ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಇಡೀ ವಿಶ್ವಕ್ಕೆ ಶ್ರೇಷ್ಠ ಸಂದೇಶ ನೀಡುವ ಮೂಲಕ ಮಾದರಿಯಾಗಿ ನಿಂತಿವೆ. ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವಾಲ್ಮೀಕಿಯವರಲ್ಲಿ ಕವಿತ್ವ ಭಾವನೆಯಿತ್ತು ಎಂದು ಗೌರವ ಕಾರ್ಯದರ್ಶಿ ಮಾಧವ ಗುಡಿ ಹೇಳಿದರು.ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ ಎಂಬ ಮಹಾಕಾವ್ಯವು ಅವರ ಕವಿತ್ವಕ್ಕೆ ಸಾಕ್ಷಿಯಾಗಿ ನಿಂತ, ಭಾರತೀಯರು ಹೆಮ್ಮೆಪಡುವ ಶ್ರೇಷ್ಠ ಕೃತಿಯಾಗಿ ಹೊರಹೊಮ್ಮಿದೆ. ಮಾನವೀಯ ಮೌಲ್ಯಗಳು, ಪ್ರಜಾಸತ್ತಾತ್ಮಕ ರಾಜನೀತಿ ಅಂಶಗಳು, ಸಹೋದರತೆಯ ಭಾವನೆಯನ್ನು ಈ ಕಾವ್ಯ ನಮಗೆಲ್ಲ ಪರಿಚಯಿಸಿದೆ. ರಾಮಾಯಣ ಮಹಾಕಾವ್ಯದಲ್ಲಿ ಅವರು ನೀಡಿದ ಸಂದೇಶಗಳು ನಮಗೆಲ್ಲ ಮಾದರಿಯಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.
ಮುಖ್ಯ ಅತಿಥಿ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಲವ- ಕುಶರಿಗೆ ಗುರುವಾಗಿದ್ದ ವಾಲ್ಮೀಕಿ ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಬಹು ದೊಡ್ಡ ಸಂದೇಶ ನೀಡಿ ಹೋಗಿದ್ದಾರೆ. ಅದರಲ್ಲಿನ ತತ್ವಾದರ್ಶಗಳು ಇಂದು ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಸಾಪ ನಗರ ಘಟಕದ ಗೌರವ ಅಧ್ಯೆಕ್ಷೆ ಜಯಶ್ರೀ ಹಿರೇಮಠ, ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ವಾಲ್ಮೀಕಿ ಕೇವಲ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಬದಲಾಗಿ ಅವರು ಇಡೀ ನಾಡಿಗೆ ಸೇರಿದವರು ಎಂದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಅರ್ಜುನ ಶಿರೂರ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಜಿ.ಎಸ್.ಬಳ್ಳೂರ, ಶಾಂತಾ ವಿಭೂತಿ, ಡಾ. ಸಂಗಮೇಶ ಮೇತ್ರಿ, ರವಿ ಕಿತ್ತೂರ, ಸಿದ್ದು ಮಾನೆ, ತೇಜಸ್ವಿನಿ ವಾಂಗಿ, ಉದಯಕುಮಾರ ವಾಂಗಿ, ಧರು ಕಿಲಾರಿ, ಅಶೋಕ ಸಿರಗುಪ್ಪಿ ಸೇರಿದಂತೆ ಮುಂತಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))