ಕನ್ನಡಪ್ರಭ ವಾರ್ತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ (ಜಿ.ಟಿ) ಫೈನಲ್ ಪಂದ್ಯಾವಳಿ ವೇಳೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಐಪಿಎಲ್ ಫೈನಲ್ ಪಂದ್ಯಾವಳಿಯ ವೇಳೆ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದರು. ಅಲ್ಲದೇ ನಗರದ ಮಾಲ್‌ಗಳಲ್ಲಿ ಓಪನ್ ಸ್ಕ್ರೀನಿಂಗ್‌ನಲ್ಲಿ ಪಂದ್ಯ ವೀಕ್ಷಣೆಗೂ ಪೊಲೀಸರು ನಿಷೇಧಿಸಿದ್ದರು. ಕಳೆದ ವರ್ಷ ಆರ್‌ಸಿಬಿ ಫೈನಲ್ ಪಂದ್ಯಾ ಗೆದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆ ಸಾವಿರಾರು ಕ್ರಿಕ್ರೇಟ್ ಪ್ರೇಮಿಗಳು ಜಮಾಯಿಸಿದ್ದರು. ಚಿನ್ನಸ್ವಾಮಿ ಗೇಟ್ ಬಳಿ ತಳ್ಳಾಟ ಮತ್ತು ನೂಕಾಟ ಉಂಟಾಗಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಆರ್‌ಸಿಬಿ ಅಂತಿಮ ಪಂದ್ಯದ ವೇಳೆ ಸಂಭ್ರಮಾಚರಣೆ ಮಾಡದಂತೆ ತೀವ್ರ ಕಟ್ಟೆಚ್ಚರ ವಹಿಸಿತ್ತು.ನಿಯಮ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು. ಅಲ್ಲದೇ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಮಾರತ್ತಹಳ್ಳಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಹೆಚ್ಚಾಗಿ ಪಬ್, ಬಾರುಗಳು ಇರುವ ಕಡೆ ಪೊಲೀಸರು ರೌಂಡ್ಸ್ (ಗಸ್ತು ) ತಿರುಗುತ್ತಿದ್ದರು. ಆಯಾ ವಲಯದ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಒದಗಿಸಲಾಗಿತ್ತು. ಸಂಚಾರ ಪೊಲೀಸರನ್ನೂ ಕೂಡ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗಿತ್ತು. ಮುನ್ನೇಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಪ್ಲೈಓವರ್‌ಗಳನ್ನು ಬಂದ್ ಮಾಡಲಾಗಿತ್ತು. ನಿಯಮ ಮೀರಿ ರಸ್ತೆಗೆ ಇಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಕೆಲವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿದ್ದಾರೆ.ಮಾಲ್‌ಗಳಲ್ಲಿ ಐಪಿಎಲ್ ಫೈನಲ್
ಲೈವ್ ಸ್ಕ್ರೀನಿಂಗ್‌ಗೆ ನಿಷೇಧನಗರದಲ್ಲಿ ಓಪನ್ ಸ್ಕ್ರೀನಿಂಗ್‌ಗೆ ಹಾಗೂ ಮಾಲ್‌ಗಳಲ್ಲಿ ಲೈವ್ ಸ್ಕ್ರೀನಿಂಗ್‌ನಲ್ಲಿ ಪಂದ್ಯ ವೀಕ್ಷಣೆಗೂ ಪೊಲೀಸರು ನಿಷೇಧಿಸಿದ್ದರು. ಲೈವ್ ಸ್ಕ್ರೀನಿಂಗ್ ಮಾಡದಂತೆ ಪೊಲೀಸರು ಮಾಲ್‌ಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಹೀಗಾಗಿ ಲೈವ್ ಸ್ಕ್ರೀನಿಂಗ್ ಮಾಡಲು ಮಾಲ್‌ನವರು ಹಿಂದೇಟು ಹಾಕಿದ್ದರು.ಕಳೆದ ಸಲ ಹುಚ್ಚಾಟ ಮಾಡಿದ್ದ
ಆರ್‌ಸಿಬಿಯ ಅಭಿಮಾನಿಗಳು:ಕಳೆದ ವರ್ಷ ಆರ್‌ಸಿಬಿ ಅಂತಿಮ ಪಂದ್ಯ ಗೆದ್ದ ಸಂದರ್ಭದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಟೀ ಶರ್ಟ್ ಕಳಚಿ ತಿರುಗಿಸುವುದು, ಮದ್ಯಪಾನ ಮಾಡಿ ಕೂಗಾಟ ಮಾಡುವುದು, ರಸ್ತೆ ಮಧ್ಯದಲ್ಲಿಯೇ ಸಂಭ್ರಮಾಚರಣೆ ಮಾಡುವುದು, ಪೊಲೀಸ್ ಬ್ಯಾರಿಕೇಡ್‌ಗಳನ್ನು ವಾಹನಗಳಿಗೆ ಕಟ್ಟಿಕೊಂಡು ಎಳೆದುಕೊಂಡು ಹೋಗುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಈ ಬಾರಿ ಆ ರೀತಿಯ ಹುಚ್ಚಾಟಗಳಿಗೆ ಬ್ರೇಕ್ ಹಾಕಿದ್ದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯಯೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಯನ್ನು ನಡೆಸಿದ್ದಾರೆ.ಐಪಿಎಲ್ ಫೈನಲ್ ಪಂದ್ಯಾವಳಿ ವೇಳೆ ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದರು. ಆಯಾ ವಲಯದ ಡಿಸಿಪಿಗಳು ನೇತೃತ್ವದಲ್ಲಿ ಜನನಿಬಿಡ ಪ್ರದೇಶದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಫ್ಲೈಓವರ್‌ಗಳ ಮೇಲೆ ಸಂಚಾರ ನಿರ್ಬಂಧಿಸಲಾಗಿತ್ತು. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. -ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ