ಹಿಡಿತ: ನಾಯಕ ಸಂಘಗಳ ರಾಜೀನಾಮೆಗೆ ಗಡುವು: ಶಾಸಕ ಬಿ.ದೇವೇಂದ್ರಪ್ಪ

| Published : Nov 04 2025, 02:00 AM IST

ಹಿಡಿತ: ನಾಯಕ ಸಂಘಗಳ ರಾಜೀನಾಮೆಗೆ ಗಡುವು: ಶಾಸಕ ಬಿ.ದೇವೇಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ಎಸ್.ಟಿ.ಸಮುದಾಯದ ಏಕೈಕ ಶಿಕ್ಷಣ ಸಂಸ್ಥೆಯಾದ ಪಟ್ಟಣದ ಹೋ.ಚಿ.ಬೋರಯ್ಯ ಕಾಲೇಜ ಮತ್ತು ಶಾಲೆಗಳನ್ನು ಮೂರು ನಾಯಕ ಸಂಘಗಳಾಗಿ ಹಿಡಿತ ಸಾಧಿಸಲು ಮುಂದಾಗಿದ್ದು, ಮೂರು ಸಂಘಗಳು ರಾಜೀನಾಮೆ ನೀಡದಿದ್ದರೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.

ಕನ್ನಡಪ್ರಭವಾರ್ತೆ ಜಗಳೂರು

ಪಟ್ಟಣದ ಹೋ.ಚಿ.ಬೋರಯ್ಯ ಕಾಲೇಜಿನಲ್ಲಿ ನಾಯಕ ಸಮಾಜದ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಹೋ.ಚಿ.ಬೋರಯ್ಯ ಶಿಕ್ಷಣ ಸಂಸ್ಥೆಯನ್ನು ಮೂರು ನಾಯಕ ಸಂಘಗಳು ತಮ್ಮ ಕಪಿ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಬಯಸಿ ನೇಮಕಾತಿ ವಿಚಾರದಲ್ಲಿ ಆರ್ಥಿಕ ವ್ಯವಹಾರಗಳಾಗಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ಬಣದಿಂದ ಸಮುದಾಯದ ಮೇಲೆ ಪರಿಣಾಮ ಬೀರಿದರೆ ಅದನ್ನು ಸಹಿಸಿಕೊಳ್ಳಲು ಸಮಾಜ ಒಪ್ಪಲ್ಲ. ಸಮಾಜದ ಅಭ್ಯುದಯಕ್ಕೆ ಪ್ರತಿ ತಿಂಗಳು ನಾನು ನನ್ನ ವೇತನದ 50 ಸಾವಿರ ರು. ನೀಡುತ್ತೇನೆ. ಜತೆಗೆ ನೌಕರರು, ನಿವೃತ್ತ ನೌಕರರಿಂದ ನಿಧಿ ಸಂಗ್ರಹಕ್ಕೆ ಜೋಳಿಗೆ ಹಾಕಿ ಬದ್ಧನಿದ್ದೇನೆ. ಪ್ರತಿಭಾವಂತ ವಿದ್ಯಾರ್ಥೀಗಳ ಶಿಕ್ಷಣ, ಹಿಂದುಳಿದವರ ಅರೋಗ್ಯ ಮತ್ತು ಕೈಲಾಗದವರಿಗೆ ಸಂಗಹವಾದ ಹಣವನ್ನು ಬಳಸೋಣ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಗೈರು ಆಗಿದ್ದರೆ, ಇನ್ನೊಬ್ಬ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಬೆಂಬಲಿಗರಿಂದ ಮಾಹಿತಿ ರವಾನಿಸಿದರು. ಈ ವೇಳೆ ಸ್ವಲ್ಪ ಮಾತಿನ ಚಕಮಕಿಗಳು ನಡೆದವು. ನಾಯಕ ಸಮುದಾಯ ಕೆ.ಪಿ.ಪಾಲಯ್ಯ, ಎ.ಎಲ್.ತಿಪ್ಪೇಸ್ವಾಮಿ, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ರಾಜಪ್ಪ, ಬಸವರಾಜ್, ಸೂರಪ್ಪ ಸೇರಿದಂತೆ 100ಕ್ಕೂ ಹೆಚ್ಚು ಜನ ಇದ್ದರು.

ಕೋಟ್‌....

ಈ ಹಿಂದೆ ಅನೇಕ ಸಭೆಗಳಾಗಿದ್ದು ಸಭೆಯ ತೀರ್ಮಾನದಂತೆ ನ.20ರ ಒಳಗೆ ಹಳೆಯ ಸಂಘಗಳ ಸದಸ್ಯರು ರಾಜೀನಾಮೆ ನೀಡಿ ವಿಸರ್ಜನೆಯಾಗಬೇಕು. ಆಡಳಿತಾತ್ಮಕವಾಗಿ ಹೆಚ್ಚುಕಡಿಮೆಯಾದರೆ ಇದಕ್ಕೆ ಯಾರು ಹೊಣೆ. ಸಂಘಗಳ ನಡುವಿನ ತಿಕ್ಕಾಟದಿಂದ ಕಳೆದ ಎರಡು ವರ್ಷಗಳಿಂದ ವಾಲ್ಮೀಕಿ ಮತ್ತು ಮದಕರಿ ನಾಯಕ ಜಯಂತಿಗಳ ಅದ್ಧೂರಿ ಆಚರಣೆಗಳಾಗಿಲ್ಲ. ನಾನು ಶಾಸಕನಾದರೂ ಸಹ ಸಮುದಾಯದಲ್ಲಿ ನಾನೊಬ್ಬ ಸದಸ್ಯ. ಸಮಾಜಕ್ಕಿಂತ ನಾನೇನು ದೊಡ್ಡವನಲ್ಲ. ಇದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು.