ಸಾರಾಂಶ
ಚಿಕ್ಕಮಗಳೂರು, ತಾವು ನಾಲ್ಕೈದು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡುವಂತೆ ಅಜ್ಜಂಪುರ ತಾಲೂಕಿನ ರಂಗಾಪುರದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾವು ನಾಲ್ಕೈದು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡುವಂತೆ ಅಜ್ಜಂಪುರ ತಾಲೂಕಿನ ರಂಗಾಪುರದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ದೇವರಾಜ ಅರಸು ವಿಚಾರ ವೇದಿಕೆ ಉಪಾಧ್ಯಕ್ಷ ಸಿ.ಆರ್. ಬಸವರಾಜ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರನ್ನು ಗುರುವಾರ ಭೇಟಿ ಮಾಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು.ಹಿಂದುಳಿದ ನಾಯಕ್ ಸಮುದಾಯಕ್ಕೆ ಸೇರಿರುವ ನಾವುಗಳು ರಂಗಾಪುರದ ಸರ್ವೇ ನಂ. 6 ಮತ್ತು 138 ರಲ್ಲಿ ತಲಾ 3 ಎಕರೆ ಭೂಮಿಯನ್ನು 40-50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಅತ್ಯಂತ ಕಡು ಬಡವರಾದ ನಮಗೆ ಆ ಭೂಮಿ ಯನ್ನು ಬಿಟ್ಟರೆ ಬದುಕಿಗೆ ಬೇರೆ ಯಾವುದೇ ಆಧಾರವಿಲ್ಲ, ಆ ಭೂಮಿಯನ್ನೇ ನಂಬಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.ನಾವು ಬದುಕನ್ನು ಕಟ್ಟಿಕೊಂಡಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಅಧಿಕಾರಿಗಳು ಇದೀಗ ಹೇಳುತ್ತಿದ್ದು ಸರಿಯಾಗಿ ಅಳತೆ ಮಾಡದೆ ನಮ್ಮ ಜಮೀನಿಗೆ ಚೆಕ್ ಬಂದಿ ನೀಡದೆ ಸಾಗುವಳಿ ಚೀಟಿ ವಿತರಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಜಪ್ಪ, ಹನುಮಂತಪ್ಪ, ಮೂರ್ತಪ್ಪ, ಜಯಮ್ಮ, ಚಂದ್ರಮ್ಮ, ಲಕ್ಷ್ಮಮ್ಮ, ರತ್ನಮ್ಮ, ಶಿವಪ್ಪ, ಜಯಪ್ಪ, ಶಾರದಾ ಓಂಕಾರಪ್ಪ, ಶಕುಂತಲಾ ಹಾಗೂ ದಸಂಸ ಮುಖಂಡ ಗಂಗಾಧರ್ ಹಾಜರಿದ್ದರು. 5 ಕೆಸಿಕೆಎಂ 2ಸಾಗುವಳಿ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಅಜ್ಜಂಪುರ ತಾಲೂಕಿನ ರಂಗಾಪುರದ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.