇರಿ ನಮ್ಮ ನಾಡು ನುಡಿ ಉಳಿಸುವ, ಬೆಳೆಸುವ, ಸ್ಮರಿಸುವ ರೀತಿ ಕನ್ನಡ ರಾಜ್ಯೋತ್ಸವ ಆಚರಿಸಬೇಕಿದೆ ಹಾಗೂ ನಮ್ಮೆಲ್ಲರ ಜವಾಬ್ದಾರಿಯೂ ಹೌದು ಎಂದು ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ ಹೇಳಿದರು. ಕೊಪ್ಪ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಶನಿವಾರ ನಡೆದ ೭೦ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷದ ನಮ್ಮ ರಾಜ್ಯದಲ್ಲಿ ೭೦ ಜನ ಸಾಧಕರಿಗೆ ಈ ಪ್ರಶಸ್ತಿ ಪ್ರಕಟಿಸಿದೆ. ನಮ್ಮ ಜಿಲ್ಲೆಯಲ್ಲೂ ಈ ಬಾರಿ ರಹಮತ್ ತರೀಕೆರೆಯಂತ ಸಾಹಿತಿಗಳಿಗೆ ಈ ಗೌರವ ಲಭಿಸಿದೆ.

ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡಕ್ಕೆ ಹಿರಿಮೆ ತಂದುಕೊಟ್ಟ ಬಾನು ಮುಷ್ತಾಕ್ ಇಲ್ಲಿ ಸ್ಮರಣೀಯ. ಈ ಬಾರಿ ಅವರ ಎದೆಯ ಹಣತೆ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ದಕ್ಕಿರುವುದು ಹೆಮ್ಮೆಯ ಸಂಗತಿ. ಖ್ಯಾತ ಲೇಖಕ, ವಿಮರ್ಶಕ ಎಸ್.ಎಲ್. ಭೈರಪ್ಪ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಕೊಪ್ಪ ತಾಲೂಕು ಕಸಾಪ. ಅಧ್ಯಕ್ಷ ಜೆ.ಎಂ. ಶ್ರೀಹರ್ಷ ಮಾತನಾಡಿ ಎಲ್ಲಾ ಭಾಷೆಗಳ ಜೊತೆ ಬಾಂಧವ್ಯ ಸಾಧಿಸಿ ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ಕೆಲಸ ಕನ್ನಡಿಗರದ್ದಾಗ ಬೇಕು. ನಮ್ಮ ನಾಡಿನ ನಮ್ಮವರೇ ಆದ ರಾಷ್ಟ್ರ ಕವಿ ಕುವೆಂಪು ವಿರಚಿತ ನಮ್ಮ ನಾಡಗೀತೆಯಲ್ಲಿ ಹೇಳಿರುವ ಹಾಗೆ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎನ್ನುವ ತಾತ್ಪರ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳೋಣ ಎಂದರು. ಜಾನಪದ ಕಲಾವಿದೆ ನಾರ್ವೆಯ ಶ್ಯಾಮಲಾರವರಿಗೆ ಕೊಪ್ಪ ತಾಲೂಕು ರಾಜ್ಯೋತ್ಸವ ಪ್ರಶಸ್ತಿನೀಡಿ ಗೌರವಿಸಲಾಯಿತು. ಶ್ಯಾಮಲ ಅವರು ನಾರ್ವೆಯ ಚಂಡಿಕೇಶ್ವರಿ ಭಜನ ಮಂಡಳಿ ಸಕ್ರಿಯ ಸದಸ್ಯರಾಗಿದ್ದು ಹಲವಾರು ಸಂಘಟನೆಗಳು ಇವರ ಕಲಾ ಸೇವೆ ಗುರುತಿಸಿ ಸನ್ಮಾನಿಸಿವೆ. ಇವರ ಕಲಾ ಸೇವೆ ಗುರುತಿಸಿ ತಾಲ್ಲೂಕು ಆಡಳಿತ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಇವರೊಂದಿಗೆ ಕೃಷಿ ಮತ್ತು ಜಾನಪದ ಕಲಾಕ್ಷೇತ್ರದಲ್ಲಿ ಬೊಮ್ಲಾಪುರದ ರಾಜಾಶಂಕರ್, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅಗಳಗಂಡಿ ಪಂಚಾಯಿತಿ ಪಿಡಿಒ ಕೃಷ್ಣಪ್ಪ ಮತ್ತು ಸಮಜ ಸೇವೆಗಾಗಿ ಕುದುರೆಗುಂಡಿ ಅಬ್ದುಲ್ ಶಮೀಮ್ ಇವರನ್ನು ತಾಲೂಕು ಆಡಳಿತದಿಂದ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ಸಂಜೆ ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ, ಭಾಷಾ ಶಿಕ್ಷಕ ಆರ್.ಡಿ. ರವೀಂದ್ರ, ಸುಚಿತ್ಚಂದ್ರ, ಸಂತೋಷ್ ಕುಲಾಸೋ, ಚಾವಲ್ಮನೆ ಸುರೇಶ್ ನಾಯಕ್, ಜಗದೀಶ್, ರುದ್ರೇಶ್, ಅಶೋಕ್ ನಾರ್ವೆ, ರಮೇಶ್, ಎಚ್.ಎಸ್.ಇನೇಶ್, ಕ.ರ.ವೇ.ಯ ಫ್ರಾನ್ಸಿಸ್ ಕರ್ಡೋಜ, ಎಸ್.ಎನ್.ಚಂದ್ರಕಲಾ, ವಿವಿಧ ಶಾಲೆಗಳ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.