ರಾಮನಗರ: ಒಂಭತ್ತು ವರ್ಷಗಳ ಬಳಿಕ ರಾಮನಗರ ನಗರಸಭೆ ನೀರಿನ ದರವನ್ನು ಪರಿಷ್ಕರಿಸಿ ಹೆಚ್ಚುವರಿ ಆದಾಯ ಸಂಗ್ರಹದ ನಿರೀಕ್ಷೆ ಇಟ್ಟಿದ್ದರೂ, ಬಾಕಿ ಉಳಿದಿರುವ ಕೋಟ್ಯಂತರ ರುಪಾಯಿ ನೀರಿನ ಶುಲ್ಕ ವಸೂಲಿ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಗರದಲ್ಲಿ ಜುಲೈ ತಿಂಗಳಿನಿಂದಲೇ ನೀರಿನ ದರವನ್ನು ಶೇ.60ರಷ್ಟು ಹೆಚ್ಚಳ ಮಾಡಿ ಪರಿಷ್ಕೃತ ದರ ಜಾರಿಗೆ ತರಲಾಗಿದೆ. ಹೊಸ ದರದಿಂದ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದ್ದರೂ, ಹಳೆಯ ಬಾಕಿ ಮೊತ್ತ ಮಾತ್ರ ಬೆಟ್ಟದಂತೆ ಏರಿಕೆಯಾಗಿದೆ.18 ಸಾವಿರಕ್ಕೂ ಅಧಿಕ ನಳಗಳ ಸಂಪರ್ಕ :
ಪ್ರಸ್ತುತ ಜಲಮಂಡಳಿಗೆ ಜೂನ್ ತಿಂಗಳವರೆಗೆ 8.50 ಲಕ್ಷ ಬಡ್ಡಿ ಸೇರಿ ಒಟ್ಟು 21 ಕೋಟಿ 99 ಲಕ್ಷ ರುಪಾಯಿ ನೀರಿನ ಶುಲ್ಕ ಬಾಕಿ ಉಳಿದಿದೆ. ಇದರಲ್ಲಿ ಗೃಹ ಬಳಕೆ - 18 ಕೋಟಿ 94 ಲಕ್ಷ, ಗೃಹೇತರ ಬಳಕೆ - 17 ಲಕ್ಷ 20 ಸಾವಿರ ಹಾಗೂ ವಾಣಿಜ್ಯ- ಕೈಗಾರಿಕೆ ಬಳಕೆ - 2 ಕೋಟಿ 87 ಲಕ್ಷ ರುಪಾಯಿ ನೀರಿನ ಮಾಸಿಕ ದರ ಬಾಕಿ ಸೇರಿದೆ.ನೆಟ್ಕಲ್ ಯೋಜನೆ ಜಾರಿಗೂ ಮುನ್ನ 2024ರ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ನೀರಿನ ಮಾಸಿಕ ದರ 17 ಕೋಟಿ 14 ಲಕ್ಷ ರುಪಾಯಿ ಬಾಕಿ ಇತ್ತು. ಈಗ ಅದು 2 ವರ್ಷಗಳಲ್ಲಿ 21 ಕೋಟಿ 99 ಲಕ್ಷ ರುಪಾಯಿಗೆ ತಲುಪಿದೆ. ಅನೇಕ ವರ್ಷಗಳಿಂದ ನೀರಿನ ಬಿಲ್ ಬಾಕಿ ಲಕ್ಷಾಂತರ ರುಪಾಯಿ ಬರಬೇಕಿದೆ. ಈ ಮೊತ್ತ ತಿಂಗಳಿಂದ ತಿಂಗಳಕ್ಕೆ ಕೋಟಿಗಟ್ಟಲೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಜಲಮಂಡಳಿ ಬಿಲ್ ವಸೂಲಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪರಿಣಾಮ ಬಡ್ಡಿ ಜೊತೆಗೆ ಅಸಲು ಬೆಳೆಯಲು ಕಾರಣವಾಗಿದೆ.
ನಗರದಲ್ಲಿ ಸುಮಾರು 1.40 ಲಕ್ಷ ಜನಸಂಖ್ಯೆಯಿದ್ದು, 31 ವಾರ್ಡ್‌ಗಳು ಇವೆ. ವಾಣಿಜ್ಯ - 466, ಗೃಹ ಬಳಕೆ - 17,138 ಹಾಗೂ ಗೃಹಯೇತರ ಬಳಕೆಗಾಗಿ 133 ಸೇರಿ ಒಟ್ಟು 17,737 ನಳಗಳ ಸಂಪರ್ಕಗಳಿದ್ದು, ಹೊಸ ಪೈಪ್‌ಲೈನ್ ಹಾಗೂ ಮೀಟರ್ ಅಳವಡಿಸಲಾಗಿದೆ. ನೀರಿನ ದುರ್ಬಳಕೆ ತಡೆಯುವುದು ಹಾಗೂ ಮಿತ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೀಟರ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಹಳೆ ಬಿಲ್ ಪಾವತಿಗೆ ಮೀನಮೇಷ:
ಹಳೇಯ ನೀರಿನ ಶುಲ್ಕವನ್ನು ಮನ್ನಾ ಮಾಡಿಸಲಾಗುವುದು ಎಂದು ಚುನಾಯಿತ ಪ್ರತಿನಿಧಿಗಳು ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾವಿರಾರು ಗ್ರಾಹಕರು ಹಳೆಯ ಶುಲ್ಕವನ್ನು ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ. ಈ ಮಧ್ಯೆ ಜಲಮಂಡಳಿ ಅಧಿಕಾರಿಗಳು ನೀರಿನ ಶುಲ್ಕ ವಸೂಲಿ ಸಂಬಂಧ ವಿಶೇಷ ಕಾರ್ಯಾಚರಣೆ ಮತ್ತು ಸಂಪರ್ಕ ಕಡಿತಕ್ಕೆ ಮುಂದಾಗುತ್ತಿದ್ದಂತೆ ಚುನಾಯಿತ ಪ್ರತಿನಿಧಿಗಳು ಒತ್ತಡ ಹೇರುತ್ತಾರೆ. ಹೀಗಾಗಿ ನೀರಿನ ಬಾಕಿ ಬಿಲ್ ವಸೂಲಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡುವ 465 ಕೋಟಿ ರುಪಾಯಿ ವೆಚ್ಚದ ನೆಟ್ಕಲ್ ಯೋಜನೆ ಅನುಷ್ಠಾನಗೊಂಡಿದ್ದು, ಅದು ಯಶಸ್ವಿ ಕೂಡ ಆಗಿದೆ. ಈಗ ಯಾವ ಬಡಾವಣೆಗಳಿಂದಲೂ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬರುತ್ತಿಲ್ಲ. ಆರೇಳು ವಾರ್ಡುಗಳಿಗೆ ದಿನದ 24 ಗಂಟೆ ನೀರು ಪೂರೈಸಲಾಗುತ್ತಿದ್ದು, ಅದನ್ನು ಎಲ್ಲ ವಾರ್ಡುಗಳಿಗೂ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ.
ಈ ಮಧ್ಯೆ ನೀರು ಸರಬರಾಜು ನಿರ್ವಹಣೆ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಇದರಿಂದ ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಬೀದಿ ದೀಪಗಳ ನಿರ್ವಹಣೆ ಜೊತೆಗೆ ನೀರು ಸರಬರಾಜು ಮತ್ತು ನೀರಿನ ಕರ ವಸೂಲಾತಿ ಜವಾಬ್ದಾರಿಯೂ ನಗರಸಭೆ ಹೆಗಲಿಗೆ ಬೀಳಲಿದೆ.ಬಾಕ್ಸ್ ...............
ನೀರಿನ ಮಾಸಿಕ ದರ ಪರಿಷ್ಕರಣೆ :ಈ ಮೊದಲು ಪ್ರತಿ ಸಂಪರ್ಕಕ್ಕೆ ಗೃಹ ಬಳಕೆಗೆ 218, ಗೃಹೇತರಕ್ಕೆ 436 ಹಾಗೂ ವಾಣಿಜ್ಯ ಬಳಕೆಗೆ 880 ರುಪಾಯಿ ಮಾಸಿಕ ದರ ವಸೂಲಿ ಮಾಡಲಾಗುತ್ತಿತ್ತು. ಆದರೀಗ ಪ್ರತಿ ತಿಂಗಳಿಗೆ 8 ಸಾವಿರ ಲೀಟರ್ ಉಪಯೋಗಿಸಿದರೆ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ಗೆ 20.80 ಪೈಸೆಯಂತೆ 166 ರುಪಾಯಿ, ಗೃಹಯೇತರ ಬಳಕೆದಾರರಿಗೆ ಪ್ರತಿ ಲೀಟರ್ ಗೆ 41.60 ಪೈಸೆಯಂತೆ 333 ರು.,ಹಾಗೂ ವಾಣಿಜ್ಯ- ಕೈಗಾರಿಕಾ ಉದ್ದೇಶಕ್ಕಾಗಿ ಪ್ರತಿ ಲೀಟರ್ ಗೆ 83.20 ಪೈಸೆಯಂತೆ 666 ರುಪಾಯಿ ದರ ನಿಗದಿಯಾಗಿದೆ.
ಕೋಟ್ .............ನೆಟ್ಕಲ್ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ರಾಮನಗರದ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರುವುದು ಸಂತಸ ತಂದಿದೆ. ಬಹುತೇಕರು ನೀರಿನ ಬಿಲ್ ಗಳ್ನು ಪಾವತಿಸದ ಕಾರಣ ಸುಮಾರು 22 ಕೋಟಿ ರು. ಬಾಕಿ ಉಳಿದಿದೆ. ಈಗಾಗಲೇ ಕನಕಪುರದಲ್ಲಿ ನೀರಿನ ಹಳೇ ಬಿಲ್ ಗಳನ್ನು ಸರ್ಕಾರ ಮನ್ನಾ ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಯೂ ಚರ್ಚೆ ನಡೆಸಿದ್ದು, ಹಳೆ ಬಿಲ್ ಮನ್ನಾ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.ಕೋಟ್ .............
ನೀರು ಸರಬರಾಜು ನಿರ್ವಹಣೆ ಜವಾಬ್ದಾರಿ ಜಲಮಂಡಳಿಯಿಂದ ನಗರಸಭೆಗೆ ಹಸ್ತಾಂತರವಾಗಲಿದೆ. ಸಮರ್ಪಕವಾಗಿ ನೀರು ಸರಬರಾಜು ಆಗಬೇಕೆಂದರೆ ಹಳೆ ಮತ್ತು ಹೊಸ ನೀರಿನ ಬಿಲ್ ಗಳನ್ನು ಜನರು ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ಸರ್ಕಾರ ಹಳೆ ಬಿಲ್ ಅಥವಾ ಬಡ್ಡಿ ಮನ್ನಾ ಮಾಡಿದರೆ ಜನರ ಮೇಲಿನ ಹೊರೆ ತಗ್ಗಲಿದೆ. ಇಲ್ಲದಿದ್ದರೆ ಬಾಕಿ ಕರ ವಸೂಲಿಗೆ ವಿಶೇಷ ಅಭಿಯಾನ ನಡೆಸಲಾಗುವುದು.- ಕೆ.ಶೇಷಾದ್ರಿ , ನಗರಸಭೆ, ರಾಮನಗರ.
ಬಾಕ್ಸ್ ..........ನೀರಿನ ಕರಬಾಕಿ ವಿವರ
ವಾಣಿಜ್ಯ ಬಳಕೆ2,87,95,410 ರು.ಗೃಹ ಬಳಕೆ18,94,72,495 ರು.
ಗೃಹಯೇತರ ಬಳಕೆ 17,20,917 ರು.ಜೂನ್ ವರೆಗೆ ಬಿಲ್ ಮೊತ್ತ21,79,81,458 ರು.
ಜೂನ್ ವರೆಗೆ ಬಿಲ್ ಗೆ ಬಡ್ಡಿ 8,50,450 ರು.ಜೂನ್ ವರೆಗೆ ಕರ ಸಂಗ್ರಹ30,78,680 ರು.
ಜೂನ್ ವರೆಗೆ ಒಟ್ಟು ಬಾಕಿ21,99,88,822 ರು.31ಕೆಆರ್ ಎಂಎನ್ 2,3,4.ಜೆಪಿಜಿ
2.ರಾಮನಗರ ನಗರಸಭೆ3.ಇಕ್ಬಾಲ್ ಹುಸೇನ್
4.ಕೆ.ಶೇಷಾದ್ರಿ----------------------------