ಈಗಿನ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀ ಸಮಾನವಾದ ಪ್ರಧಾನ ಸಮಾಜವಾಗಬೇಕಿದೆ. ಮಹಿಳೆಯರು ಸಾಧನೆ ಮಾಡಲು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮುಂದೆ ಬರಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಈಗಿನ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀ ಸಮಾನವಾದ ಪ್ರಧಾನ ಸಮಾಜವಾಗಬೇಕಿದೆ. ಮಹಿಳೆಯರು ಸಾಧನೆ ಮಾಡಲು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮುಂದೆ ಬರಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.ನಗರದ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್‌ ಅವರ ಅವಧಿಯ ಕಾರ್ಯಚಟುವಟಿಕೆಗಳ ಮೊದಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿರುರೋಟರಿಯಂತಹ ವಿಶ್ವವ್ಯಾಪಿ ಸೇವಾ ಸಂಘಟನೆಯ ನೇತೃತ್ವ ವಹಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಅಧ್ಯಕ್ಷೆ ಭಾಗ್ಯಲಕ್ಷ್ಮಿಅವರು ಉದಾಹರಣೆಯಾಗಿದ್ದಾರೆ ಎಂದರು. ರೋಟರಿ ಎಂಬುದು ಒಂದು ಸಂಸ್ಥೆಯಲ್ಲ. ಇದು ಕುಟುಂಬ. ಇದು ನಮ್ಮದೆಂಬ ಭಾವನೆಯಿಂದ ಬಂದು ಸೇರುವುದು.ಇದು ನಮ್ಮದೆಂಬ ಭಾವನೆಯಿಂದ ಬಂದು ಸೇರುವುದು ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಕಲಿಸುತ್ತದೆ ಎಂದರು. ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸ್ವಾಗತಿಸಿದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್, ಈ ವರ್ಷ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ಟ್ರಸ್ಟ್ಅಧ್ಯಕ್ಷ ಎಸ್.ಎಲ್.ಕಾಡದೇವರ ಮಠ, ಸಿ ನಾಗರಾಜ್, ಇನ್ನರ್ ವೀಲ್‌ ಅಧ್ಯಕ್ಷ ರೇಖಾ ಶಿವಕುಮಾರ್, ಸಂಜನ್ ನಾಗರಾಜ್‌ ಗುರು, ಚಂದ್ರಕಲಾ ಮತ್ತಿತರರು ಇದ್ದರು.